ಭಾನುವಾರ, ಏಪ್ರಿಲ್ 18, 2021
27 °C

ರೇಡಿಯೊ ಸಿಟಿ ರಿಕ್ಷಾ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇಡಿಯೊ ಸಿಟಿ ರಿಕ್ಷಾ ಬಂಧನ

ಆಟೊ ಚಾಲಕರೆಂದರೆ ಮೀಟರ್‌ಗಿಂತ ಹೆಚ್ಚು ಹಣ ವಸೂಲಿ ಮಾಡುವವರು, ಪ್ರಯಾಣಿಕರ ಮೇಲೆ ಸಿಡಿಮಿಡಿಗೊಳ್ಳುವರು, ಕರೆದಲ್ಲಿಗೆ ಬರದೇ ಇರುವವರು, ಪ್ರಯಾಣಿಕರನ್ನು  ಸುಮ್ಮನೆ ಗೋಳುಹೊಯ್ದುಕೊಳ್ಳುವವರು ಎಂಬ ಅನೇಕ ದೂರುಗಳಿವೆ. ಇಂತಹ ದೂರುಗಳನ್ನು ದೂರಕ್ಕೆ ದೂಡಿ ಪ್ರಯಾಣಿಕರು ಮತ್ತು ಆಟೊ ಚಾಲಕರ ನಡುವೆ ಬಾಂದವ್ಯ ಬೆಸೆವ ಸಲುವಾಗಿ ರೇಡಿಯೊ ಸಿಟಿ `ರಕ್ಷಾ ಬಂಧನ~ದ ದಿನದಂದು `ರಿಕ್ಷಾ ಬಂಧನ~ ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿತ್ತು. 

ಜಯನಗರ, ಪದ್ಮನಾಭನಗರ, ಶಾಂತಿನಗರ, ಬನ್ನೇರುಘಟ್ಟ ರಸ್ತೆಯಲ್ಲಿ ಆಟೊ ಚಲಾಯಿಸುವ ಚಾಲಕರಿಗೆ ಆವತ್ತು ಅಚ್ಚರಿ ಕಾದಿತ್ತು. ಯಾಕಂದ್ರೆ ಆವತ್ತು ರೇಡಿಯೊ ಸಿಟಿ ಆರ್‌ಜೆಗಳಾದ ರಚನಾ, ಸೌಜನ್ಯಾ ಹಾಗೂ ಸುನೇತ್ರಾ ಕೈಯಲ್ಲಿ ಮೈಕ್‌ಹಿಡಿದು ಸ್ಟುಡಿಯೋ ಒಳಗೆ ಪಟಪಟನೆ ಮಾತನಾಡುವುದನ್ನು ಬಿಟ್ಟು ರಸ್ತೆಗಿಳಿದಿದ್ದರು. ಇವರೆಲ್ಲರ ಕೈಯಲ್ಲಿ ಡಜನ್‌ಗಟ್ಟಲೇ ರಾಖಿಗಳಿದ್ದವು. ಆರ್‌ಜೆಗಳು ಕೈಯಲ್ಲಿದ್ದ ರಾಖಿಗಳನ್ನು ಆಟೊ ಚಾಲಕರಿಗೆ ಕಟ್ಟಿದಾಗ ಅವರಲ್ಲಿ ಸಂಭ್ರಮದ ಪುಳಕ. ರಾಖಿ ಕಟ್ಟಿದ ತಂಗಿಗೆ ಉಡುಗೊರೆ ನೀಡಿ ಚಾಲಕರು ಸಂತಸಪಟ್ಟರು.

ರೇಡಿಯೊ ಸಿಟಿ 91.1 ಎಫ್‌ಎಂ ರಕ್ಷಾಬಂಧನವನ್ನು ರಿಕ್ಷಾ ಬಂಧನವನ್ನಾಗಿ ಆಚರಿಸಿಕೊಳ್ಳುವ ಮೂಲಕ  ತನ್ನ ವಿಶಿಷ್ಟತೆ ಮೆರೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.