ಬೆಂಗಳೂರು: ಕೆಲವು ಸೋಲುಗಳನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಬದ್ಧ ಎದುರಾಳಿ ಎನಿಸಿರುವ ತಂಡದ ಕೈಯಲ್ಲಿ ಅನುಭವಿಸಿದ ಸೋಲು ಎದೆಯಲ್ಲಿ ಸೇಡಿನ ಕೋಟೆ ಕಟ್ಟಿಬಿಡುತ್ತದೆ. ಬೇರೆ ತಂಡಗಳ ಎದುರು ಸಾಲು ಸಾಲು ಗೆಲುವು ಬಂದರೂ ಆ ಸೋಲಿನ ಗಾಯ ಅಷ್ಟು ಸುಲಭವಾಗಿ ವಾಸಿಯಾಗುವುದಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದ್ಯದ ಪರಿಸ್ಥಿತಿಗೆ ಮತ್ತಷ್ಟು ವಿವರಣೆ ಬೇಕಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ತನ್ನ ಮೊದಲ ಪಂದ್ಯದಲ್ಲಿ 205 ರನ್ ಗಳಿಸಿಯೂ ಸೋಲು ಕಂಡಿದ್ದ ಚಾಲೆಂಜರ್ಸ್ ಆಟಗಾರರ ಮನಸ್ಥಿತಿ ಹೇಗಿರಬಹುದು ಊಹಿಸಿ...?

ಆದರೆ ಆ ನೋವನ್ನು ಶಮನಗೊಳಿಸಿಕೊಳ್ಳಲು ಚಾಲೆಂಜರ್ಸ್ಗೆ ಒಂದು ದಾರಿ ಇದೆ. ಕಾರಣ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಈ ತಂಡದವರು ಬದ್ಧ ಎದುರಾಳಿ ಸೂಪರ್ ಕಿಂಗ್ಸ್ ವಿರುದ್ಧ ಮತ್ತೊಂದು ಪೈಪೋಟಿ ನಡೆಸಲು ಕಣಕ್ಕಿಳಿಯುತ್ತಿದ್ದಾರೆ.

`ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವೆಂದರೆ ಏನೋ ಆಕರ್ಷಣೆ. ಇದಕ್ಕೆ ಇಂಥದ್ದೇ ಕಾರಣವಿಲ್ಲ. ಆದರೆ ಪ್ರತಿ ಐಪಿಎಲ್ನಲ್ಲೂ ಉಭಯ ತಂಡಗಳ ನಡುವಿನ ಪಂದ್ಯಕ್ಕೆ ಹೆಚ್ಚು ಟಿಕೆಟ್ಗಳು ಮಾರಾಟವಾಗುತ್ತವೆ. ಈ ಬಾರಿಯೂ ಎಲ್ಲಾ ಟಿಕೆಟ್ ಖಾಲಿಯಾಗಿವೆ~ ಎಂದು ಕೆಎಸ್ಸಿಎ ವ್ಯವಸ್ಥಾಪಕ ಸಮಿತಿ ಸದಸ್ಯರೊಬ್ಬರು ಹೇಳುತ್ತಾರೆ.

ವಿಶೇಷವೆಂದರೆ ಸೂಪರ್ ಕಿಂಗ್ಸ್ಗೆ ಇಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಈ ತಂಡದವರು ಮಂಗಳವಾರ ಸಂಜೆ ಅಭ್ಯಾಸ ನಡೆಸುತ್ತಿದ್ದಾಗ ಕ್ರೀಡಾಂಗಣದ ಸುತ್ತ ಟಿಕೆಟ್ಗಾಗಿ ಪರಿತಪಿಸುತ್ತಿದ್ದ ಕ್ರಿಕೆಟ್ ಪ್ರೇಮಿಗಳಲ್ಲಿ ಹೆಚ್ಚಿನವರು ಕಿಂಗ್ಸ್ ಅಭಿಮಾನಿಗಳು. ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಈ ಬಳಗವನ್ನು ಮುನ್ನಡೆಸುತ್ತಿರುವುದು ಇನ್ನೊಂದು ಕಾರಣ. ಜೊತೆಗೆ ಇದು ಹಾಲಿ ಚಾಂಪಿಯನ್ ಕೂಡ.

