ಬೆಂಗಳೂರು: ಹೋಟೆಲ್ನಲ್ಲಿ ಮೊಬೈಲ್ನಿಂದ ಯುವತಿಯ ಆಕ್ಷೇಪಾರ್ಹ ಛಾಯಾಚಿತ್ರ ತೆಗೆದ ಆರೋಪ ಎದುರಿಸುತ್ತಿರುವ ಎಡಿಜಿಪಿ ಡಾ.ಪಿ.ರವೀಂದ್ರನಾಥ್ ಅವರ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಶುಕ್ರವಾರ ತನಿಖೆ ಆರಂಭಿಸಿದ್ದಾರೆ.

ನಗರದ ಕನ್ನಿಂಗ್ಹ್ಯಾಂ ರಸ್ತೆಯಲ್ಲಿರುವ ಒ ಬೊ ಪೆ ಹೋಟೆಲ್ಗೆ ಮಧ್ಯಾಹ್ನ ಭೇಟಿ ನೀಡಿದ ಸಿಐಡಿ (ಆಡಳಿತ) ಡಿಐಜಿ ಸೌಮೇಂದು ಮುಖರ್ಜಿ, ಸೈಬರ್ ಅಪರಾಧ ವಿಭಾಗದ ಎಸ್ಪಿ ಡಾ.ಡಿ.ಸಿ. ರಾಜಪ್ಪ ಅವರ ನೇತೃತ್ವದ ಸಿಬ್ಬಂದಿ ತಂಡವು ಹೋಟೆಲ್ನ ಸಿ.ಸಿ ಟಿ.ವಿ ಕ್ಯಾಮೆರಾಗಳ ಹಾರ್ಡ್ ಡಿಸ್ಕ್ ವಶಕ್ಕೆ ತೆಗೆದುಕೊಂಡಿತು.

ಅಲ್ಲದೆ, ಹೋಟೆಲ್ನ ಕೆಲಸಗಾರರ ವಿಚಾರಣೆ ನಡೆಸಿ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿತು. ಬಳಿಕ ಹೈಗ್ರೌಂಡ್ಸ್ ಠಾಣೆಗೆ ಬಂದ ತನಿಖಾಧಿಕಾರಿಗಳು ಘಟನಾ ದಿನ ರವೀಂದ್ರನಾಥ್ ಅವರನ್ನು ಹೊಯ್ಸಳ ವಾಹನದಲ್ಲಿ ಠಾಣೆಗೆ ಕರೆತಂದಿದ್ದ ಎಸ್ಐ ರವಿ ಹಾಗೂ ಕಾನ್ಸ್ಟೆಬಲ್ಗಳ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡರು.

ಇದಕ್ಕೂ ಮುನ್ನ ಮಧ್ಯಾಹ್ನ 12.15ರ ಸುಮಾರಿಗೆ ನೃಪತುಂಗ ರಸ್ತೆಯಲ್ಲಿನ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಬಂದ ರವೀಂದ್ರನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಎಡಿಜಿಪಿ ಮೇಘರಿಖ್ ಅವರು ನನ್ನ ಅನುಪಸ್ಥಿತಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಪ್ರಕ್ರಿಯೆ ನಿಯಮದ ಪ್ರಕಾರ ನಡೆದಿಲ್ಲ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮಾ ಪಚಾವೊ ಅವರನ್ನು ಭೇಟಿಯಾಗಿ ಸ್ಪಷ್ಟನೆ ಕೋರುತ್ತೇನೆ’ ಎಂದರು.

ನಂತರ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಕಟ್ಟಡದ ಒಂದನೆ ಅಂತಸ್ತಿನಲ್ಲಿರುವ ತಮ್ಮ ಕಚೇರಿಗೆ ಹೋದರು. ಬಳಿಕ ಪಕ್ಕದ ಮೇಘರಿಖ್ ಅವರ ಕಚೇರಿಗೆ ಹೋಗಿ ನಾಲ್ಕೈದು ನಿಮಿಷ ಮಾತನಾಡಿ ಹೊರ ಬಂದ ಅವರು ಪಚಾವೊ ಅವರ ಕೊಠಡಿಗೆ ತೆರಳಿ 15 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿದರು.

