ಶುಕ್ರವಾರ, ಜೂನ್ 18, 2021
22 °C

ರಾಷ್ಟ್ರೀಯ ಸ್ನೂಕರ್‌: ಅಡ್ವಾಣಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಕರ್ನಾಟಕದ ಪಂಕಜ್ ಅಡ್ವಾಣಿ ಇಲ್ಲಿ ನಡೆದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ಪಂಕಜ್‌  6-3ರಲ್ಲಿ ರೈಲ್ವೇಸ್‌ನ ಕಮಲ್‌ ಚಾವ್ಲಾ ಎದುರು ಗೆಲುವು ಸಾಧಿಸಿದರು.ಫೈನಲ್‌ಗೆ ವಿದ್ಯಾ: ಮಹಿಳಾ ವಿಭಾಗದಲ್ಲಿ ಕರ್ನಾಟಕದ ವಿದ್ಯಾ ಪಿಳ್ಳೈ ಪ್ರಶಸ್ತಿ ಘಟ್ಟ ತಲುಪಿದ್ದಾರೆ. ಸೆಮಿಫೈನಲ್‌ನಲ್ಲಿ ವಿದ್ಯಾ 3–1ರಲ್ಲಿ ಮಧ್ಯಪ್ರದೇಶದ ಅಮೀ ಕಮಾನಿ ಎದುರು ಗೆಲುವು ಸಾಧಿಸಿದರು.ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಕರ್ನಾಟಕದ ಚಿತ್ರಾ ಮಗಿಮೈರಾಜ್‌ 3–0 ಫ್ರೇಮು ಗಳಿಂದ ಮಹಾರಾಷ್ಟ್ರದ ನೀತಾ ಸಾಂಗ್ವಿ  ಅವರನ್ನು ಮಣಿಸಿದರು. ಫೈನಲ್‌ನಲ್ಲಿ ಚಿತ್ರಾ ಹಾಗೂ ವಿದ್ಯಾ ಪೈಪೋಟಿ ನಡೆಸಲಿದ್ದು, ಯಾರೇ ಗೆದ್ದರೂ ಪ್ರಶಸ್ತಿ ಕರ್ನಾಟಕದ ಪಾಲಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.