ಬೆಂಗಳೂರು: ಸಚಿವರಿಗೆ ಮೀಸಲು ಇರಿಸಿದ್ದ ನಗರದ ಹೆಬ್ಬಾಳ ಬಳಿಯ ‘ಆಗ್ರೋ ಕೈಗಾರಿಕೆಗಳ ನಿಗಮ’ದ ಜಾಗವನ್ನು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಇದೇ 5ರಂದು ಆದೇಶ ಹೊರಡಿಸಿದೆ.ಎಲ್ಲಿಯೇ ನಿವೇಶನ ಗೊತ್ತು ಮಾಡಿದರೂ ಅದು ವಿವಾದಕ್ಕೆ ಒಳಗಾಗುತ್ತಿರುವುದರಿಂದ ಕಳೆದ ಬಾರಿ ವಿಚಾರಣೆ ವೇಳೆ ಹೈಕೋರ್ಟ್ನಿಂದ ತೀವ್ರ ತರಾಟೆಗೆ ಒಳಗಾಗಿದ್ದ ಸರ್ಕಾರ, ಈಗ ಕೊನೆಯದಾಗಿ ಈ ಜಾಗ ನೀಡಲು ನಿರ್ಧರಿಸಿದೆ. ಕಟ್ಟಡ ನಿರ್ಮಾಣಕ್ಕೆ 75ಕೋಟಿ ರೂಪಾಯಿಗಳನ್ನು 2011-12ನೇ ಸಾಲಿನ ಬಜೆಟ್ನಲ್ಲಿ ಮೀಸಲು ಇರಿಸಲಾಗಿದೆ ಎಂದು ಬುಧವಾರ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ.

ಪ್ರಮಾಣ ಪತ್ರದಲ್ಲಿನ ವಿವರ: ರಾಜ್ಯದ ವಿವಿಧೆಡೆ 126 ಕೋಟಿ ರೂಪಾಯಿ ವೆಚ್ಚದಲ್ಲಿ 43 ಕೋರ್ಟ್ ಕಟ್ಟಡಗಳು ಹಾಗೂ ರೂ 83.30ಕೋಟಿ ವೆಚ್ಚದಲ್ಲಿ 193 ನ್ಯಾಯಾಂಗ ವಸತಿಗೃಹ ನಿರ್ಮಾಣಕ್ಕೆ ಸರ್ಕಾರ ಕಳೆದ ಫೆ.15ರಂದು ಆದೇಶ ಹೊರಡಿಸಿದೆ.ಹೈಕೋರ್ಟ್ ಆವರಣದಲ್ಲಿ ಸುಮಾರು ರೂ10.25ಕೋಟಿ ವೆಚ್ಚದಲ್ಲಿ ಹೈಟೆಕ್ ಕ್ಯಾಂಟೀನ್ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೈಕೋರ್ಟ್ ಆವರಣದಲ್ಲಿ ಹೆಚ್ಚಿನ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಕಬ್ಬನ್ ಉದ್ಯಾನದ ವ್ಯಾಪ್ತಿಯಲ್ಲಿನ ಕೆಜಿಐಡಿ ಕಟ್ಟಡದ ಬಳಿ ಜಾಗ ಗೊತ್ತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಉದ್ಯಾನ (ಸಂರಕ್ಷಣೆ) ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದ್ದು, ಆ ಕುರಿತು ಶೀಘ್ರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.

ಇದರ ಹೊರತಾಗಿ ನ್ಯಾಯಾಂಗ ಅಧಿಕಾರಿಗಳ ಉಪಯೋಗಕ್ಕಾಗಿ ನಗರದ ಸಿದ್ಧಯ್ಯ ರಸ್ತೆಯ ಬಳಿ ಇರುವ ‘ನ್ಯಾಯ ದೇಗುಲ’ದ ಬಳಿ 30/94 ಮೀಟರ್ ಜಾಗ, ಮೇಯೋಹಾಲ್ ಬಳಿ ಇರುವ ಬಿಬಿಎಂಪಿ ಕಟ್ಟಡದ 340 ಚದರ ಮೀಟರ್ ಜಾಗ ಹಾಗೂ ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್ನ 23 ಮತ್ತು 24ನೇ ಅಂತಸ್ತಿನ 620 ಚದರ ಮೀಟರ್ ಜಾಗವನ್ನು ಬಿಟ್ಟುಕೊಡುವ ಸಂಬಂಧ ಬಿಬಿಎಂಪಿಗೆ ಸೂಚಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ನಗರದ ಎಚ್ಎಸ್ಆರ್ ಲೇಔಟ್ ಬಳಿ ಆಟದ ಮೈದಾನಕ್ಕೆ ಮೀಸಲಿಟ್ಟ ಜಾಗದಲ್ಲಿ ನ್ಯಾಯಮೂರ್ತಿಗಳಿಗೆ ನಿವೇಶನ ನೀಡಲು ಸರ್ಕಾರ ಮುಂದಾಗಿರುವ ಕ್ರಮ ಪ್ರಶ್ನಿಸಿ ‘ಎಚ್ಎಸ್ಆರ್ ಸೆಕ್ಟರ್-2 ನಾಗರಿಕರ ಕ್ಷೇಮಾಭಿವೃದ್ಧಿ ಸಂಘ’ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.

ಜಯಲಲಿತಾ: ಕಾಯ್ದಿರಿಸಿದ ತೀರ್ಪು
ಅಕ್ರಮ ಆಸ್ತಿ ಗಳಿಕೆ ಆರೋಪದ ದಾಖಲೆಗಳ ತರ್ಜುಮೆಗೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಸಲ್ಲಿಸಿರುವ ಅರ್ಜಿ ತೀರ್ಪನ್ನು ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಇವರ ವಿರುದ್ಧ ಇರುವ ಸಾಕ್ಷ್ಯಗಳನ್ನು ತಮಿಳಿನಿಂದ ಇಂಗ್ಲಿಷ್ಗೆ ತರ್ಜುಮೆ ಮಾಡಲಾಗಿದ್ದು, ಈ ತರ್ಜುಮೆ ಸರಿಯಾಗಿಲ್ಲ ಎನ್ನುವುದು ಜಯಾ ಆರೋಪ. ಈ ಹಿನ್ನೆಲೆಯಲ್ಲಿ ಎಲ್ಲ ದಾಖಲೆಗಳಲ್ಲಿನ ಮಾಹಿತಿಗಳನ್ನು ಹೊಸದಾಗಿ ತರ್ಜುಮೆ ಮಾಡಲು ಆದೇಶಿಸಬೇಕು ಎಂದು ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.