ಬುಧವಾರ, ಮೇ 18, 2022
28 °C

ರಿಯಾಯಿತಿ: ನೇರಬ್ಯಾಂಕ್ ಖಾತೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ತಾಲ್ಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಸಭೆ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯಲ್ಲಿ ಗುರುವಾರ ನಡೆಯಿತು.ಸಭೆಯಲ್ಲಿ 2012-13ನೇ ಸಾಲಿನ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಲಿಂಕ್ ಡಾಕ್ಯುಮೆಂಟ್ ಅನುದಾನದ ಯೋಜನೆ, ಯೋಜನೇತರ ಅನುದಾನಗಳಿಗೆ ಅನುಮೋದನೆ ನೀಡಲಾಯಿತು.ಸುವರ್ಣ ಭೂಮಿ ಯೋಜನೆ ಅಡಿ ಸಂಬಂಧಿಸಿದ ಇಲಾಖೆಗಳಿಂದ ಕಳೆದ ವರ್ಷದ ಫಲಾನುಭವಿಗಳನ್ನು ಹೊರತುಪಡಿಸಿ, ನೂತನ ಫಲಾನುಭವಿಗಳಿಗೆ 1 ಎಕರೆಗ್ಙೆ 5 ಸಾವಿರದಂತೆ 2 ಹೆಕ್ಟೇರ್‌ಗೆ ್ಙ 10 ಸಾವಿರಗಳಷ್ಟು ಮಾತ್ರ ನೀಡಬಹುದಾಗಿದೆ. ತೋಟಗಾರಿಕಾ ಇಲಾಖಾ ವತಿಯಿಂದ ಅಧಿಕೃತ ಪರವಾನಗಿದಾರರಿಂದ ಮೈಲುತುತ್ತವನ್ನು ಖರೀದಿಸಿ ಬಳಸಿದಂತಹ ರೈತಾಪಿ ವರ್ಗಕ್ಕೆಶೇ 50ರಷ್ಟು ರಿಯಾಯಿತಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಒದಗಿಸಲಾಗುವುದು ಎಂದು ಹಿರಿಯ ಸಹಾಯಕ ಕೃಷಿ ನಿರ್ದೇಶಕ ಡಾ.ರಾಮಚಂದ್ರಪ್ಪ ತಿಳಿಸಿದರು.ಕುಂಬತ್ತಿ ಶಾಲೆಯಲ್ಲಿ ಅಡುಗೆ ಕೊಠಡಿಯ ಕಟ್ಟಡವನ್ನು ಪೂರ್ಣಗೊಳಿಸುವ ಮುನ್ನವೇ ಬಿಲ್ ಪಡೆದಿದ್ದು, ಕಟ್ಟಡವು ಶಿಥಿಲತೆಯಿಂದ ಕೂಡಿದೆ. ಅವ್ಯವಸ್ಥೆಯ ಆಗರವಾಗಿದೆ ಎಂದು ಸದಸ್ಯ ನಿಂಗಪ್ಪ ಬರಗಿ ಆರೋಪಿಸಿದಾಗ, ಸಂಬಂಧಪಟ್ಟ ಅಧಿಕಾರಿಗೆ ಕ್ರಮ ಕೈಗೊಳ್ಳುವಂತೆ ಕಾರ್ಯ ನಿರ್ವಹಣಾಧಿಕಾರಿ ಸೂಚಿಸಿದರು.ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರ ಕರ್ತವ್ಯ ನಿರ್ವಹಣೆ ಮತ್ತು ಪರಿಪಾಲನೆಯ ವಿವರಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಡಬೇಕು. ಸಮಿತಿಯ ಸಭೆ ನಡೆಯುವಾಗ ಸಂಬಂಧಿಸಿದ ಇಲಾಖೆಯವರ ಪ್ರಗತಿಯ ಮಾಹಿತಿಯನ್ನು ಸಂಪೂರ್ಣವಾಗಿ ಕಾರ್ಯ ನಿರ್ವಹಣಾಧಿಕಾರಿ ಪಡೆದು ಕೊಡಬೇಕು. ಇದರಲ್ಲಿ ಯಾರದ್ದೇ ಬೇಜವಾಬ್ದಾರಿತನ ಸಹಿಸಲಾಗದು ಎಂದು ಜಯಶೀಲಪ್ಪ ತಿಳಿಸಿದರು.ವಿದ್ಯುತ್ ಸಂಪರ್ಕ ಇಲ್ಲದ ಅಂಗನವಾಡಿ ಕಟ್ಟಡಗಳಿಗೆ ಸಮೀಪ ಇರುವ ವಿದ್ಯುತ್ ಕಂಬದಿಂದ ಒಂದು ಕೆ.ವಿ. ಸಾಮರ್ಥ್ಯದ ವಿದ್ಯುತ್ ಸಂಪರ್ಕವನ್ನು ಪಡೆದು ಎರಡು ವಿದ್ಯುತ್ ಬಲ್ಬ್ ಹಾಗೂ ಒಂದು ಫ್ಯಾನ್ ಅನ್ನು ಅಳವಡಿಸಲು  ್ಙ 5 ಸಾವಿರಗಳ ವೆಚ್ಚ ಮಾಡಲು ಸಿಡಿಪಿಒ ಜೋಯಪ್ಪ ಅವರಿಗೆ ಅನುಮತಿ ನೀಡಲಾಯಿತು.ಸಾಮಾಜಿಕ ಮತ್ತು ನ್ಯಾಯ ಸಮಿತಿ ಅಧ್ಯಕ್ಷ ಜಯಶೀಲಪ್ಪ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ಮೀನಾಕ್ಷಮ್ಮ, ಕಾರ್ಯ ನಿರ್ವಹಣಾಧಿಕಾರಿ ಪುಷ್ಪಾ ಕಮ್ಮೋರ್, ಸಮಿತಿ ಸದಸ್ಯರಾದ ವೀರಭದ್ರಪ್ಪ ಗೌಡ್ರು, ಪರಮೇಶ್ವರಪ್ಪ, ಜೆ. ಲಕ್ಷ್ಮೀ, ಈರಪ್ಪ ಗಂಟೇರ್ ಹಾಗೂ ಕೃಷಿ, ಪಶುಸಂಗೊಪನೆ, ಸಮಾಜ ಕಲ್ಯಾಣ, ಆರೋಗ್ಯ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಬಿಸಿಎಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.