ಜೈಪುರ (ಪಿಟಿಐ): ಕರ್ನಾಟಕದ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸಾರಥ್ಯದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಈಗ ಮತ್ತೊಂದು ಗೆಲುವಿನ ವಿಶ್ವಾಸ. ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಲಭಿಸಿದ 31 ರನ್ಗಳ ವಿಜಯ ಇದಕ್ಕೆ ಕಾರಣ.

ಐಪಿಎಲ್ ಐದನೆಯ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ರಾಯಲ್ಸ್ ತಂಡ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಸೆಣಸಲಿದೆ. ಪಂಜಾಬ್ ಎದುರು ಗೆಲುವು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರಹಾನೆ, ದ್ರಾವಿಡ್, ಅಶೋಕ್ ಮೆನಾರಿಯಾ ಈ ತಂಡದ ಬ್ಯಾಟಿಂಗ್ ಶಕ್ತಿ.

ರಹಾನೆ ಕೇವಲ 98 ರನ್ ಗಳಿಸಿ ಮೊದಲ ಪಂದ್ಯದಲ್ಲಿಯೇ ಭರವಸೆ ಮೂಡಿಸಿದ್ದಾರೆ. ಇದು ಈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸವನ್ನು ಮೂಡಿಸಿದೆ. ಆದರೆ, ಕೋಲ್ಕತ್ತ ತಂಡಕ್ಕೆ ಮೊದಲ ಪಂದ್ಯದಲ್ಲಿಯೇ ನಿರಾಸೆ ಎದುರಾಗಿದೆ. ಅದು ಡೆಲ್ಲಿ ಡೇರ್ ಡೆವಿಲ್ಸ್ ಎದುರು. ಆದ್ದರಿಂದ ಈ ಸಲದ ಐಪಿಎಲ್ನಲ್ಲಿ ಪಾಯಿಂಟ್ ಖಾತೆ ತೆರೆಯಲು ಗೌತಮ್ ಗಂಭೀರ್ ಪಡೆ ಕಾತರದಲ್ಲಿದೆ.

ರಾಯಲ್ಸ್ ತಂಡದ ಕೆವೊನ್ ಕೂಪರ್ ಸಹ ಉತ್ತಮ ಬ್ಯಾಟಿಂಗ್ ಲಯ ಹೊಂದಿದ್ದಾರೆ. ಹಿಂದಿನ ಪಂದ್ಯದಲ್ಲಿ ಕೇವಲ ಮೂರು ಎಸೆತಗಳಲ್ಲಿ 11 ರನ್ ಗಳಿಸಿದ್ದೇ ಇದಕ್ಕೆ ಸಾಕ್ಷಿ. 4 ಓವರ್ಗಳಲ್ಲಿ 26 ರನ್ ನೀಡಿ, ಪ್ರಮುಖ ನಾಲ್ಕು ವಿಕೆಟ್ ಪಡೆದು ಬೌಲಿಂಗ್ನಲ್ಲಿಯೂ ಮಿಂಚಿದ್ದರು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಎದುರು ಅನುಭವಿಸಿದ ನಿರಾಸೆಯಿಂದ ಹೊರಬಂದು ಗೆಲುವಿನ ಹಾದಿಯಲ್ಲಿ ಸಾಗಬೇಕು ಎನ್ನುವುದು ಗಂಭೀರ ಪಡೆಯ ಆಶಯ. ಈ ತಂಡದ ಬ್ರೆಂಡನ್ ಮೆಕ್ಲಮ್, ಜಾಕ್ ಕಾಲೀಸ್, ಮನೋಜ್ ತಿವಾರಿ ಹಾಗೂ ಯುಸೂಫ್ ಪಠಾಣ್ ಅವರು ಹಿಂದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆದ್ದರಿಂದ ರಾಯಲ್ಸ್ ಎದುರು ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಾಣಬೇಕಿದೆ.

ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ, ಜಾಕ್ ಕಾಲೀಸ್ ಅವರಂತಹ ಉತ್ತಮ ಬೌಲರ್ಗಳೂ ಕೋಲ್ಕತ್ತ ತಂಡದಲ್ಲಿದ್ದಾರೆ.

ತಂಡಗಳು
ರಾಜಸ್ತಾನ ರಾಯಲ್ಸ್: ರಾಹುಲ್ ದ್ರಾವಿಡ್ (ನಾಯಕ), ಅಜಿಂಕ್ಯ ರಹಾನೆ, ಅಶೋಕ್ ವೆುನಾರಿಯ, ಬ್ರಾಡ್ ಹಾಗ್, ಓವೇಸ್ ಸಹಾ, ಕೆವೊನ್ ಕೂಪರ್, ಜಾನ್ ಬೋಥಾ, ಅಂಕಿತ್ ಚವ್ಹಾಣ್, ಶ್ರೀವತ್ಸ ಗೋಸ್ವಾಮಿ, ಅಮಿತ್ ಸಿಂಗ್, ಸಿದ್ಧಾರ್ಥ ತ್ರಿವೇದಿ, ಆಕಾಶ್ ಛೋಪ್ರಾ, ಸ್ಟುವರ್ಟ್ ಬಿನ್ನಿ ಹಾಗೂ ಅಭಿಷೇಕ್ ರಾವತ್.

ಕೋಲ್ಕತ್ತ ನೈಟ್ ರೈಡರ್ಸ್: ಗೌತಮ್ ಗಂಭೀರ್ (ನಾಯಕ), ಮನೋಜ್ ತಿವಾರಿ, ಬ್ರೆಂಡನ್ ವೆುಕ್ಲಮ್, ಜಾಕ್ ಕಾಲೀಸ್, ಮನೋಜ್ ತಿವಾರಿ, ಯೂಸುಫ್ ಪಠಾಣ್, ದೇಬಾಬ್ರಾತ್ ದಾಸ್, ಲಕ್ಷ್ಮಿ ಶುಕ್ಲಾ, ರಜತ್ ಭಾಟಿಯಾ, ಬ್ರೆಟ್ ಲೀ, ಇಕ್ಬಾಲ್ ಅಬ್ದುಲ್ಲಾ, ಲಕ್ಷ್ಮೀಪತಿ ಬಾಲಾಜಿ, ಜಯದೇವ್ ಉನದ್ಕತ್, ಬ್ರಾಡ್ ಹಡಿನ್ ಹಾಗೂ ಎಯೋನ್ ಮಾರ್ಗನ್.
ಪಂದ್ಯ ಆರಂಭ: ಸಂಜೆ 4 ಗಂಟೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.