ಹಾಗಾಗಿಯೇ ಈ ತಂಡಗಳ ನಡುವಿನ ಪಂದ್ಯ ತುಂಬಾ ಕುತೂಹಲ ಕೆರಳಿಸಿದೆ. ಅದರಲ್ಲೂ ಹ್ಯಾಟ್ರಿಕ್ ಸೋಲುಗಳ ಬಳಿಕ ಹ್ಯಾಟ್ರಿಕ್ ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಮೊದಲಿಗಿಂತಲೂ ಬಲಿಷ್ಠವಾಗಿದೆ. ಕ್ರಿಸ್ ಗೇಲ್ ಅಬ್ಬರಿಸಲು ಶುರು ಮಾಡಿದರೆ ಅವರನ್ನು ನಿಯಂತ್ರಿಸುವುದು ಅಷ್ಟು ಸುಲಭದ ಮಾತಲ್ಲ. ಅವರಾಟ ನೋಡಲೆಂದೇ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ!

ಆದರೆ ಗೆಲುವಿಗಾಗಿ ತಂಡ ಗೇಲ್ ಒಬ್ಬರನ್ನೇ ನೆಚ್ಚಿಕೊಂಡಿಲ್ಲ ಎಂದು ನಾಯಕ ಡೇನಿಯಲ್ ವೆಟೋರಿ ಹೇಳಿದ್ದಾರೆ. ವೆಟೋರಿ ಅವರ ಈ ಮಾತು ಕಿಂಗ್ಸ್ ಇಲೆವೆನ್ ಪಂಜಾಬ್ ಎದುರಿನ ಪಂದ್ಯದಲ್ಲಿ ನಿಜವಾಯಿತು ಕೂಡ. ಏಕೆಂದರೆ ವಿಂಡೀಸ್ನ ಗೇಲ್ ಆ ಪಂದ್ಯದಲ್ಲಿ 4 ರನ್ ಗಳಿಸಿ ಔಟಾದರೂ ತಂಡ ದೊಡ್ಡ ಮೊತ್ತ ಗಳಿಸಿತ್ತು. ಇದಕ್ಕೆ ಕಾರಣವಾಗಿದ್ದು ತಿಲಕರತ್ನೆ ದಿಲ್ಶಾನ್ ಹಾಗೂ ಎಬಿ ಡಿಲಿವಿಯರ್ಸ್ ಬ್ಯಾಟಿಂಗ್.

ರಾಯಲ್ ಚಾಲೆಂಜರ್ಸ್ ಇದುವರೆಗೆ ಏಳು ಪಂದ್ಯ ಆಡಿದ್ದು ನಾಲ್ಕರಲ್ಲಿ ಗೆದ್ದಿದೆ. ಮೂರು ಸೋಲು ಕಂಡಿದೆ. ಸದ್ಯ ಎಂಟು ಪಾಯಿಂಟ್ ಹೊಂದಿದೆ. ಎಡಗೈ ಸ್ಪಿನ್ನರ್ ಕೆ.ಪಿ.ಅಪ್ಪಣ್ಣ ಕಳೆದ ಪಂದ್ಯದಲ್ಲಿ ಮಿಂಚಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಸ್ಫೂರ್ತಿ ನೀಡಿದೆ. ಒಂದು ಸಮಸ್ಯೆ ಎಂದರೆ ವಿರಾಟ್ ಕೊಹ್ಲಿ ಫಾರ್ಮ್.

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ಮೂಲಕ ಗಮನ ಸೆಳೆದಿದ್ದ ಅವರು ಐಪಿಎಲ್ನಲ್ಲೇಕೊ ಮಂಕಾಗಿದ್ದಾರೆ.

ಆದರೆ ಎದುರಾಳಿ ಸೂಪರ್ ಕಿಂಗ್ಸ್ ಅದ್ಭುತ ಪ್ರದರ್ಶನವನ್ನೇನು ನೀಡುತ್ತಿಲ್ಲ. ಅದಕ್ಕೆ ಕಾರಣ ದೇಶಿ ಕ್ರಿಕೆಟಿಗರು ಕ್ಲಿಕ್ ಆಗುತ್ತಿಲ್ಲ. ಮುರಳಿ ವಿಜಯ್, ಸುರೇಶ್ ರೈನಾ, ಎಸ್.ಬದರೀನಾಥ್ ಹಾಗೂ ದುಬಾರಿ ಬೆಲೆಯ ಆಟಗಾರ ರವೀಂದ್ರ ಜಡೇಜಾ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ದೋನಿ ಅವರಿಂದ ಕೂಡ ಹೇಳಿಕೊಳ್ಳುವಂಥ ಆಟ ಮೂಡಿ ಬಂದಿಲ್ಲ. ವಿದೇಶಿ ಆಟಗಾರ ಫ್ರಾನ್ಸಿಸ್ ಡು ಪ್ಲೆಸಿಸ್ ಅವರ ಸೊಗಸಾದ ಆಟದ ಕಾರಣ ಈ ತಂಡ ಎದುರಾಳಿ ತಂಡದವರಲ್ಲಿ ಕೊಂಚ ಭಯ ಮೂಡಿಸಿದೆ ಅಷ್ಟೆ.

