ಮಂಗಳವಾರ, ಜೂನ್ 15, 2021
24 °C

ರೂ 2400 ಕೋಟಿ ತೆರಿಗೆ: ನೋಕಿಯಾಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಮೊಬೈಲ್‌ ಫೋನ್‌ ಹ್ಯಾಂಡ್‌ಸೆಟ್‌ ತಯಾರಿಕಾ ಕಂಪೆನಿ ‘ನೋಕಿಯಾ’ಗೆ ಮತ್ತೊಂದು ಆಘಾತ. ₨2400 ಕೋಟಿ ತೆರಿಗೆ ಪಾವ ತಿಸುವಂತೆ ನೋಕಿಯಾಗೆ ತಮಿಳುನಾಡು ಸರ್ಕಾರ ನೋಟಿಸ್‌ ಜಾರಿ ಮಾಡಿದೆ.ಚೆನ್ನೈನಲ್ಲಿರುವ ನೋಕಿಯಾ ಘಟಕ ದಲ್ಲಿ ತಯಾರಿಸಿದ ಹ್ಯಾಂಡ್‌ಸೆಟ್‌ಗ ಳನ್ನು ವಿದೇಶಕ್ಕೆ ರಫ್ತು ಮಾಡುವ ಬದ ಲಾಗಿ ದೇಶದ ಮಾರುಕಟ್ಟೆಯಲ್ಲಿಯೇ  ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪೆನಿ ಮಾರಾಟ ತೆರಿಗೆ ಪಾವತಿಸಬೇಕಿದೆ ಎಂದು ತಮಿಳು ನಾಡು ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ.

ತೆರಿಗೆ ಇಲಾಖೆ ಜಾರಿ ಮಾಡಿರುವ ನೋಟಿಸ್‌ ವಿರುದ್ಧ ನೋಕಿಯಾ, ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದೆ.ಈ ಮಧ್ಯೆ, ಮೈಕ್ರೊಸಾಫ್ಟ್‌ ಕಂಪೆನಿಗೆ ಮಾರಾಟವಾಗಿರುವ ನೋಕಿಯಾ, ಚೆನ್ನೈನಲ್ಲಿರುವ ಹ್ಯಾಂಡ್‌ಸೆಟ್‌ ತಯಾ ರಿಕಾ ಘಟಕ ಸೇರಿದಂತೆ ಭಾರತದಲ್ಲಿನ ತನ್ನೆಲ್ಲಾ ಸ್ಥಿರಾಸ್ತಿಗಳನ್ನೂ ಮಾಸಾಂತ್ಯದ ವೇಳೆಗೆ   ಹಸ್ತಾಂತರಿಸುವ ಪ್ರಕ್ರಿಯೆಗೆ ಸಜ್ಜಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.