ಭಾನುವಾರ, ಮೇ 16, 2021
28 °C

ರಾಸಾಯನಿಕ ಗೊಬ್ಬರ ಬಳಕೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಅತಿಯಾದ ರಾಸಾನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಭೂಮಿಯ ಸತ್ವ ಕಳೆದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರನ್ನು ಸಾವಯುವ ಕೃಷಿಯತ್ತ ಕೊಂಡೊಯ್ಯುವುದು ಅತ್ಯವಶ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಎನ್.ವಿ.ಚಂದ್ರಶೇಖರ ತಿಳಿಸಿದರು.ಭೂಚೇತನ ಯೋಜನೆ ಅಡಿಯಲ್ಲಿ ಇತ್ತೀಚೆಗೆ ಇಲ್ಲಿಗೆ ಸಮೀಪದ ಮ್ಯಾಕಲ್‌ಝರಿ ಗ್ರಾಮದ ಚನ್ನಬಸಯ್ಯ ಕಾರಡ ಗಿಮಠ ಅವರ ಹೊಲದಲ್ಲಿ ಕೃಷಿ ಇಲಾಖೆಯ ಮತ್ತು ಕಿಸಾನ್ ಭಾರತಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮೆಕ್ಕೆ ಜೋಳ ಬೆಳೆಯ ಕ್ಷೇತ್ರೋತ್ಸವದಲ್ಲಿ ಅವರು ಮಾತನಾಡಿದರು.ಭೂಮಿಯಲ್ಲಿ ಅಗತ್ಯ ಪೋಷ ಕಾಂಶಗಳನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಎರೆಹುಳ ಗೊಬ್ಬರ, ಜೀವಾ ಮೃತ, ಬೀಜಾಮೃತ, ಪಂಚಗವ್ಯ, ಬಯೋಡಜಿಸ್ಟ್‌ದಿಂದ ದೊರೆಯುವ ರಸಸಾರವನ್ನು ಬಳಿಕೆ ಮಾಡಬೇಕು. ಆ ಮೂಲಕ ಹೆಚ್ಚು ಇಳುವರಿಯನ್ನು ತೆಗೆಯಬಹುದು ಎಂದು ಅವರು ವಿವರಿಸಿದರು.ರಾಜ್ಯದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸರ್ಕಾರ ಸಬ್ಸಿಡಿ ದರದಲ್ಲಿ ಬೀಜ ಗಳನ್ನು ವಿತರಣೆ ಮಾಡುತ್ತಿದೆ. ರೈತರು ಕೃಷಿ ತಜ್ಞರ ಜೊತೆಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಕಿಸಾನ್ ಭಾರತ ಟ್ರಸ್ಟ್‌ನ ಭೀಮರಾವ್ ದೇಶಪಾಂಡೆ ಮಾತನಾಡಿ, ರೈತರು ಸಾವಯುವ ಕೃಷಿಯನ್ನು ಬದಿಗೊತ್ತಿ ರಾಸಾಯನಿಕ ಗೊಬ್ಬರದ ಬೆನ್ನು ಹತ್ತಿದ್ದರಿಂದ ಭೂಮಿ ಬರಡಾಗುತ್ತಿದೆ.ಬಂಜರಾಗುತ್ತಿರುವ ಭೂಮಿಗೆ ಮರುಸತ್ವ ಕೊಡಲು ಸಾವಯವ ಕೃಷಿಯನ್ನು ಅಳವಡಿಸಿ ಕೊಳ್ಳುವುದು ಅನಿವಾರ್ಯ ವಾಗಿದೆ ಎಂದು ತಿಳಿಸಿದರು.ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ ಅವರು ಸಾವಯುವ ಕೃಷಿ ಬೆಳವಣಿಗೆಗೆ ಇಲಾಖೆ ಯಲ್ಲಿ ಹಲವು ಯೋಜನೆಗಳಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಕುಂಟೋಜಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಚನ್ನಬಸಯ್ಯ ಕಾರಡಗಿಮಠ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ದೊಣ್ಣೆಗುಡ್ಡ, ವಿ.ಎಸ್.ಭಾವಿ, ಅಂದಪ್ಪ ಅಂಗಡಿ, ಶರಣಪ್ಪ ಅವಾರಿ, ಮಲ್ಲಿಕಾ ರ್ಜುನ ಕಲ್ಲೂರ, ಅಮರೇಶ ಕುಂಬಾರ ಹಾಜರಿದ್ದರು. ಸಹಾಯಕ ಕೃಷಿ ಅಧಿಕಾರಿ ವಿ.ಟಿ. ವಿರಕ್ತಮಠ ಸ್ವಾಗತಿಸಿದರು. ಕೆ.ಎಚ್. ಗಂಗೂರ ನಿರೂಪಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.