ರವೀಂದ್ರ ಕಲಾಕ್ಷೇತ್ರ - ನಾಡಿನ ಹೆಸರಂತ ಸಾಂಸ್ಕೃತಿಕ ಚಟುವಟಿಕೆಗಳ ತಾಣ. ರಾಜ್ಯದ ಸುಸಜ್ಜಿತ ರಂಗ ಮಂದಿರಗಳಲ್ಲಿ ಒಂದಾದ ರವೀಂದ್ರ ಕಲಾಕ್ಷೇತ್ರಕ್ಕೆ ಈಗ ಅರ್ಧಶತಮಾನದ ಆಸುಪಾಸಿನ ವಯಸ್ಸು.

ಭಾರತೀಯರಿಗೆ ಮೊದಲ ಸಾಹಿತ್ಯ ನೋಬೆಲ್ ಪುರಸ್ಕಾರ ತಂದುಕೊಟ್ಟು ಗುರುದೇವ ರವೀಂದ್ರ ಟ್ಯಾಗೋರರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ದೇಶದಾದ್ಯಂತ ರವೀಂದ್ರರ ನೆನಪಲ್ಲಿ ರಂಗ ಮಂದಿರಗಳನ್ನು ನಿರ್ಮಿಸಬೇಕೆಂಬ ಸಲಹೆಯನ್ನು ಕೊಟ್ಟವರು ಕನ್ನಡತಿ ಕಮಲಾದೇವಿ ಚಟ್ಟೋಪಾಧ್ಯಾಯ.

ಸಾಂಸ್ಕೃತಿಕ ಕ್ಷೇತ್ರ ಅನುಪಮ ಸೇವೆ ಸಲ್ಲಿಸಿದ ಗುರುದೇವರನ್ನು ಗೌರವಿಸಲು ಕಲಾಕ್ಷೇತ್ರಗಳನ್ನು ರಾಷ್ಟ್ರಾದ್ಯಂತ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಯಿತು. ಹೀಗಾಗಿ ರವೀಂದ್ರ ನಾಟ್ಯ ಮಂದಿರ, ರವೀಂದ್ರ ರಂಗಮಂದಿರ ಮೊದಲಾದ ಕಲಾಕ್ಷೇತ್ರಗಳು ತಲೆಎತ್ತಿದವು. ಆಗ ಕುಡಿಯೊಡದಿದ್ದೇ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ.

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕಲಾಕ್ಷೇತ್ರ ನಿರ್ಮಾಣ ಕುರಿತಂತೆ ಸೂಚನೆ ಇತ್ತಾಗ ಮುಖ್ಯಮಂತ್ರಿ ಯಾಗಿದ್ದವರು ಬಿ.ಡಿ. ಜತ್ತಿ. ಪುರಭವನದ ಪಕ್ಕದಲ್ಲಿದ್ದ ಕೊಳಗೇರಿಯಲ್ಲಿ ಕಲಾಕ್ಷೇತ್ರ ನಿರ್ಮಿಸಲು ಸರ್ಕಾರ ತೀರ್ಮಾನಿಸಿತು. ಇದಕ್ಕೆ ಎಲ್ಲಾ ಏರ್ಪಾಡುಗಳು ನಡೆದಿದ್ದಾಗ ಎಸ್. ನಿಜಲಿಂಗಪ್ಪನವರು ಮುಖ್ಯಮಂತ್ರಿ ಗಾದಿಗೆ ಬಂದರು.

ಅಮೆರಿಕದ ಖ್ಯಾತ ವಾಸ್ತು ಶಿಲ್ಪಿ ಚಾರ್ಲ್ಸ್ ವಿಲ್ಸನ್ ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. ಆಗ ಕರ್ನಾಟಕ (ಮೈಸೂರು) ಲೋಕೋಪಯೋಗಿ ಇಲಾಖೆಯ ಮುಖ್ಯವಾಸ್ತು ಶಿಲ್ಪಿಯಾಗಿದ್ದವರು ಬಿ.ಆರ್. ಮಾಣಿಕ್ಯಂ. ಇವರಿಬ್ಬರ ಮುಂದಾಳುತನದಲ್ಲಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ರೂಪುರೇಷೆಗಳು ಅಂತಿಮಗೊಂಡವು.

