ಗುರುವಾರ , ಫೆಬ್ರವರಿ 25, 2021
29 °C

ರಾಜಕೀಯ ಪಕ್ಷಗಳಿಗೆ ಚಿಹ್ನೆ: ಚುನಾವಣಾ ಆಯೋಗದ ಮಾನದಂಡ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಪಕ್ಷಗಳಿಗೆ ಚಿಹ್ನೆ: ಚುನಾವಣಾ ಆಯೋಗದ ಮಾನದಂಡ ಎತ್ತಿಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ (ಪಿಟಿಐ): ಮಾನ್ಯತೆ ಪಡೆಯದ ನೊಂದಾಯಿತ ರಾಜಕೀಯ ಪಕ್ಷಗಳಿಗೆ ಚಿಹ್ನೆಗಳನ್ನು ನೀಡುವಲ್ಲಿ ಚುನಾವಣಾ ಆಯೋಗ ಅನುಸರಿಸುವ ಮಾನದಂಡವನ್ನು ಬುಧವಾರ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕೆಲವು ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಅಲ್ತಮಸ್ ಕಬೀರ್, ಎಸ್.ಎಸ್.ನಿಜ್ಜಾರ್ ಮತ್ತು ಚಲಮೇಶ್ವರ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠದಲ್ಲಿ ಕಬೀರ್ ಹಾಗೂ ನಿಜ್ಜಾರ್ ಅವರು ಆಯೋಗದ ಮಾನದಂಡವನ್ನು ಎತ್ತಿಹಿಡಿದರೆ ಚಲಮೇಶ್ವರ ಅವರು ಭಿನ್ನಾಭಿಪ್ರಾಯ ತಳೆದಿದ್ದಾರೆ.ಚುನಾವಣಾ ಆಯೋಗದ ಆದೇಶದನ್ವಯ `ಆಯೋಗದಿಂದ ಮಾನ್ಯತೆ ಪಡೆಯದ ನೊಂದಾಯಿತ ರಾಜಕೀಯ ಪಕ್ಷವು ಆಯೋಗದಿಂದ ಶಾಶ್ವತ ಚಿಹ್ನೆಯನ್ನು ಪಡೆಯಬೇಕಾದರೆ, ಅದು ವಿಧಾನಸಭೆಯ ಚುನಾವಣೆಯಲ್ಲಿ ಆಯೋಗ ನಿಗದಿಪಡಿಸಿರುವಷ್ಟು ಮತಗಳನ್ನು ಗಳಿಸಿಬೇಕು ಇಲ್ಲವೇ ಎರಡು ವಿಧಾನಸಭೆಯ ಸ್ಥಾನಗಳನ್ನು ಗೆಲ್ಲಬೇಕು ಅಥವಾ ರಾಜ್ಯದಿಂದ ಒಂದು ಲೋಕಸಭೆಯ ಸ್ಥಾನ ಗಳಿಸಬೇಕು~.ಚುನಾವಣಾ ಆಯೋಗದ ಈ ಆದೇಶವನ್ನು ಪ್ರಶ್ನಿಸಿ ಪ್ರಜಾರಾಜ್ಯಂ ಪಕ್ಷ ಒಳಗೊಂಡಂತೆ ಬಹುಜನ ವಿಕಾಸ ಅಗಾದಿ ಮತ್ತು ದೇಶಿಯ ಮೂರಪೊಕ್ಕು ದ್ರಾವಿಡ್ ಕಳಗಂ ಪಕ್ಷಗಳು 2008ರಲ್ಲಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿ ತಮಗೆ ಈ ಮೊದಲಿನ ಚಿಹ್ನೆಯನ್ನು ನೀಡುವಂತೆ ಆಯೋಗಕ್ಕೆ ಆದೇಶಿಸಬೇಕೆಂದು ಮನವಿ ಮಾಡಿಕೊಂಡಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.