ರಾಷ್ಟ್ರಪತಿ ಮತದಾನ ಮಾಡಲ್ಲ!

ನವದೆಹಲಿ (ಪಿಟಿಐ): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಪ್ರಥಮ ಪ್ರಜೆ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತದಾನ ಮಾಡುವುದಿಲ್ಲ.
ಹೌದು, ರಾಷ್ಟ್ರಪತಿಗಳ ಪತ್ರಿಕಾ ಕಾರ್ಯದರ್ಶಿ ವೇಣು ರಾಜಮೊನಿ ಅವರೇ ಸ್ವತಃ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಜಿದ್ದಾಜಿದ್ದಿ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷದ ಪರ ಮತದಾನ ಮಾಡದೆ ತಟಸ್ಥವಾಗಿರುವ ದಿಸೆಯಲ್ಲಿ ಈ ಹಿಂದಿನ ರಾಷ್ಟ್ರಪತಿಗಳಲ್ಲಿ ಬಹುತೇಕರು ಪಾಲಿಸಿಕೊಂಡುಬಂದ ಸಂಪ್ರದಾಯದಂತೆ ಪ್ರಣವ್ ಅವರೂ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪ್ರಣವ್ ದಕ್ಷಿಣ ಕೋಲ್ಕತ್ತ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು ಮೇ 12 ರಂದು ಇಲ್ಲಿ ಚುನಾವಣೆ ನಡೆಯಲಿದೆ. ಕ್ಷೇತ್ರಕ್ಕೆ ತೆರಳಿ ಮತದಾನ ಮಾಡುವುದಕ್ಕಿಂತ ಅಂಚೆ ಮೂಲಕವೇ ಮತದಾನ ಮಾಡುವುದಕ್ಕೆ ಈ ಮೊದಲು ಪ್ರಣವ್ ನಿರ್ಧರಿಸಿದ್ದರು, ಆದರೆ ನಂತರ ಈ ನಿರ್ಧಾರವನ್ನು ಬದಲಿಸಿದ್ದಾರೆ ಎಂದು ತಿಳಿಸಲಾಗಿದೆ.
ದಕ್ಷಿಣ ಕೋಲ್ಕತ್ತ ಕ್ಷೇತ್ರದಲ್ಲಿ ಬಹುಕೋನ ಸ್ಪರ್ಧೆ ಏರ್ಪಟ್ಟಿದ್ದು ಹಾಲಿ ಸಂಸದ ತೃಣಮೂಲ ಕಾಂಗ್ರೆಸ್ನ ಸುಬ್ರತಾ ಬಕ್ಷಿ ಅವರು, ಬಿಜೆಪಿ, ಕಾಂಗ್ರೆಸ್ ಹಾಗೂ ಸಿಪಿಎಂಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.