ಆಹಾರ ಉತ್ಪನ್ನಗಳ ರೀಟೇಲ್ ಚೈನ್ ಆಗಿರುವ ಗೋದ್ರೇಜ್ ನೇಚರ್ಸ್ ಬ್ಯಾಸ್ಕೆಟ್, ಹಾಸ್ಪಿಟಾಲಿಟಿ ವಿದ್ಯಾರ್ಥಿಗಳಿಗೆಂದು ಎರಡು ತಿಂಗಳ ಇಂಟರ್ನ್ಶಿಪ್ ಅವಕಾಶ ನೀಡಿದೆ.
ಈ ಮೂಲಕ ವಿದ್ಯಾರ್ಥಿಗಳಿಗೆ ಉದ್ಯಮವನ್ನು ಅರಿತುಕೊಳ್ಳಲು, ಸವಾಲುಗಳನ್ನು ಎದುರಿಸಲು, ಅಗತ್ಯಕೌಶಲ್ಯವನ್ನು ರೂಢಿಸಿಕೊಳ್ಳಲು ಅದ್ಭುತ ಅವಕಾಶ ಒದಗಿಸಿದೆ.

ಅಭ್ಯರ್ಥಿಗೆ ಸ್ಟೋರ್ನ ಕಾರ್ಯನಿರ್ವಹಣೆ, ಗ್ರಾಹಕರ ನಿರ್ವಹಣೆ, ಸಂಗ್ರಹ ನಿರ್ವಹಣೆ ಮತ್ತು ಇತರ ಪ್ರಮುಖ ಅಂಶಗಳನ್ನು ಅರಿತುಕೊಳ್ಳಲು ಇಂಟರ್ನ್ಶಿಪ್ ಸೂಕ್ತ ವೇದಿಕೆ ಒದಗಿಸಲಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಗೋದ್ರೇಜ್ ನೇಚರ್ಸ್ ಬ್ಯಾಸ್ಕೆಟ್ನ ಫುಡ್ ಕನ್ಸಲ್ಟೆಂಟ್ಗಳಾಗುವ ಅವಕಾಶವನ್ನೂ ನೀಡಿದೆ.

ಇತ್ತೀಚೆಗೆ ಗೋದ್ರೇಜ್ ಗ್ರೂಪ್ ವತಿಯಿಂದ ಆಯೋಜಿಸಲಾಗಿದ್ದ ಅಂತರ ಕಾಲೇಜು ಶೆಫ್ ಸ್ಪರ್ಧೆಯ ವಿಜೇತರಾದ ಕ್ರೈಸ್ಟ್ ವಿಶ್ವವಿದ್ಯಾಲಯದ ಮೆಲ್ವಿನ್ ರೂಬೆನ್ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದಾರೆ. ನೇಚರ್ಸ್ ಬ್ಯಾಸ್ಕೆಟ್ ಇದೇ ಮೊದಲ ಬಾರಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮುಂದೆ ಈ ಕಾರ್ಯಕ್ರಮ ಬೆಂಗಳೂರು, ಮುಂಬೈ ಮತ್ತು ದೆಹಲಿಯ ಹೋಟೆಲ್ ಮ್ಯೋನೇಜ್ಮೆಂಟ್ ಇನ್ಸ್ಟಿಟ್ಯೂಟ್ಗಳ ವಿದ್ಯಾರ್ಥಿಗಳಿಗೂ ಅನ್ವಯಿಸುವಂತೆ ನಡೆಸಲು ಯೋಜನೆ ರೂಪಿಸಿರುವುದಾಗಿ ತಿಳಿಸಿದೆ.

ಗೋದ್ರೇಜ್ ನೇಚರ್ಸ್ ಬ್ಯಾಸ್ಕೆಟ್ನ ಕಾರ್ಯನಿರ್ವಾಹಕ ಅಧಿಕಾರಿ ಮೋಹಿತ್ ಖತ್ತಾರ್ ಮಾತನಾಡಿ, ``ಹಾಸ್ಪಿಟಾಲಿಟಿ ವಿದ್ಯಾರ್ಥಿಗಳಿಗೆ ಈ ಇಂಟರ್ನ್ಶಿಪ್ ಸುವರ್ಣಾವಕಾಶವಾಗಿದೆ. ಆಹಾರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೊಂದಿರುವ ಸೃಜನಾತ್ಮಕ ಚಿಂತನೆ ಮತ್ತು ಕಲ್ಪನೆಗಳಿಗೆ ನಿಶ್ಚಿತ ರೂಪ ನೀಡುವ ನಿಟ್ಟಿನಲ್ಲಿ ಅವರಿಗೆ ನೆರವಾಗಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ~ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಇಂಟರರ್ನ್ಶಿಪ್ ವಿಜೇತ ವಿದ್ಯಾರ್ಥಿ ಕ್ರೈಸ್ಟ್ ಕಾಲೇಜಿನ ಮೆಲ್ವಿನ್ ರೂಬೆನ್, ``ಹಾಸ್ಪಿಟಾಲಿಟಿ ವಿದ್ಯಾರ್ಥಿಯಾಗಿ ಇಂಥ ಹೆಸರಾಂತ ಫುಡ್ ಚೈನ್ ಜತೆ ಕಾರ್ಯನಿರ್ವಹಿಸಲು ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.