ಗುರುವಾರ , ಮೇ 19, 2022
21 °C

ರಾಹುಲ್ ಸಂಪುಟಕ್ಕೆ ಅತ್ಯಗತ್ಯ - ಕೃಷ್ಣ ಉವಾಚ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಣವ್ ಮುಖರ್ಜಿ ಅವರ ರಾಜೀನಾಮೆ ಬೆನ್ನಲ್ಲೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ರಾಹುಲ್ ಗಾಂಧಿ ಸಂಪುಟ ಸೇರುವ ಅಗತ್ಯವಿದೆ ಎಂದು ಬುಧವಾರ ಬಲವಾಗಿ ಪ್ರತಿಪಾದಿಸಿದ್ದಾರೆ.ಪ್ರಣವ್‌ಮುಖರ್ಜಿ ಹಾಗೂ ವೀರಭದ್ರಸಿಂಗ್ ಅವರ ರಾಜೀನಾಮೆ ನಂತರ ಸಂಪುಟ ಪುನಾರಚನೆಯ ಕೂಗು ಎದ್ದಿರುವ ಸಮಯದಲ್ಲಿ ಕೃಷ್ಣಾ ಅವರ ಈ ಹೇಳಿಕೆ ಭಾರಿ ಮಹತ್ವ ಪಡೆದಿದೆ.ಈಗಾಗಲೇ ಪ್ರಧಾನ ಮಂತ್ರಿ ಮನಮೋಹನಸಿಂಗ್ ಅವರು ರಾಹುಲ್ ಅವರಿಗೆ ಸಂಪುಟ ಸೇರಲು ಆಹ್ವಾನ ನೀಡಿದ್ದಾರೆ ಎಂದು ಹೇಳಿರುವ ಕೃಷ್ಣ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಹುಲ್ ಸಂಪುಟಕ್ಕೆ ಸೇರಿ ಪರಿಹಾರ ಸೂಚಿಸಬೇಕಾಗಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.