ಬೆಳಗಾವಿ: `ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇದೇ 19ರಿಂದ ನಡೆಯಲಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ (ಹಿಂದ್ ಕೇಸರಿ) ಸ್ಪರ್ಧೆಗೆ ಕರ್ನಾಟಕ ತಂಡದ ಆಯ್ಕೆ ಪ್ರಕ್ರಿಯೆ ಇದೇ 17ರಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ~ ಎಂದು ಭಾರತೀಯ ಶೈಲಿ ಕುಸ್ತಿ ಸಂಘದ ಕರ್ನಾಟಕ ಘಟಕದ ಅಧ್ಯಕ್ಷ ಆರ್.ಆರ್. ಮಠಪತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಶಾಹು ಮಹಾರಾಜ ಅವರು ನಿರ್ಮಿಸಿದ ಕುಸ್ತಿ ಅಖಾಡದ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಹಿಂದ್ ಕೇಸರಿ ಕುಸ್ತಿ ಸ್ಪರ್ಧೆಯಲ್ಲಿ 82ರಿಂದ 130 ಕೆ.ಜಿ. ವರೆಗಿನವರು ಭಾಗವಹಿಸ ಬಹುದಾಗಿದ್ದು ಪ್ರಥಮ ಬಹುಮಾನವಾಗಿ 3 ಲಕ್ಷ ರೂಪಾಯಿ ನಗದು ಹಾಗೂ ಬೆಳ್ಳಿ ಗದೆ, ದ್ವಿತೀಯ ಬಹುಮಾನವಾಗಿ 1.25 ಲಕ್ಷ ರೂಪಾಯಿ, ತೃತೀಯ ಹಾಗೂ ನಾಲ್ಕನೇ ಬಹುಮಾನವಾಗಿ ತಲಾ 59 ಸಾವಿರ ರೂಪಾಯಿ ನೀಡಲಾಗುವುದು ಎಂದು ಅವರು ಹೇಳಿದರು.

`51, 55, 60, 66, 74, 84 ಹಾಗೂ 96 ಕೆ.ಜಿ. ವಿಭಾಗದ ಪ್ರತ್ಯೇಕ ಸ್ಪರ್ಧೆಗಳಲ್ಲಿ 25 ಸಾವಿರ ರೂಪಾಯಿ (ಪ್ರಥಮ), 15 ಸಾವಿರ ರೂಪಾಯಿ (ದ್ವಿತೀಯ) ಹಾಗೂ 10 ಸಾವಿರ ರೂಪಾಯಿ (ತೃತೀಯ) ಬಹುಮಾನ ನೀಡಲಾಗುವುದು~ ಎಂದು ಅವರು ಹೇಳಿದರು.

`ಕುಸ್ತಿ ಕ್ರೀಡೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರ ಪ್ರತಿ ವರ್ಷ ಕುಸ್ತಿ ಹಬ್ಬ ಆಯೋಜಿಸಬೇಕು. ಕರ್ನಾಟಕ ಕೇಸರಿ ಕುಸ್ತಿ ಗೆಲ್ಲುವವರಿಗೆ ರೂ 1 ಲಕ್ಷ ಬಹುಮಾನ ನೀಡಬೇಕು~ ~ ಎಂದು ಅವರು ಆಗ್ರಹಿಸಿದರು. `ಕುಸ್ತಿಯಲ್ಲಿ ಉತ್ತಮ ಸಾಧನೆ ಮಾಡಿದ ಪೈಲ್ವಾನರಿಗೆ ಉದ್ಯೋಗದಲ್ಲಿ ಮೀಸಲಾತಿ ಮತ್ತು ಮಾಸಾಶನ ಆರಂಭಿಸಬೇಕು. ಕುಸ್ತಿ ಪ್ರೋತ್ಸಾಹಕ್ಕೆ 10 ಕೋಟಿ ರೂಪಾಯಿಯನ್ನು ಕ್ರೀಡಾ ಇಲಾಖೆಗೆ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ~ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.