ಗುರುವಾರ , ಜನವರಿ 23, 2020
29 °C

ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 5 ವಿದ್ಯಾರ್ಥಿಗಳ ತಂಡವು ಡಿ. 27ರಿಂದ 31ವರೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ. ವಿದ್ಯಾಲಯದ ಪಿ.ಎಸ್. ಪೊನ್ನಮ್ಮ ಅವರ ಮಾರ್ಗದರ್ಶನದಲ್ಲಿ ಎಂ.ಬಿ. ವೀಕ್ಷಾ ದೇಚಮ್ಮ, ಪಿ.ಎಸ್. ಶ್ರೇಯಾ, ಎಂ. ಇಶಿಕಾ ಕುಟ್ಟಪ್ಪ, ಮೊಹಮ್ಮದ್ ಫೈಜನ್  ಮತ್ತು ಜಿ.ಆರ್. ದೇವರತಿ ಕುಂದ ಅವರು ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ವಿದ್ಯಾರ್ಥಿಗಳು.ಸಮಾವೇಶದಲ್ಲಿ ‘ಬ್ರಿಕ್ವೀಟಿಂಗ್‌’ ತಂತ್ರಜ್ಞಾನ ಬಳಸಿ ಕಾಫಿ ಸಿಪ್ಪೆಯಿಂದ ವಿದ್ಯುತ್ ಉತ್ಪಾದಿಸುವ ಪರಿಕಲ್ಪನೆಯನ್ನು ಈ ತಂಡವು ರಚಿಸಿತ್ತು. ನ. 30ರಂದು ಬಾಗಲಕೋಟೆಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ಇದಕ್ಕೆ ಎರಡನೇ ಸ್ಥಾನ ಲಭಿಸಿತ್ತು ಎಂದು ಕಾಲೇಜಿನ ಪ್ರಾಂಶುಪಾಲ ಸೀನಿವಾಸನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)