ಸೋಮವಾರ, ಮೇ 16, 2022
30 °C

ರಾಮಾಯಣ ಜಗತ್ತಿನ ಮಹಾಕಾವ್ಯ: ಅಲಕನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಭಾರತೀಯ ಸಂಸ್ಕೃತಿಗೆ ವಾಲ್ಮೀಕಿ ಮಹರ್ಷಿ ಕೊಟ್ಟ ರಾಮಾಯಣ ಜಗತ್ತಿನ ಮಹಾಕಾವ್ಯ ಎಂದು ವಾಲ್ಮೀಕಿ ಸಮಾಜದ ಮುಖಂಡ ಪ್ರವೀಣ ಅಲಕನೂರ ಹೇಳಿದರು. ಗದ್ದನಕೇರಿ ಗ್ರಾ.ಪಂ ಗ್ರಂಥಾಲಯದಲ್ಲಿ  ಗ್ರಂಥಾಲಯ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜನ್ಮದಿನೋತ್ಸವದಲ್ಲಿ  ಮಾತನಾಡಿದ ಅವರು, ಬಂಧುತ್ವ ಇರುವವರೆಗೂ ರಾಮಾಯಣ ಭ್ರಾತೃ ಪ್ರೇಮ ಸಾರುತ್ತಲಿರುತ್ತದೆ ಎಂದರು.ಗ್ರಂಥಾಲಯದ ಮೇಲ್ವಿಚಾರಕ ಕೆ.ವಿ.ಗಡಗಡೆ ಮಾತನಾಡಿ, ವಾಲ್ಮೀಕಿಯಂತಹ ಮಹರ್ಷಿ, ಶರಣರು, ಸೂಫಿ  ಸಂತರು, ನಾಡಿನ ಸಂಸ್ಕೃತಿ ಪರಂಪರೆ ಹಾಗೂ ಇತಿಹಾಸವನ್ನು ಪುನರುತ್ಥಾನದ ಮೂಲಕ ಅನಾವರಣಗೊಳಿಸಿದ್ದಾರೆ. ಅದನ್ನು ಇಂದಿನ ಸಮಾಜಕ್ಕೆ ತಿಳಿಸಬೇಕು ಎಂದರು.ಪ್ರೊ.ಟಿ.ಎಸ್. ಸನಗಿನ, ಎಂ.ಎಸ್.ಹುಲಸಗೇರಿ, ಮೈಬೂಬ ಕಲಾದಗಿ, ಪ್ರವೀಣ ಬಡಿಗೇರ, ಹಾರೂನ್ ನದಾಫ್, ನಾಗಪ್ಪ ಅಪ್ಪಣ್ಣವರ, ವಿಠ್ಠಲ ಜಕ್ಕನ್ನವರ, ಮಂಜು ಯತ್ನಟ್ಟಿ, ಬಸು ಗೌಡರ, ಪ್ರಭುಲಿಂಗಯ್ಯ ಹಿರೇಮಠ, ಬಸು ಪಾಟೀಲ, ಮುತ್ತಪ್ಪ ಮಾವಡಿ ಮಂಜು ಹುದಲಿ ಮತ್ತಿತರರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.