ಸರ್ಕಾರದ ಕಟ್ಟಡವಾದರೂ ಸಾರ್ವಜನಿಕರೂ ಇದರಲ್ಲಿ ಕೈಜೋಡಿಸಬೇಕೆಂಬ ಉದ್ದೇಶದಿಂದ ಕಲಾಕ್ಷೇತ್ರ ನಿರ್ಮಾಣ ಸಮಿತಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನವರ ಅಧ್ಯಕ್ಷತೆಯಲ್ಲಿ ರಚನೆಯಾಯಿತು. ಸಹಾಯಾರ್ಥ ಪ್ರದರ್ಶನಗಳ ಮೂಲಕ ಹಣ ಸಂಗ್ರಹಿಸುವ ಸಮಿತಿಯ ನಿರ್ಧಾರಕ್ಕೆ ಸಾರ್ವಜನಿಕರು ಸ್ಪಂದಿಸಿದರು. ಚಲನಚಿತ್ರ ಮಂದಿರಗಳಲ್ಲಿ ಶಾಲಾ ಮಕ್ಕಳಿಗೆ ಬೆನಿಫಿಟ್ಷೋ ಹಾಕಿ ಹಣ ಎತ್ತಲಾಯಿತು.

ತಮಿಳು ರಂಗಭೂಮಿ ಹಾಗೂ ಚಲನಚಿತ್ರ ನಟರಾಗಿದ್ದ ಶಿವಾಜಿ ಗಣೇಶನ್ ಕನ್ನಡನಾಡಿನೊಡನೆ ಅವಿನಾಭಾವ ಸಂಬಂಧ ಹೊಂದಿದ್ದರು. ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದ ಶಿವಾಜಿ ತಮ್ಮ ರಂಗತಂಡದೊಂದಿಗೆ ಕಂಠೀರವ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯವೀರ `ಪಾಂಡ್ಯ ಕಟ್ಟ ಬೊಮ್ಮನ್~ ನಾಟಕವನ್ನು ಪ್ರದರ್ಶಿಸಿ ಅದರಿಂದ ಸಂಗ್ರಹವಾದ ಹಣವನ್ನು ಕಲಾಕ್ಷೇತ್ರ ನಿರ್ಮಾಣಕ್ಕೆ ನೀಡಿದರು.

1963 ಮಾರ್ಚ್ 12 ರಂದು ಮೈಸೂರು ಅರಸರೂ, ಆಗ ರಾಜ್ಯದ ರಾಜ್ಯಪಾಲರೂ ಆಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಹಾಗೂ ಸಾಂಸ್ಕೃತಿಕ ಸಚಿವರಾಗಿದ್ದ ಹುಮಾಯೂನ್ ಕಬೀರ್ ಅವರು ರವೀಂದ್ರ ಕಲಾಕ್ಷೇತ್ರವನ್ನು ಉದ್ಘಾಟಿಸಿದರು.

ಬೆಂಗಳೂರಿನಲ್ಲಿ ಆ ವೇಳೆಗಾಗಲೇ ವೃತ್ತಿ ನಾಟಕ ಕಂಪೆನಿಗಳು ರಂಗ ಮಂದಿರಗಳನ್ನು ಹೊಂದಿದ್ದವು. (ಈಗ ಅವೆಲ್ಲಾ ಚಿತ್ರಮಂದಿರ - ವಾಣಿಜ್ಯ ಸಮುಚ್ಛಯಗಳಾಗಿವೆ) ಹವ್ಯಾಸಿ ನಾಟಕ ಸಂಘಗಳು ಬಸವನಗುಡಿ, ಮಲ್ಲೇಶ್ವರಂಗಳ ಕಾಲೇಜು ಸಭಾಂಗಣಗಳನ್ನು ಆಶ್ರಯಿಸಿದ್ದವು. ಅಷ್ಟೇನು ಖರ್ಚಿಲ್ಲದೆ ನಾಟಕವಾಡುತ್ತಿದ್ದವರಿಗೆ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ದುಬಾರಿ ಎನ್ನಿಸಿರಬೇಕು. ಮೊದಮೊದಲಿಗೆ ಕಲಾಕ್ಷೇತ್ರ `ಖಾಲಿ~ಕ್ಷೇತ್ರವಾಗಿಯೇ ಉಳಿದಿತ್ತು.

ವೃತ್ತಿ ನಾಟಕ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಕಲಾಕ್ಷೇತ್ರ ನಿರ್ಮಾಣಗೊಂಡಿದ್ದೂ ಹವ್ಯಾಸಿಗಳು ಬರಲು ಹಿಂದೇಟು ಹಾಕಿದ್ದಕ್ಕೆ ಇನ್ನೊಂದು ಕಾರಣ. ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿರಬೇಕಿದ್ದ ಕಲಾಕ್ಷೇತ್ರದಲ್ಲಿ ಸರ್ಕಾರಿ ಕಾರ್ಯಕ್ರಮಗಳು, ಸಂಘ ಸಂಸ್ಥೆಗಳ ವಾರ್ಷಿಕೋತ್ಸವಗಳಿಗೆ ಸೀಮಿತವಾಯಿತು.

