ಬುಧವಾರ, ಏಪ್ರಿಲ್ 21, 2021
32 °C

ರೇಸ್‌ಗಾಗಿ ಸೈಫ್‌ದೀಪಿಕಾ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ರೇಸ್ 2~ ಚಿತ್ರದ ಚಿತ್ರೀಕರಣ ಇಸ್ತಾನ್‌ಬುಲ್‌ನಲ್ಲಿ ಆರಂಭವಾಗಿದೆ. ಸೈಫ್ ಅಲಿಖಾನ್ ಹಾಗೂ ದೀಪಿಕಾ ಪಡಕೋಣೆ ಮುಖ್ಯ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.ರೇಸ್‌ನಲ್ಲಿ ಕತ್ರಿನಾ ನಿರ್ವಹಿಸಿರುವ ಪಾತ್ರ ದೀಪಿಕಾ ಪಾಲಿಗೆ ದೊರೆತಿದೆ. `ರೇಸ್~ ಚಿತ್ರೀಕರಣವಾದಾಗ ಸೈಫ್ ಸಪೂರ ಕಾಯದವರಾಗಿದ್ದರು. ಇದೀಗ ಅವರು `ರೇಸ್-2~ ಚಿತ್ರಕ್ಕಾಗಿ ಒಂದೆರಡಲ್ಲ, 16 ಕೆ.ಜಿ.ಗಳಷ್ಟು ತೂಕ ಕಳೆದುಕೊಳ್ಳಬೇಕಾಗಿದೆ.ಇದಕ್ಕಾಗಿ ಸೈಫ್ ಪ್ರತಿದಿನವೂ ನಾಲ್ಕು ಗಂಟೆಗಳಷ್ಟು ಕಾಲ ಜಿಮ್‌ನಲ್ಲಿ ಬೆವರಿಳಿಸಿದ್ದಾರೆ. ಮದುವೆಯ ಸಿಹಿಯನ್ನೂ ಬೆರಳತುದಿಯಿಂದಲೇ ಸವಿದು, ಬಾಯಿಗೆ ಬೀಗ ಹಾಕಿಕೊಳ್ಳಬೇಕಾಯಿತಂತೆ.ಸೈಫ್ ತೂಕ ಇಳಿಸಿಕೊಳ್ಳಲು ಕಸರತ್ತು ಮಾಡುತ್ತಿದ್ದರೆ, ಕಸರತ್ತಿಗಾಗಿ ದೀಪಿಕಾ ನಿದ್ದೆಗೆಟ್ಟಿದ್ದಾರಂತೆ.ಈ ಚಿತ್ರದಲ್ಲಿರುವ ಎಲ್ಲ ಸ್ಟಂಟ್ ದೃಶ್ಯಗಳಿಗೆ ದೀಪಿಕಾ ಬದಲಿ ವ್ಯವಸ್ಥೆಯನ್ನು ಒಪ್ಪದೇ ತಾವೇ ನಿರ್ವಹಿಸುವುದಾಗಿ ತಿಳಿಸಿದರಂತೆ. ನಂತರ ಶೂಟ್ ತಡವಾಗಬಾರದೆಂಬ ಕಾಳಜಿಯಿಂದಾಗಿ ಪ್ರತಿದಿನವೂ ತಡರಾತ್ರಿಯವರೆಗೂ ತಮ್ಮ ಸೀನುಗಳ ರಿಹರ್ಸಲ್‌ನಲ್ಲಿ ಸಾಹಸ ನಿರ್ದೇಶಕರೊಂದಿಗೆ ಶ್ರಮಿಸುತ್ತಿದ್ದರಂತೆ. ಚಿತ್ರೀಕರಣವಿರುವ ದಿನಗಳ ಹಿಂದಿನ ದಿನ ಕೇವಲ ನಾಲ್ಕು ಗಂಟೆಯಷ್ಟು ಮಾತ್ರ ಮಲಗುತ್ತಿದ್ದ ದೀಪಿಕಾ ಎಲ್ಲ ಸ್ಟಂಟುಗಳನ್ನೂ ತಾವೇ ನಿರ್ವಹಿಸಿದರಂತೆ.ಇಸ್ತಾನ್‌ಬುಲ್‌ನ ಬ್ರಿಜ್ ಮೇಲೆ ಕಾರು ಓಡಿಸುವ ದೃಶ್ಯವಂತೂ ಅದ್ಭುತವಾಗಿ ಮೂಡಿಬಂದಿದೆ ಎಂದು ಸೆಟ್‌ನಲ್ಲಿದ್ದವರೆಲ್ಲ ದೀಪಿಕಾಗೆ ಅಭಿನಂದಿಸಿದರಂತೆ.

ಕ್ರೀಡಾ ಹಿನ್ನೆಲೆ ಇರುವುದರಿಂದಲೇ ತಾವು ಎಂಥ ದೃಶ್ಯಕ್ಕಾದರೂ ಸೂಕ್ತವಾಗಿ ಸ್ಪಂದಿಸುವುದಾಗಿ ದೀಪಿಕಾ ಪ್ರತಿಕ್ರಿಯಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.