ಶಿಡ್ಲಘಟ್ಟ: ದಕ್ಷಿಣ ಮತ್ತು ಪೂರ್ವ ಯೂರೋಪ್, ಮೆಡಿಟರೇನಿಯನ್ ದಿಕ್ಕಿನಿಂದ ಚಳಿಗಾಲದ ಅತಿಥಿಗಳಾಗಿ ಶಿಡ್ಲಘಟ್ಟದ ಅಮ್ಮನಕೆರೆಗೆ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಹಕ್ಕಿಗಳು ಆಗಮಿಸಿವೆ.

ಮೆಟ್ಟುಗಾಲು ಹಕ್ಕಿ ಅಥವಾ ನೀರುಗೊರವ ಎಂದು ಕರೆಯುವ ಈ ಹಕ್ಕಿಗಳು ಮಧ್ಯ ಮತ್ತು ದಕ್ಷಿಣ ಅಮೆರಿಕಾ, ಆಫ್ರಿಕಾ, ಏಷಿಯಾ ಖಂಡಗಳ್ಲ್ಲಲಿ ಕಂಡುಬರುತ್ತವೆ. ಚಳಿಗಾಲದ ಅತಿಥಿಗಳಾಗಿ ಆಗಮಿಸುವ ಇವು ಭಾರತ, ಬಾಂಗ್ಲಾದೇಶ, ಶ್ರಿಲಂಕಾ ದೇಶಗಳಲ್ಲಿ ಹರಡುತ್ತವೆ.

ಪಾರಿವಾಳದಷ್ಟು ದೊಡ್ಡದಾದ ಕರಿಯ ಬಣ್ಣದ ಹಕ್ಕಿಯಿದು. ಇದರ ಗುಲಾಬಿ ಬಣ್ಣದ ಕಾಲುಗಳು ಸ್ಟ್ರಾ ರೀತಿಯಿದ್ದು, ಒಂದು ಅಡಿಯಷ್ಟು ಉದ್ದವಿರುತ್ತವೆ. ನೀಳವಾದ ಕಪ್ಪು ಕೊಕ್ಕು. ನೀರಲ್ಲೇ ಕೆದಕುತ್ತ ಹುಳುಗಳು, ಮೀನುಗಳು ಇತ್ಯಾದಿ ತಿನ್ನುತ್ತಿರುತ್ತವೆ. ಸಾಮಾನ್ಯವಾಗಿ ಜೋಡಿಗಳಲ್ಲಿ ಅಥವಾ ಚದುರಿದ ಗುಂಪುಗಳಲ್ಲಿ ನೀರಲ್ಲಿ ಮೇಯುತ್ತಿರುತ್ತವೆ.

ಪಟ್ಟಣ ಹೊರವಲಯದ ಅಮ್ಮನಕೆರೆಯಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಗುಂಪಿನಲ್ಲಿರುವ ಈ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಹಕ್ಕಿಗಳು ಆಗಾಗ ಒಟ್ಟೊಟ್ಟಾಗಿ ತಮ್ಮ ಹಾರಾಟವನ್ನು ನಡೆಸುತ್ತಾ ಸ್ಥಳ ಬದಲಾಯಿಸುತ್ತವೆ.

ಹಾರುವಾಗ ಕಪ್ಪುರೆಕ್ಕೆ, ಅಚ್ಚಬಿಳುಪಿನ ಶರೀರ ಮತ್ತು ಗುಲಾಬಿ ಬಣ್ಣದ ಕಾಲುಗಳು ಸುಂದರವಾಗಿ ಕಾಣಿಸುತ್ತದೆ. ಇವುಗಳ ಚೀಕ್.. ಚೀಕ್... ನಾದವೂ ಹಾರಾಟದ ಸೊಗಸಿಗೆ ದನಿ ನೀಡಿದಂತಿರುತ್ತದೆ.

ಯೂರೋಪ್, ಅಮೆರಿಕಾ ಸೇರಿದಂತೆ ಚಳಿ ಪ್ರದೇಶಗಳಿಂದ ಇವುಗಳ ವಲಸೆಯನ್ನು ದಾಖಲಿಸಲಾಗಿದೆ. ಪ್ರಪಂಚದಾದ್ಯಂತ ಬ್ಲಾಕ್ ವಿಂಗ್ಡ್ ಸ್ಟಿಲ್ಟ್ ಹಕ್ಕಿಗಳ ಸಂಖ್ಯೆ ಹೆಚ್ಚಿರುವುದರಿಂದ ನಿಖರವಾಗಿ ಇವುಗಳ ಗಮ್ಯವನ್ನು ಗುರುತಿಸುವುದು ಪಕ್ಷಿತಜ್ಞರಿಗೆ ಸವಾಲಾಗಿದೆ.

ನಮ್ಮಲ್ಲಿನ ಕೆರೆಗಳಿಗೆ ಮಾತ್ರ ಇವು ಚಳಿಗಾಲದಲ್ಲಿ ಆಗಮಿಸುತ್ತವೆ. ಪ್ರತಿವರ್ಷ ಇವುಗಳ ಒಂದು ಗುಂಪು ನಮ್ಮ ಕೆರೆಯಲ್ಲಿ ಕಂಡುಬರುತ್ತದೆ ಎಂದು ಪಕ್ಷಿವೀಕ್ಷಕ ಅಜಿತ್ ಕೌಂಡಿನ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.