ದೋನಿ ಬಳಗ ಕೂಡ ತನ್ನ ಖಾತೆಯಲ್ಲಿ ಎಂಟು ಪಾಯಿಂಟ್ ಹೊಂದಿದೆ. ಆದರೆ ರನ್ರೇಟ್ನಲ್ಲಿ ರಾಯಲ್ ಚಾಲೆಂಜರ್ಸ್ಗಿಂತ ಮುಂದಿದೆ. ಚಾಣಾಕ್ಷ ನಾಯಕ ಎಂದೇ ಹೆಸರು ಮಾಡಿರುವ ದೋನಿ ಚಾಲೆಂಜರ್ಸ್ನ ಸವಾಲನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಏಕೆಂದರೆ ಸೇಡು ತೀರಿಸಿಕೊಳ್ಳಲು ಚಾಲೆಂಜರ್ಸ್ ಕಾಯುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಡೇನಿಯಲ್ ವೆಟೋರಿ (ನಾಯಕ), ಮಾಯಂಕ್ ಅಗರ್ವಾಲ್, ಕ್ರಿಸ್ ಗೇಲ್, ತಿಲಕರತ್ನೆ ದಿಲ್ಶಾನ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಸೌರಭ್ ತಿವಾರಿ, ಜಹೀರ್ ಖಾನ್, ಆರ್.ವಿನಯ್ ಕುಮಾರ್, ಆ್ಯಂಡ್ರ್ಯೂ ಮೆಕ್ಡೊನಾಲ್ಡ್, ಮುತ್ತಯ್ಯ ಮುರಳೀಧರನ್, ಕೆ.ಪಿ. ಅಪ್ಪಣ್ಣ, ಹರ್ಷಲ್ ಪಟೇಲ್, ಅಭಿಮನ್ಯು ಮಿಥುನ್, ಎಸ್.ಅರವಿಂದ್, ಅರುಣ್ ಕಾರ್ತಿಕ್, ಮೊಹಮ್ಮದ್ ಕೈಫ್ ಹಾಗೂ ಚೇತೇಶ್ವರ ಪೂಜಾರ.

ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ದೋನಿ (ನಾಯಕ), ಎಸ್.ಬದರೀನಾಥ್, ಫ್ರಾನ್ಸಿಸ್ ಡು ಪ್ಲೆಸಿಸ್, ಸುರೇಶ್ ರೈನಾ, ಡ್ವೇನ್ ಬ್ರಾವೊ, ರವೀಂದ್ರ ಜಡೇಜಾ, ಮುರಳಿ ವಿಜಯ್, ವೃದ್ಧಿಮನ್ ಸಹಾ, ಅಭಿನವ್ ಮುಕುಂದ್, ಆರ್.ಅಶ್ವಿನ್, ನುವಾನ್ ಕುಲಶೇಖರ, ಶಾದಾಬ್ ಜಕಾತಿ, ಡಗ್ ಬೋಲಿಂಜರ್, ಎಸ್.ಅನಿರುದ್ಧ್, ಸುದೀಪ್ ತ್ಯಾಗಿ, ವಿ. ಯೋಮಹೇಶ್, ಅಲ್ಬಿ ಮಾರ್ಕೆಲ್, ಬೆನ್ ಹಿಲ್ಫೆನಾಸ್, ಸ್ಕಾಟ್ ಸ್ಟೈರಿಸ್ ಹಾಗೂ ಸೂರಜ್ ರಂದೀವ್.

ಪಂದ್ಯ ಆರಂಭ: ರಾತ್ರಿ 8.00ಕ್ಕೆ, ನೇರ ಪ್ರಸಾರ: ಸೆಟ್ ಮ್ಯಾಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.