ಮರಳುಗಾಡು, ಅತಿ ಬಿಸಿಲು ಆದರೂ ಕಲೆ, ಕಲಾವಿದರಿಗೆ ಕೊರತೆ ಇಲ್ಲದ ರಾಜ್ಯ ರಾಜಸ್ತಾನ್. ವಸ್ತ್ರವಿರಲಿ, ಆಭರಣಗಳಿರಲಿ ಎಲ್ಲದರಲ್ಲೂ ತನ್ನದೇ ಛಾಪು ಉಳಿಸಿಕೊಂಡಿದೆ ಈ ರಾಜ್ಯ. ಸಾಂಪ್ರದಾಯಿಕ ಕಲೆಗೆ ಸಮಕಾಲೀನ ಸ್ಪರ್ಶವನ್ನು ನೀಡುತ್ತಲೇ ರಾಜಸ್ತಾನಿ ಕಲೆ ಜನಪ್ರಿಯಗೊಳಿಸುತ್ತಿದೆ.

ರಾಜಸ್ತಾನದ ಕರಕುಶಲ ವಸ್ತುಗಳ ಮೇಳವು ಬೆಂಗಳೂರಿನಲ್ಲಿ ರಾಜಸ್ತಾನದ ಬಣ್ಣವನ್ನು ಪ್ರದರ್ಶಿಸುತ್ತಿದೆ. 60ಕ್ಕೂ ಹೆಚ್ಚಿನ ಕಲಾವಿದರು ತಮ್ಮ ಕಲಾಕೃತಿ ಹಾಗೂ ವಸ್ತ್ರವೈಭವದೊಂದಿಗೆ ನಗರಕ್ಕೆ ಭೇಟಿ ನೀಡಿದ್ದಾರೆ.

ಬ್ರಾಸ್ ವೆುಟಲ್, ಶಾಲ್, ಕೈಕಸೂತಿ, ರೇಷ್ಮೆ ಸೀರೆ, ಕಾಟನ್ ಸೀರೆ, ಜೈಪುರ್ ರಾಜಾಜಿ ಟಾಪ್ಸ್ ಲಖನವಿ ಚಿಕನ್ ವಸ್ತ್ರ, ಜೈಪುರ್ ಚೋಲಿ, ಖಾದಿ ಕುರ್ತಾ, ಮಧುಬನಿ ಕಲೆ, ಮೀನಾಕರಿ, ಕುಂದನ್, ಜೈಪುರ್ ಹರಳುಗಳು ಮುಂತಾದವೆಲ್ಲವೂ ಈ ಮೇಳದಲ್ಲಿ ಲಭ್ಯ ಇದೆ. ರಾಜಸ್ತಾನ್ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ಈ ಮೇಳವನ್ನು ಆಯೋಜಿಸಿದೆ.
ಸಫೀನಾ ಪ್ಲಾಜಾದಲ್ಲಿ ರಾಜಸ್ತಾನ್ ಮೇಳವನ್ನು ನೋಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.