ಕಂಪ್ಲಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಗುರುವಾರ ರಾತ್ರಿ ಒಬ್ಬ ಮೃತಪಟ್ಟಿದ್ದು, ಕಂಪ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ 78ಕ್ಕೂ ಅಧಿಕ ಮನೆ, ಗುಡಿಸಲುಗಳಿಗೆ ಹಾನಿಯಾಗಿದೆ.

ಮನೆ ಮುಂದಿನ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ನಂ. 2 ಮುದ್ದಾಪುರ ಗ್ರಾಮದ ಪೋತಪ್ಪ (38) ಮೃತಪಟ್ಟಿದ್ದಾನೆ.

31 ಮನೆಗಳು ಭಾಗಶಃ ಬಿದ್ದಿದ್ದು, 35 ಮನೆಗಳಿಗೆ ತೀವ್ರ ಹಾನಿಯಾಗಿದೆ. 2 ಮನೆಗೆ ಪೂರ್ಣ ಹಾನಿಯಾಗಿದೆ. 1 ಮಳೆಯ ತೀವ್ರತೆಗೆ 5 ಗುಡಿಸಲುಗಳು ನೆಲ ಕಚ್ಚಿದ್ದು, 3 ಗುಡಿಸಲು ಭಾಗಶಃ ಮತ್ತು 2 ಗುಡಿಸಲುಗಳಿಗೆ ತೀವ್ರ ಹಾನಿಯಾಗಿರುವುದಾಗಿ ಉಪ ತಹಸೀಲ್ದಾರ ಕೆ. ಬಾಲಪ್ಪ ತಿಳಿಸಿದ್ದಾರೆ.

ಪಟ್ಟಣದ 12ನೇ ವಾರ್ಡಿನ ಶಿಕಾರಿ ಶಾಂತಮ್ಮ, ಸುಬ್ಬಣ್ಣ, ಶಕುಂತಲಮ್ಮ, ಈರಮ್ಮ, ಸಂಗಪ್ಪ, ಸೀತಮ್ಮ ಎನ್ನುವವರ ಮನೆ, ಗುಡಿಸಲುಗಳು ಮಳೆಗೆ ಬಿದಿವೆ. ಜವುಕು ಗ್ರಾಮದ ಬಳಿಯ ನಾರಿಹಳ್ಳ ತುಂಬಿ ಹರಿಯುತ್ತಿದ್ದು, ಜವುಕು -ಸುಗ್ಗೇನಹಳ್ಳಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ರಸ್ತೆ ಸಂಚಾರಕ್ಕೆ ಕೆಲ ಕಾಲ ತಡೆ ಉಂಟಾಗಿತ್ತು.

ಕಂಪ್ಲಿ ಕೋಟೆ ಹಳೇ ಮಾಗಾಣಿ, ಬೆಳಗೋಡುಹಾಳು, ರಾಮಸಾಗರ, ನಂ. 10 ಮುದ್ದಾಪುರ ಮಾಗಾಣಿಯಲ್ಲಿ ವಾಣಿಜ್ಯ ಬೆಳೆ ಬಾಳೆಗೆ ಹಾನಿಯಾಗಿದೆ. ತುಂಗಭದ್ರಾ ಎಲ್ಎಲ್ಸಿ ಮತ್ತು ಎಚ್ಎಲ್ಸಿ ಉಪ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದ ಬತ್ತ ಹಲವೆಡೆ ನೆಲಕಚ್ಚಿದೆ. ಬತ್ತವನ್ನೇ ನಂಬಿಕೊಂಡಿದ್ದ ರೈತರು ಆತಂಕದಲ್ಲಿದ್ದಾರೆ.

ಈಗಾಗಲೇ ತುಂಗಭದ್ರಾ ನದಿ ಪಾತ್ರದಲ್ಲಿ ಬತ್ತದ ಕೊಯ್ಲು ಮುಗಿದು ಒಕ್ಕಲು ಕಾರ್ಯ ಬರದಿಂದ ನಡೆಯುತ್ತಿದ್ದು, ವರುಣನ ಅಡ್ಡಿಯಿಂದ ರೈತರಿಗೆ ಅನಾನುಕೂಲವಾಗಿದೆ.

ತಗ್ಗು ಪ್ರದೇಶಕ್ಕೆ ನೀರು
ಹೊಸಪೇಟೆ: ನೀಲಂ ಚಂಡಮಾರುತದ ಪರಿಣಾಮ ರಾಜ್ಯಕ್ಕೆ ಪ್ರವೇಶಿಸಿರುವ ಮಳೆ ಎರಡು ದಿನಗಳಿಂದ ಸುರಿಯುತ್ತಿದ್ದು, ಕಮಲಾಪುರ ಕೆರೆ ತುಂಬಿ ಕೋಡಿಯ ಮೇಲೆ ನೀರು ಹರಿಯುತ್ತಿದೆ. ಅಲ್ಲದ ತಾಲ್ಲೂಕಿನಾದ್ಯಂತ 150 ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದ್ದು, ಸಾವಿರಾರು ಎಕರೆ ಪ್ರದೇಶದ ಬೆಳೆ ಜಲಾವೃತವಾಗಿದೆ. ಬುಧವಾರ ಸಂಜೆ ಆರಂಭವಾದ ಮಳೆ ಶುಕ್ರವಾರವೂ ಮುಂದುವರಿದಿದ್ದು, ಹೊಸಪೇಟೆ ನಗರದಲ್ಲಿ 28, ಗ್ರಾಮಾಂತರ ಪ್ರದೇಶದಲ್ಲಿ 18, ಕಮಲಾಪುರದಲ್ಲಿ 24, ಕಂಪ್ಲಿ ವ್ಯಾಪ್ತಿಯಲ್ಲಿ 65ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿವೆ. ಅನೇಕ ತಗ್ಗು ಪ್ರದೇಶಗಳಲ್ಲಿ ಹಾಗೂ ಹೊಲಗದ್ದೆಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ. ಎಂಬ ವರದಿಗಳಿದ್ದರು ನಿಖರವಾಗಿ ಪರಿಶೀಲಿಸಿದ ನಂತರವೇ ಹಾನಿ ವಿವರ ಲಭ್ಯವಾಗಲಿದೆ ಎಂದು ತಹಸೀಲ್ದಾರ ಬಸವರಾಜ ಸೋಮಣ್ಣನವರ್ ಪ್ರಜಾವಾಣಿಗೆ ತಿಳಿಸಿದರು.

