ರೂ. 1,259 ಕೋಟಿ ಬೆಳೆ ಸಾಲ ವಿತರಣೆ

ಬೆಂಗಳೂರು: `ಪ್ರಸಕ್ತ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ 1ರ ಬಡ್ಡಿ ದರದಲ್ಲಿ ರೂ. 1,259 ಕೋಟಿ ಬೆಳೆ ಸಾಲ ನೀಡಲಾಗಿದೆ~ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
`ಎರಡು ತಿಂಗಳಲ್ಲಿ ಪಡೆದ ದಾಖಲೆ ಪ್ರಮಾಣದ ಸಾಲ ಇದು. ಒಟ್ಟು 3,43,641 ಮಂದಿ ರೈತರು ಹೊಸದಾಗಿ ಸಾಲ ಪಡೆದಿದ್ದಾರೆ~ ಎಂದು ವಿವರಿಸಿದರು.
`ವಿಜಾಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರೈತರು ಅತಿ ಹೆಚ್ಚು ಸಾಲ ಪಡೆದಿದ್ದಾರೆ. `ಪ್ರತಿವಾರವೂ ಶೇ 1ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯ ಪ್ರಗತಿ ಪರಿಶೀಲಿಸಲಾಗುವುದು~ ಎಂದರು.
`2010-11ನೇ ಸಾಲಿನಲ್ಲಿ ಶೇ 88ರಷ್ಟು ಸಾಲ ವಸೂಲಾಗಿದೆ. ಈ ವರ್ಷ ಅದು ಶೇ 95ರಷ್ಟಾಗುವ ಸಾಧ್ಯತೆ ಇದೆ~ ಎಂದು ನುಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.