ಶನಿವಾರ, ಮಾರ್ಚ್ 28, 2020
19 °C

`ರಾಗಾನುರಾಗ'ದ ಸಂಭ್ರಮದಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾ ಪ್ರೇಮಿ ಸಂಸ್ಥೆಯು ತನ್ನ 5ನೇ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗಷ್ಟೆ ಮಲ್ಲೇಶ್ವರದಲ್ಲಿರುವ ಸೇವಾ ಸದನದ ಸಭಾಂಗಣದಲ್ಲಿ   `ರಾಗಾನುರಾಗ' ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಶಾಸ್ತ್ರೀಯ ಸಂಗೀತದ ರಾಗಗಳ ಬಗ್ಗೆ ನವ್ಯ ನೋಟವನ್ನು ಬೀರಿದ ಈ ಕಾರ್ಯಕ್ರಮವನ್ನು ಶತಾವಧಾನಿ ಡಾ. ಗಣೇಶ್ ಮತ್ತು ವಿದುಷಿ ರಂಜನಿ ವಾಸುಕಿ ಅವರು ನಡೆಸಿಕೊಟ್ಟರು.ಕರ್ನಾಟಕ ಶಾಸ್ತ್ರೀಯ ಸಂಗೀತದ ಮೋಹನ ರಾಗದಿಂದ ಗಣೇಶ್ ಅವರು ಕಾರ್ಯಕ್ರಮ ಆರಂಭಿಸಿದರು. ರಂಜನಿಯವರು ಈ ರಾಗದಲ್ಲಿ ರಚಿಸಿರುವ ತ್ಯಾಗರಾಜರ `ಯವರುರಾ ನಿನುವಿನಾ' ಎಂಬ ಕೃತಿಯನ್ನು ಹಾಡಿತೋರಿಸಿದರು. ಒಂದು ರಾಗದ ಆರೋಹಣ ಮತ್ತು ಇನ್ನೊಂದು ರಾಗದ ಅವರೋಹಣವನ್ನು ಸೇರಿಸಿದಾಗ ಹೊಸದೊಂದು ರಾಗ ಸೃಷ್ಟಿಯಾಗುತ್ತದೆ ಎಂದು ರಾಗಗಳ ಬಗ್ಗೆ ವಿವರಣೆ ನೀಡಿದರು ಡಾ. ಗಣೇಶ್. ಇದೇ ವೇಳೆ ಅನೇಕ ರಾಗಗಳನ್ನೂ ಉಲ್ಲೇಖಿಸಿದರು. ಶಿವರಂಜನಿ, ಶಂಕರಾಭರಣ, ದುರ್ಗಾ, ಇತ್ಯಾದಿ ರಾಗಗಳನ್ನು ಪರಿಚಯಿಸಿದರು. ಶ್ಲೋಕದಿಂದ ಕಾರ್ಯಕ್ರಮ ತೆರೆಕಂಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)