ವಾಷಿಂಗ್ಟನ್, (ಪಿಟಿಐ): `ಭಾರತದ ಲೋಕಸಭೆಗೆ 2014ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಮಂತ್ರಿ ಹುದ್ದೆಗೆ ಕಾಂಗ್ರೆಸ್ನ ಯುವ ನಾಯಕ ರಾಹುಲ್ ಗಾಂಧಿ ಮತ್ತು ಗುಜರಾತ್ನ ವಿವಾದಿತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಧ್ಯೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ~.

-ಹೀಗೆಂದು ಅಮೆರಿಕದ ಕಾಂಗ್ರೆಸ್ನ ಸ್ವತಂತ್ರ ಸಂಶೋಧನಾ ಸೇವಾ ಸಂಸ್ಥೆ (ಸಿಆರ್ಎಸ್) ಈಚೆಗೆ ನೀಡಿರುವ ವರದಿ ಹೇಳಿದೆ. ಭವಿಷ್ಯದ ಪ್ರಧಾನಿ ಅಭ್ಯರ್ಥಿ ಕುರಿತು ಭಾರತದಲ್ಲಿ ಗಂಭೀರ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಅಮೆರಿಕ ಕಾಂಗ್ರೆಸ್ನ ಈ ವರದಿ ಕುತೂಹಲ ಮೂಡಿಸಿದೆ. ಮತ್ತೆ ಅಧಿಕಾರದ ಕನಸು ಕಾಣುತ್ತಿರುವ ವಿರೋಧ ಪಕ್ಷ ಬಿಜೆಪಿಯಿಂದ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಲಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭವಿಷ್ಯದ ಪ್ರಧಾನಿಯಾಗಿ ಬಿಂಬಿಸುವ ಕುರಿತು ಕಾಂಗ್ರೆಸ್ನಲ್ಲಿ ಚಿಂತನೆ ನಡೆಯುತ್ತಿದೆ ಎಂದು ವರದಿ ವಿವರಿಸಿದೆ.

ಭಾರತದ ರಾಜಕೀಯ ಬೆಳವಣಿಗೆಗಳ ಸಂಪೂರ್ಣ ಚಿತ್ರಣ ನೀಡಿರುವ ವರದಿಯಲ್ಲಿ, 2014ರ ಚುನಾವಣೆ ರಾಹುಲ್ ಮತ್ತು ಮೋದಿ ನಡುವಿನ ಹೋರಾಟವಾಗಲಿದೆಯೇ ಎಂಬ ಬಗ್ಗೆ ನಿಖರವಾಗಿ ಏನನ್ನೂ ಹೇಳಿಲ್ಲ.
`2009ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಭರವಸೆಯ ಯುವ ನಾಯಕ ರಾಹುಲ್ ಅವರನ್ನು ಮುಂದಿನ ಪ್ರಧಾನಿ ಎಂದೇ ಕಾಂಗ್ರೆಸ್ ಬಿಂಬಿಸಿತ್ತು~ ಎಂದು ಸೆಪ್ಟೆಂಬರ್ 1ರಂದು ಸಲ್ಲಿಸಲಾದ ಸಿಆರ್ಎಸ್ ವರದಿಯಲ್ಲಿ ತಿಳಿಸಲಾಗಿದೆ.

ಕೇವಲ ಶಾಸನಸಭೆಯ ಪ್ರತಿನಿಧಿಗಳಿಗೆ ಮಾತ್ರ ಲಭ್ಯವಿರುವ ವರದಿಯ ರಹಸ್ಯ ಅಂಶಗಳು ಸಾಮಾನ್ಯವಾಗಿ ಸಾರ್ವಜನಿಕರಿಗೆ ದೊರೆಯುವುದಿಲ್ಲ. ಆದರೆ, ಅನೇಕ ಬಾರಿ ಚಿಂತಕರ ಚಾವಡಿ ಮತ್ತು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ ಯತ್ನದಿಂದ ವರದಿಯಲ್ಲಿನ ಕೆಲವು ಅಂಶಗಳನ್ನು ಬಹಿರಂಗಗೊಳಿಸಲಾಗುತ್ತದೆ. ಅದೇ ರೀತಿ ಅಮೆರಿಕದ ವಿಜ್ಞಾನಿಗಳ ಒಕ್ಕೂಟ ಈ ವರದಿಯಲ್ಲಿನ ಅನೇಕ ಅಂಶಗಳನ್ನು ಮಂಗಳವಾರ ಬಹಿರಂಗಗೊಳಿಸಿದೆ.

ರಾಹುಲ್ ಕಾಂಗ್ರೆಸ್ನ ಉತ್ತರಾಧಿಕಾರಿ ಎಂಬ ಬಗ್ಗೆ ಪಕ್ಷದಲ್ಲಿ ಯಾರಲ್ಲೂ ಸಂದೇಹವಿಲ್ಲ. ಆದರೆ, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಬಲ್ಲ ಮತ್ತು ಚುನಾವಣಾ ತಂತ್ರಗಾರಿಕೆ ಹೆಣೆಯುವ ಸಾಮರ್ಥ್ಯ ಅವರಲ್ಲಿದೆಯೇ ಎಂಬ ಪ್ರಶ್ನೆಗಳು ಕೇಳಿಬಂದಿವೆ.

ಸೋನಿಯಾ ಅವರಿಗೆ ಅವರ ವಿದೇಶಿ ಮೂಲ ಅಡ್ಡಿಯಾಗಿತ್ತು. ಹೀಗಾಗಿ ಅವರು ಪ್ರಧಾನಿ ಹುದ್ದೆಯಿಂದ ಹಿಂದೆ ಸರಿಯಬೇಕಾಯಿತು. ಆದರೆ ರಾಹುಲ್ ವಿಷಯದಲ್ಲಿ ಹಾಗಾಗದು. ಪಕ್ಷ ಅವರನ್ನು ಈಗಾಗಲೇ ಮುಂದಿನ ಪ್ರಧಾನಿ ಎಂದೇ ಮಾನಸಿಕವಾಗಿ ಒಪ್ಪಿಕೊಂಡಾಗಿದೆ ಎಂದು ವರದಿ ವಿಶ್ಲೇಷಿಸಿದೆ.

ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಗೆ ಮೋದಿ ಮುಂಚೂಣಿಯಲ್ಲಿದ್ದಾರೆ. ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಖಾಸಗೀಕರಣಕ್ಕೆ ಬೆಂಬಲವಾಗಿ ನಿಂತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಕ್ಷ ಆಂತರಿಕ ವಿದ್ಯಮಾನಗಳಿಂದ ಸದ್ಯ ಹಿನ್ನಡೆ ಅನುಭವಿಸಿದರೂ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡುತ್ತದೆ ಎಂದು ವರದಿ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.