ರಾಣೆಬೆನ್ನೂರು: ನಗರಸಭೆಯ ಡಾ.ಸರ್. ಎಂ. ವಿಶ್ವೇಶ್ವರಯ್ಯ ಸಭಾ ಭವನದಲ್ಲಿ ಶುಕ್ರವಾರ ನಡೆದ 2012-13ನೇ ಆರ್ಥಿಕ ವರ್ಷದ ಆಯ-ವ್ಯಯ ಮಂಡನಾ ಸಭೆಯಲ್ಲಿ ನಗರಸಭಾ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಅವರು ಒಟ್ಟು 31.81 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಮಂಡನೆ ಮಾಡಿದರು.

ನೀರು ಶುದ್ಧೀಕರಣ ಹಾಗೂ ಸರಬರಾಜಿಗೆ ಹೆಚ್ಚಿನ ಸಂಪನ್ಮೂಲ ವ್ಯಯವಾಗುತ್ತಿದ್ದು ಸಂಪ ನ್ಮೂಲ ಕ್ರೋಡೀಕರಣಕ್ಕಾಗಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿಗೆ ಗೊಳಿಸಲಾಗುವುದು, ನಿರಂತರ ಕುಡಿಯುವ ನೀರು ಸರಬರಾಜು ಮಾಡಲು 24.7 ವ್ಯವಸ್ಥೆ, ದಿನದ 24 ಗಂಟೆ ಹಾಗೂ ವಾರದ 7ದಿನಗಳ ಕಾಲ ನಿರಂತರ ನೀರು ಸರಬರಾಜು ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶ ವಿದ್ದು ನಲ್ಲಿಗಳಿಗೆ ಮೀಟರ್ ಅಳವಡಿಸಲಾ ಗುವುದು.

ಸಾರ್ವಜನಿಕರು ತಾವು ಬಳಸಿದ್ದಷ್ಟು ನೀರಿಗೆ ಮಾತ್ರ ಕರ ಪಾವತಿಸಲು ಅವಕಾಶವಿದ್ದು ಕುಡಿಯುವ ನೀರಿನ ಅನಗತ್ಯ ಪೋಲಾಗುವಿಕೆ ಯನ್ನು ತಡೆಯಬಹುದಾಗಿದೆ ಎಂದರು.

ನೀರು ಬಳಕೆ ಶುಲ್ಕದಿಂದ ರೂ 160 ಲಕ್ಷ, ಹೊಸ ಸಂಪರ್ಕಗಳಿಂದ ರೂ10 ಲಕ್ಷ, ದಂಡ ವಸೂಲಾತಿಯಿಂದ ರೂ 2.5 ಲಕ್ಷ , ಸೇರಿದಂತೆ ಒಟ್ಟು ರೂ 172.50 ಲಕ್ಷಗಳ ಮತ್ತು ನಗರದಲ್ಲಿ ಈಚೆಗೆ ಹೊಸ ಮಳಿಗೆಗಳನ್ನು ಕಟ್ಟಿ ಹರಾಜು ಮಾಡಲಾಗಿದ್ದು ಹೊಸ ಮತ್ತು ಹಳೆಯ ಮಳಿಗೆಗಳಿಂದ ರೂ 140 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.

ಜಾಹೀರಾತು ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ ಹರಾಜು ಹಾಕಲು ನಿರ್ಧರಿಸಲಾಗಿದ್ದು 2.5 ಲಕ್ಷ ರೂ ಗಳ ಆದಾಯ ನಿರೀಕ್ಷಣೆ ಮಾಡಲಾಗಿದೆ. ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಉದ್ದೇಶವಿರುದಿಲ್ಲವಾದ್ದರಿಂದ ಆಸ್ತಿ ತೆರಿಗೆ ಹಾಗೂ ಆಸ್ತಿ ತೆರಿಗೆಯ ಮೇಲಿನ ದಂಡ ವಸೂಲಾತಿಯಗಳಿಂದ 180 ಲಕ್ಷ ರೂ, ಅಭಿವೃದ್ಧಿ ಶುಲ್ಕ ದಿಂದ 100 ಲಕ್ಷ ರೂ, ಕಟ್ಟಡ ಪರವಾನಿಗೆಯಿಂದ ರೂ 15 ಲಕ್ಷ , ದಂಡ ಗಳಿಂದ 4 ಲಕ್ಷ ರೂ, ಉದ್ದಿಮೆ ಪರವಾನಿಗೆ ಯಿಂದ ರೂ 2.25 ಲಕ್ಷ , ಟೆಂಡರ್ ಫಾರಂಗಳ ಮಾರಾಟದಿಂದ ರೂ 7.50 ಲಕ್ಷ ಆದಾಯ ನಗರಸಭೆ ಸ್ವಂತ ಮೂಲಗಳಿಂದ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.