ಆ ನಂತರ ತಮ್ಮ ಕಚೇರಿಗೆ ಹಿಂದಿರುಗಿದ ರವೀಂದ್ರನಾಥ್ ಅವರು ಅಲ್ಲಿದ್ದ ಕೆಲ ಕಡತಗಳು ಮತ್ತು ಪುಸ್ತಕಗಳನ್ನು ತೆಗೆದುಕೊಂಡು ಹೊರ ಬಂದು, ‘ಮೇಘರಿಖ್ ಅವರು ನಿಯಮದ ಪ್ರಕಾರವೇ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ’ ಎಂದು ತಿಳಿಸಿದರು

‘ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಅವರು ವೃತ್ತಿಪರ ಅಧಿಕಾರಿ. ಆದರೆ, ಅವರಿಗೆ ನನ್ನ ವಿರುದ್ಧ ವೈಯಕ್ತಿಕ ದ್ವೇಷವಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಯುವತಿಯ ಛಾಯಾಚಿತ್ರ ಸಹ ತೆಗೆದಿಲ್ಲ ಎಂಬ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ’ ಎಂದರು.

‘ಈಗಾಗಲೇ ಎಡಿಜಿಪಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದೇನೆ. ಆ ಬಗ್ಗೆ ಗೃಹ ಸಚಿವರು ನಾಲ್ಕೈದು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಆವರೆಗೂ ಕಾಯುತ್ತೇನೆ. ರಾಜೀನಾಮೆ ಅಂಗೀಕರಿಸದೆ ಹೊಸ ಹುದ್ದೆ ಸೂಚಿಸಿದರೆ ಸೇವೆಯಲ್ಲಿ ಮುಂದುವರಿಯಲು ಮಾನಸಿಕವಾಗಿ ಕಷ್ಟವಾಗುತ್ತದೆ. ಪೊಲೀಸ್ ಸೇವೆಯ ಕೊನೆಯ ದಿನಗಳಲ್ಲಾದರೂ ನನಗೆ ನೆಮ್ಮದಿಯಿಂದ ನಿರ್ಗಮಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು’ ಎಂದು ಹೇಳಿದರು.

ನೋಟಿಸ್ ಜಾರಿ
ದೂರು ನೀಡಿದ್ದ ಯುವತಿ ಮತ್ತು ಹೋಟೆಲ್ನಲ್ಲಿ ಅವರ ರಕ್ಷಣೆಗೆ ಬಂದಿದ್ದರು ಎನ್ನಲಾದ ಶ್ರೀಧರ್ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ನ ಸಿ.ಸಿ ಕ್ಯಾಮೆರಾಗಳು ಘಟನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂದು ಕೆಲಸಗಾರರ ವಿಚಾರಣೆಯಿಂದ ಗೊತ್ತಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ವಿಫಲವಾಗಿಲ್ಲ
ಪ್ರಕರಣವನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿಲ್ಲ. ಪೊಲೀಸ್ ಇಲಾಖೆಯಲ್ಲಿ ಒಳ ಜಗಳ ಇಲ್ಲ. ಆದರೆ, ಪೊಲೀಸ್ ಇಲಾಖೆ ಶಿಸ್ತಿನಿಂದ ಕೂಡಿರಬೇಕು. ಅಶಿಸ್ತು ಸಹಿಸಲ್ಲ. ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ
–ಸಿದ್ದರಾಮಯ್ಯ, ಮುಖ್ಯಮಂತ್ರಿಗಳು

ಪ್ರಕರಣ ದಾಖಲು
ರವೀಂದ್ರನಾಥ್ ಅವರು ಗುರುವಾರ ನೀಡಿದ್ದ ದೂರು ಆಧರಿಸಿ ಕಬ್ಬನ್ಪಾರ್ಕ್ ಪೊಲೀಸರು ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್, ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ ಹಾಗೂ ಹೈಗ್ರೌಂಡ್ಸ್ ಠಾಣೆ ಎಸ್ಐ ರವಿ ಅವರ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡದವರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ–1989ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.