ರಂಗ ಮಂದಿರಗಳ ವ್ಯವಸ್ಥೆಗಳಲ್ಲಿ ಅನೇಕ ಆವಿಷ್ಕಾರಗಳಾಗುತ್ತಿದ್ದರೂ ರವೀಂದ್ರ ಕಲಾಕ್ಷೇತ್ರಕ್ಕೆ ಅವು ತೆರೆದುಕೊಂಡಿರಲಿಲ್ಲ. ಪ್ರೇಕ್ಷಕರನ್ನು ಹಾಗೂ ಸಾಂಸ್ಕೃತಿಕ ಪ್ರೇಮಿಗಳನ್ನು ಕಲಾಕ್ಷೇತ್ರಕ್ಕೆ ಸೆಳೆಯುವ ಉದ್ದೇಶದಿಂದ ಸಂಗೀತ ನಾಟಕ ಅಕಾಡೆಮಿಯನ್ನು ಕಲಾಕ್ಷೇತ್ರದಲ್ಲಿ ನೆಲೆಗೊಳಿಸಲಾಯಿತು. ಯುವಜನ ಮತ್ತು ಕ್ರೀಡಾ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದ ಕಲಾಕ್ಷೇತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಧಿಗೆ ತರಲಾಯಿತು.

ವಿದೇಶಿ ಸಾಂಸ್ಕೃತಿಕ ತಂಡವೊಂದು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನೀಡಿದ ಸಂದರ್ಭದಲ್ಲಿ ಉಪಯೋಗಿಸಿದ ಬೆಳಕಿನ ವಿನ್ಯಾಸವೇ ಕಲಾಕ್ಷೇತ್ರದಲ್ಲಿ ಕಾಯಂ ಬೆಳಕು ವ್ಯವಸ್ಥೆ ರೂಪುಗೊಳ್ಳಲು ಕಾರಣವಾಯಿತು. ಆವರೆಗೆ ಇಲ್ಲಿ ಬೆಳಕಿನ ಕೊಠಡಿಯೂ ಇರಲಿಲ್ಲ.

ದೇಶ ವಿದೇಶಗಳ ಸಾಂಸ್ಕೃತಿಕ ತಂಡಗಳು ಕಲಾಕ್ಷೇತ್ರದಲ್ಲಿ ತಮ್ಮ ಪ್ರದರ್ಶನಕ್ಕೆ ಅಗತ್ಯ ಪರಿಕರಗಳನ್ನು ಬೇಕಾದ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದ ಸನ್ನಿವೇಶಗಳು ಕಲಾಕ್ಷೇತ್ರದ ಕಾಯಂ ವ್ಯವಸ್ಥೆಗೆ ಪೂರಕವಾದವು. ಅತ್ಯಾಧುನಿಕ ಸೌಲಭ್ಯಗಳನ್ನು ರವೀಂದ್ರ ಕಲಾಕ್ಷೇತ್ರ ಒಳಗೊಂಡು ದೇಶದ ಅತ್ಯುತ್ತಮ ರಂಗಮಂದಿರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಮೊದಮೊದಲು ಅಧಿಕಾರಷಾಹಿಯ ಅವಕೃಪೆಗೆ ಒಳಗಾಗಿ ಸೊರಗಿದ್ದು ಮುಚ್ಚಿದ್ದು ಸುಳ್ಳಲ್ಲ.

ಈಗ ಕನ್ನಡ ಭವನ ನಿರ್ಮಾಣ ಜಾಗದಲ್ಲಿ ಸಂಗೀತ ನಾಟಕ ಅಕಾಡೆಮಿ ಕಚೇರಿ ನಿರ್ಮಿಸಲು ನಿಗದಿಯಾಗಿತ್ತು. ಸಂಜಯ್ ಗಾಂಧಿ ಜನ್ಮ ದಿನೋತ್ಸವಕ್ಕಾಗಿ ಅಲ್ಲೊಂದು ವಸ್ತುಪ್ರದರ್ಶನ ನಡೆಸಲು ಸರ್ಕಾರ ಮುಂದಾದಾಗ ರಂಗಕರ್ಮಿಗಳು ಒಟ್ಟಾಗಿ ವಿರೋಧ ವ್ಯಕ್ತ ಮಾಡಿದರು.

