ಭಾನುವಾರ, ಮೇ 29, 2022
30 °C

ರಾಷ್ಟ್ರೀಯ ಬ್ರಾಂಡ್‌ನತ್ತ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಬ್ರಾಂಡ್‌ನತ್ತ ಚಿತ್ತ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ `ಎಂಟಿಆರ್ ಫುಡ್ಸ್~ನ ವೈವಿಧ್ಯಮಯ ತಿನಿಸುಗಳ ವಹಿವಾಟನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಿ ರಾಷ್ಟ್ರೀಯ ಬ್ರಾಂಡ್ ಆಗಿ ಬೆಳೆಯಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಶರ್ಮಾ ಹೇಳಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಅಪ್ಪಟ ದಕ್ಷಿಣ ಭಾರತದ ವೈವಿಧ್ಯಮಯ ತಿನಿಸುಗಳ ಹೊಸ ಶ್ರೇಣಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಹತ್ತು ಬಗೆಯ ತಿನಿಸುಗಳಾದ ಚಕ್ಕುಲಿ, ಬೆಣ್ಣೆ ಚಕ್ಕುಲಿ, ಪಾಲಕ್ ಚಕ್ಕುಲಿ,  ನಿಪ್ಪಟ್ಟು, ಕೋಡುಬಳೆ, ಖಾರಾ ಬೂಂದಿ, ಕಾರ್ನ್‌ಫ್ಲೇಕ್ಸ್ ಮಿಕ್ಸರ್, ಅವಲಕ್ಕಿ ಮಿಕ್ಸರ್, ದಪ್ಪ ಸೇವು ಮತ್ತು ಓಂಪುಡಿ ಪರಿಚಯಿಸಲಾಗಿದೆ. ದಕ್ಷಿಣ ಭಾರತದ ವಿಶಿಷ್ಟ ತಿನಿಸುಗಳ ಮಾರುಕಟ್ಟೆ ವಿಶಾಲವಾಗಿದ್ದು, ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಎಂಟಿಆರ್ ಫುಡ್ಸ್ ಕಾರ್ಯಪ್ರವೃತ್ತವಾಗಿದೆ. ಮೂರು ವರ್ಷಗಳಲ್ಲಿ ವಹಿವಾಟು ದುಪ್ಪಟ್ಟುಗೊಳಿಸಲು ನಿರ್ಧರಿಸಲಾಗಿದೆ ಎಂದರು.ನಾರ್ವೆಯ ಓರ್ಕ್ಲಾ ಬ್ರಾಂಡ್‌ನ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿರುವ ಎಂಟಿಆರ್ ಫುಡ್ಸ್, ಹಣ್ಣು, ತರಕಾರಿ, ಜಾಮ್ ಮತ್ತು ಕೆಚ್‌ಅಪ್ ವಲಯದಲ್ಲಿಯೂ ವಹಿವಾಟು ವಿಸ್ತರಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಉದ್ದಿಮೆಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಶರ್ಮಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.