ಮಂಗಳವಾರ, ಮೇ 11, 2021
24 °C

ರಾಷ್ಟ್ರೀಯ ಆಹ್ವಾನ ವಾಲಿಬಾಲ್: ಐಒಬಿ ತಂಡದ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ಚೆನ್ನೈನ ಪ್ರಬಲ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ) ತಂಡ, ಎಲ್ಲೂರು ಯುವಕ ಮಂಡಲದ ಆಶ್ರಯದಲ್ಲಿ ಬುಧವಾರ ಆರಂಭವಾದ ರಾಷ್ಟ್ರೀಯ ಮಟ್ಟದ ಆಹ್ವಾನ ವಾಲಿಬಾಲ್ ಟೂರ್ನಿಯ `ಎ~ ಗುಂಪಿನ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ನೇರ ಸೆಟ್‌ಗಳಿಂದ ಸೋಲಿಸಿತು.ಐಒಬಿ ತಂಡ ಹೊನಲು ಬೆಳಕಿನಡಿ ನಡೆದ ಈ ಪಂದ್ಯದಲ್ಲಿ 25-21, 25-17, 27-25ರಲ್ಲಿ ಪೊಲೀಸ್ ತಂಡವನ್ನು ಹಿಮ್ಮೆಟ್ಟಿಸಿತು. ಆಕರ್ಷಕ ಆಟವಾಡಿದ ಐಒಬಿಯ ನವೀನ್‌ರಾಜ್ `ಪಂದ್ಯದ ಆಟಗಾರ~ ಗೌರವ ಪಡೆದರು.ವಿಶ್ವೇಶ್ವರ ಟ್ರೋಫಿಗಾಗಿ ನಡೆಯುತ್ತಿರುವ ಈ  ಟೂರ್ನಿಯಲ್ಲಿ ಐಓಬಿ, ಕೆಎಸ್‌ಪಿ ತಂಡಗಳ ಜತೆ ಎಲ್‌ಐಸಿ, ಬೆಂಗಳೂರಿನ ಬಿಎಸ್‌ಎನ್‌ಎಲ್, ಹರಿಯಾಣದ ಎಚ್‌ಎಸ್‌ಐಡಿಸಿ, ಕರ್ನಾಟಕ ಯೂತ್, ಮುಂಬೈನ ಆರ್‌ಸಿಆಫ್ ಮತ್ತು ಚೆನ್ನೈನ ಸದರ್ನ್ ರೈಲ್ವೆ ತಂಡಗಳು ಭಾಗವಹಿಸುತ್ತಿವೆ. ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.