ಕೇಂದ್ರ ಹಣಕಾಸು ಆಯೋಗದ ಅನುದಾನ (13ನೇ ಹಣಕಾಸು) ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಆಯೋಗದ ಶಿಫಾರಸ್ಸಿನ ಅನ್ವಯ ಬಿಡುಗಡೆಯಾದ ಅನುದಾನ 189 ಲಕ್ಷ ರೂಗಳ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಲ್ಲಿ 2010-11 ಮತ್ತು 11-12ನೇ ಸಾಲಿಗೆ ಒಟ್ಟು 500 ಲಕ್ಷ ರೂ ಅನುದಾನ ಬಿಡುಗಡೆ ಯಾಗಿದೆ, ಮುಂದಿನ ವರ್ಷ 250 ಲಕ್ಷ ರೂ ಅನುದಾನ ವನ್ನು ಈ ಯೋಜನೆಯಡಿ ಮತ್ತು ಎಸ್ಜೆಆರ್ವೈ ಅನುದಾನದಡಿ 40 ಲಕ್ಷ ರೂ ಅನುದಾನ ಸರ್ಕಾರದಿಂದ ನೀರಿಕ್ಷೆ ಮಾಡ ಲಾಗಿದೆ ಎಂದರು.

2012 -13 ನೇ ಹಣಕಾಸು: ಕಚೇರಿಯ ಸಾಮಾನ್ಯ ವೆಚ್ಚ ಗಳಾದ ಸಾರಿಗೆ, ದೂರವಾಣಿ, ವಿದ್ಯುತ್, ಡಿಸೆಲ್, ಮುದ್ರಣ ಮತ್ತು ಲೇಖನ ಸಾಮಗ್ರಿಗಳು, ಕಂಪ್ಯೂಟರ್ಗಳ ಹೊರಗುತ್ತಿಗೆ ಶುಲ್ಕ, ಬೀದಿ ದೀಪಗಳ ಬ್ಯಾಂಕ್ ಶುಲ್ಕ, ಜಾಹೀರಾತು ವೆಚ್ಚಗಳು ಇತ್ಯಾಧಿಗಳಿಗೆ 53.15 ಲಕ್ಷ ರೂ ವೆಚ್ಚವನ್ನು ಅಂದಾಜಿಸಲಾಗಿದೆ.

ರಸ್ತೆ ದುರಸ್ಥಿ ಮತ್ತು ನಿರ್ವಹಣೆಗಾಗಿ 10 ಲಕ್ಷ ರೂಪಾಯಿ ಬೀದಿ ದೀಪ ನಿರ್ವಹಣೆಗಾಗಿ ನಗರದ ವಾರ್ಡ್ಗಳನ್ನು ಪ್ಯಾಕೇಜುವಾರು ವಿಂಗಡಿಸಿ ಹೊರಗುತ್ತಿಗೆ ನೀಡಲಾಗಿದ್ದು 32 ಲಕ್ಷ ರೂಪಾಯಿ ಘನತ್ಯಾಜ್ಯದ ಸಮರ್ಪಕ ವಿಲೇವಾರಿಗಾಗಿ ಹಾಗೂ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು 129 ಲಕ್ಷರೂ ಖರ್ಚು ಮಾಡಲಾಗುವುದು.

ಕಾಮಗಾರಿಗಳು: ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ಹಾಗೂ ಡಾಂಬರೀಕರಣದ ಉದ್ದೇಶಕ್ಕಾಗಿ ಪುರಸಭಾ ನಿಧಿಯಲ್ಲಿ ಹಾಗೂ ವಿವಿಧ ಅನುದಾನಗಳು ಹಾಗೂ ಯೋಜನೆಗಳನ್ನು 384 ಲಕ್ಷರೂ, ರಂಡಿಗಳ ನಿರ್ಮಾಣಕ್ಕಾಗಿ 310 ಲಕ್ಷ ರೂ, ಕುಡಿಯುವ ನೀರು ಪೈಪ್ ಲೈನಗಳಿಗಾಗಿ 126 ಲಕ್ಷ ರೂ ವೆಚ್ಚ ಮಾಡಲು ಉದ್ದೇಶ ಹೊಂದಲಾಗಿದೆ.

ಎನ್ಕೆಯುಎಸ್ಐಪಿ ಯೋಜನೆಯಡಿ 3500 ಲಕ್ಷ ರೂ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಪಡಿಸುವ ಯೋಜನೆ ಯನ್ನು ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ಹಾಗೂ ಹಣಕಾಸು ನಿಗಮದ ಜಾರಿಗೊಳಿಸಲಾಗಿದ್ದು ಕಾಮಗಾರಿ ಯು ಆರ್ಥಿಕ ವರ್ಷದಲ್ಲಿ ಪೂರ್ಣ ಗೊಳಿಸಲಾಗುವುದು ಪಾರ್ಕ್ಗಳ ಅಭಿವೃದ್ಧಿ ಹಾಗೂ ಸಾಮೂಹಿಕ ಶೌಚಾಲಯಗಳ ನಿರ್ಮಾಣ ಕ್ಕಾಗಿ ವಿಶೇಷ ಗಮನ ನೀಡಿ 138.25 ಲಕ್ಷ ಹಾಗೂ ರೂ 20 ಲಕ್ಷ ನಿಗದಿ ಪಡಿಸಲಾಗಿದೆ. ಪೌರಾಯುಕ್ತ ಎಂ.ಎಂ. ಕರಭೀಮಣ್ಣ ನವರ ಸ್ವಾಗತಿಸಿ ದರು. ಇಂಜಿನಿ ಯರ್ ಮಂಜುನಾಥ ಗಿರಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.