ಕಲಾಕ್ಷೇತ್ರದ ವ್ಯವಸ್ಥೆ ರೂಪಿಸಲು ಆಧುನಿಕ ಸೌಲಭ್ಯ ಅಳವಡಿಸಲು ಅನೇಕ ಬಾರಿ ರಂಗತಂಡಗಳು - ಸರ್ಕಾರದ ನಡುವೆ ಜಟಾಪಟಿ ನಡೆದು ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಧರಣಿ, ಪ್ರತಿಭಟನೆಗಳು ಜರುಗಿವೆ. ದುರಸ್ತಿಗಾಗಿ ಕಲಾಕ್ಷೇತ್ರ ಮುಚ್ಚಿದಾಗ ಕಲಾಕ್ಷೇತ್ರದ ಬದಿಯಲ್ಲಿ ತಾತ್ಕಾಲಿಕ ಕಲಾಕ್ಷೇತ್ರವನ್ನು ರಂಗ ತಂಡಗಳು ಆರಂಭಿಸಿದ ನಿದರ್ಶನಗಳೂ ಇವೆ.

ರವೀಂದ್ರ ಕಲಾಕ್ಷೇತ್ರ 1980ರ ದಶಕದಲ್ಲಿ ರಾಷ್ಟ್ರದ ಅತ್ಯುತ್ತಮ ರಂಗ ಮಂದಿರವೆಂಬ ಖ್ಯಾತಿಗೆ ಕಾರಣವಾಯಿತು. ಅದಕ್ಕೆ ಸಾರ್ಕ್ ಸಮಾವೇಶ ಹಾಗೂ ರಷ್ಯಾ ಉತ್ಸವ ಕಾಲಕ್ಕೆ ಅತ್ಯಾಧುನಿಕವಾಗಿ ಸಜ್ಜುಗೊಳಿಸಿದ್ದು ಮುಖ್ಯ ಕಾರಣ. ಆಗಲೇ ಕಲಾಕ್ಷೇತ್ರದಲ್ಲಿ ಹವಾ ನಿಯಂತ್ರಣ ವ್ಯವಸ್ಥೆ ಕೂಡ ಬಂದಿದ್ದು.

ಪುಟ್ಟಣ್ಣಶೆಟ್ಟಿ ಪುರಭವನದಿಂದ ಕನ್ನಡ ಭವನದವರೆಗಿನ ಕೊಳಗೇರಿಯೆಲ್ಲಾ ಈಗ ಮಾಯ. ಈಗ ಅದೊಂದು ಸಾಂಸ್ಕೃತಿಕ ಸಮುಚ್ಛಯ. ಕಲಾಕ್ಷೇತ್ರದ ಹಿಂದೆ ಸಂಸ ಬಯಲು ರಂಗ ಮಂದಿರವಿದೆ. ಪಕ್ಕದಲ್ಲಿ ತಾಲೀಮು ಕೊಠಡಿಗಳುಂಟು. ಪುಸ್ತಕ ಪ್ರಾಧಿಕಾರದ ಪುಸ್ತಕ ಮಳಿಗೆ. ಕಣ್ಣಿಗೆ ಮುದ ಕೊಡುವ ಶಿಲ್ಪೋದ್ಯಾನ. ಕನ್ನಡ ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಅಕಾಡೆಮಿ ಕಚೇರಿಗಳೊಂದಿಗೆ `ನಯನ~ ಸೇರಿ ಹಲವು ಸಭಾ ಗೃಹಗಳು ಸಾಂಸ್ಕೃತಿಕ ಚಟುವಟಿಕೆಗಳಿಗೆ ರಂಗುತುಂಬಿವೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವೂ ಸೇರಿ ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಈಗ ರವೀಂದ್ರ ಕಲಾಕ್ಷೇತ್ರ ಅನಿವಾರ್ಯ. ದೇಶವಿದೇಶಗಳ ನಾಟಕ ಪ್ರದರ್ಶನಗಳಿಗೆ ನೃತ್ಯ ಕಾರ್ಯಕ್ರಮಗಳಿಗೆ ಕಲಾಕ್ಷೇತ್ರವೇ ತಾಣ.
ಕಲಾಜೀವಂತಿಕೆಯನ್ನೂ, ಸಾಂಸ್ಕೃತಿಕ ಸ್ಮರಣೆಗಳಿಂದ ಕೂಡಿರುವ ಕಲಾಕ್ಷೇತ್ರಕ್ಕೆ ಈಗ ಚಿನ್ನದ ಮೆರುಗು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.