ಭಾನುವಾರ, ಮಾರ್ಚ್ 7, 2021
20 °C

ರಿಯೊ ಒಲಿಂಪಿಕ್ಸ್‌: ಭಾರತೀಯ ಕ್ರೀಡಾಪಟುಗಳಿಗೆ ಶುಭ ಕೋರಿದ ರಾಷ್ಟ್ರಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯೊ ಒಲಿಂಪಿಕ್ಸ್‌: ಭಾರತೀಯ ಕ್ರೀಡಾಪಟುಗಳಿಗೆ ಶುಭ ಕೋರಿದ ರಾಷ್ಟ್ರಪತಿ

ನವದೆಹಲಿ(ಪಿಟಿಐ):  ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳಿಗೆ ಉತ್ತಮ ಸಾಧನೆ ಮಾಡುವಂತೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಶುಭ ಕೋರಿದ್ದಾರೆ.ಇತರ ರಾಷ್ಟ್ರಗಳ ಕ್ರೀಡಾಪಟುಗಳೊಂದಿಗೆ ಒಗ್ಗಟ್ಟು ಮತ್ತು ಉತ್ತಮ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ.ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಒಲಿಂಪಿಕ್ಸ್‌ ಉತ್ತಮ ವೇಧಿಕೆಯಾಗಿದೆ. ಆಟಗಾರರನ್ನು ಪ್ರೋತ್ಸಹಿಸುವಂತೆ ಭಾರತದ ರಿಯೊ ಒಲಿಂಪಿಕ್ಸ್‌ನ ಕಾರ್ಯದರ್ಶಿ ರಾಕೇಶ್‌ ಗುಪ್ತಾ ಅವರಿಗೆ ತಿಳಿಸಿದ್ದಾರೆ.ವಿವಿಧ ಕ್ರೀಡೆಗಳಲ್ಲಿ ಎಲ್ಲ ರಾಷ್ಟ್ರಗಳ ಆಟಗಾರಿಗೂ ಭಾಗವಹಿಸುವ ಅವಕಾಶ ಕಲ್ಪಸಿರುವ ಒಲಿಂಪಿಕ್ಸ್‌ ಸಂಪ್ರದಾಯದ ಬಗ್ಗೆ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದರು.ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ ಅಂತರ ರಾಷ್ಟ್ರೀಯಮಟ್ಟದಲ್ಲಿ ರಾಷ್ಟ್ರದ ಘನತೆ ಹೆಚ್ಚಿಸಬೇಕು ಎಂದರು. ರಿಯೊ ಒಲಿಂಪಿಕ್ಸ್‌ನ ವಿವಿಧ ವಿಭಾಗಗಳಲ್ಲಿ ಭಾರತದ 118 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.