ಮಳೆ ಶನಿವಾರವೂ ಸಹ ಮುಂದುವರಿಯುವ ಲಕ್ಷಣಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಹೊಸಪೇಟೆಯ ರೈತಭವನ ಹಾಗೂ ಟಿಎಂಎಇ ಪಾಲಿಟೆಕ್ನಿಕ್ ಕಾಲೇಜಿನ ಬಳಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.

ಹೊಸಪೇಟೆಯ ಆಶ್ರಯ ಕಾಲೋನಿ, 88 ಮುದ್ಲಾಪುರ, ಇಂದಿರಾನಗರ ಸೇರಿದಂತೆ ಮಳೆಯಿಂದ ಹಾನಿಯಾದ ಪ್ರದೇಶಗಳ ನಿವಾಸಿಗಳು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಪೌರಾಯುಕ್ತ ಕೆ.ರಂಗಸ್ವಾಮಿ ತಿಳಿಸಿದರು.

ಪರಿಸ್ಥಿತಿ ಎದುರಿಸಲು ತಾಲ್ಲೂಕು ಆಡಳಿತ ಸಿದ್ಧತೆಗಳನ್ನು ಮಾಡಿಕೊಂಡಿದೆ ಅಧಿಕಾರಿಗಳು ತಾಲ್ಲೂಕು ಕೇಂದ್ರಬಿಟ್ಟು ತೆರಳದಂತೆ ಸೂಚಿಸಲಾಗಿದೆ. ಗ್ರಾಮ ಸಹಾಯಕರು, ಲೆಕ್ಕಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಹ ಸ್ವಸ್ಥಾನದಲ್ಲಿರುವಂತೆ ತಿಳಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಡಿ.ಆರ್. ಅಶೋಕ ತಿಳಿಸಿದ್ದಾರೆ.

ತಾಲ್ಲೂಕಿನಾದ್ಯಂತ ಮಳೆಯ ಪ್ರಮಾಣ: ಹೊಸಪೇಟೆ 143 ಮಿ.ಮೀ, ಹೊಸಪೇಟೆ ರೈಲು ನಿಲ್ದಾಣ160 ಮಿ. ಮೀ, ಕಮಲಾಪುರ 136.2 ಮಿ. ಮೀ, ಕಂಪ್ಲಿ 101.6 ಮಿ.ಮೀ, ಗಾದಿಗನೂರು 110.2 ಮಿ.ಮೀ, ಮರಿಯಮ್ಮನಹಳ್ಳಿ 61 ಮಿ.ಮೀ, ಟಿ.ಬಿ.ಡ್ಯಾಂನಲ್ಲಿ 144 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
29 ಮನೆ ಕುಸಿತ

ಮರಿಯಮ್ಮನಹಳ್ಳಿ: ನಿರಂತರವಾಗಿ ಸುರಿದ ಜಡಿಮಳೆಯಿಂದಾಗಿ ಪಟ್ಟಣದ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಇಡೀ ದಿನ ಸುರಿದ ಮಳೆಗೆ ಒಟ್ಟು 29ಮನೆಗಳು ಕುಸಿದಿವೆ.

ಬುಧವಾರ ರಾತ್ರಿಯಿಂದ ಆರಂಭವಾದ ಜಡಿಮಳೆ ಗುರುವಾರ ಇಡೀ ದಿನ ಸುರಿಯಿತು. ಅಲ್ಲದೆ ಶುಕ್ರವಾರವು ಸಹ ಜಿಟಿಜಿಟಿ ಮಳೆ ಮುಂದುವರಿದಿದೆ.

ಮರಿಯಮ್ಮನಹಳ್ಳಿಯಲ್ಲಿ 16 ಮನೆಗಳು, ನಂದಿಬಂಡಿ ಗ್ರಾಮದಲ್ಲಿ 5, ಅಯ್ಯನಹಳ್ಳಿ 4, ವ್ಯಾಸನಕೆರೆ 3 ಮತ್ತು ಚಿಲಕನಹಟ್ಟಿಯಲ್ಲಿ ಒಂದು ಮನೆ ಕುಸಿದಿವೆ ಎಂದು ಉಪ ತಹಶೀಲ್ದಾರ ಯು. ನಾಗರಾಜ ತಿಳಿಸಿದ್ದಾರೆ.

ಅಲ್ಲದೆ ಅಲ್ಲಲ್ಲಿ ಮರಗಳು ಉರುಳಿವೆ. ಅಲ್ಲದೆ ಅಲ್ಲಲ್ಲಿ ಅಲ್ಪಸ್ವಲ್ಪ ಬೆಳೆದ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ಸತತ ಮಳೆಯಿಂದಾಗಿ ಹಾನಿ ಸಂಭವಿಸಿದೆ.

ಕಳೆದ ಕೆಲದಿನಗಳಿಂದ ಬಿಸಿಲಿಗೆ ತತ್ತರಿಸಿದ್ದ ಜನರಿಗೆ ದಿನವಿಡೀ ಸುರಿದ ಮಳೆ ತಂಪೆರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.