ಭಾನುವಾರ, ಜೂನ್ 20, 2021
23 °C
ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್‌ ಮೇಲೆ ಹಲ್ಲೆ

ರೈತಸಂಘ ಖಂಡನೆ; ರಾಷ್ಟ್ರಪತಿಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಗುಜರಾತ್‌ ಪ್ರವಾಸ ಕೈಗೊಂಡಿದ್ದ ಎಎಪಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಮತ್ತು ಅವರ ಬಂಧನ ಪ್ರಕರಣವನ್ನು ರೈತಸಂಘ ಖಂಡಿಸಿ ರಾಷ್ಟ್ರಪತಿಗೆ ಪತ್ರ ಬರೆದಿದೆ.‘ಭ್ರಷ್ಟಾಚಾರವನ್ನು ನಿಗ್ರಹಿಸಲು ಪಣತೊಟ್ಟಿರುವ, ಜನತಂತ್ರ ವ್ಯವಸ್ಥೆಯನ್ನು ಬಲಗೊಳಿಸಲು ಶ್ರಮಿಸುತ್ತಿರುವ ಎಎಪಿ ಮುಖಂಡನ ಮೇಲೆ ಪಟ್ಟಭದ್ರ ಹಿತಾಶಕ್ತಿಗಳು ಹಲ್ಲೆ ನಡೆಸುವ ಮೂಲಕ ಕಾನೂನು ಮುರಿದಿವೆ ಎಂದು ರೈತ ಮುಖಂಡ ಕೆ.ಎಸ್‌.ನಂಜುಂಡೇಗೌಡ ಇತರರು ಗುರುವಾರ ಪ್ರಭಾರ ತಹಶೀಲ್ದಾರ್‌ ಬಸವರಾಜ ಎಚ್‌.ಚಿಗರಿ ಅವರನ್ನು ಭೇಟಿ ಮಾಡಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ. ಕೆಂಪೇಗೌಡ,   ಪಿಎಸ್‌ಎಸ್‌ಕೆ ನಿರ್ದೇಶಕರಾದ ಪಾಂಡು, ಬಿ.ಸಿ. ಕೃಷ್ಣೇಗೌಡ, ಜಯರಾಮೇಗೌಡ,  ನಂಜುಂಡಪ್ಪ, ದರಸಗುಪ್ಪೆ ಕೆ.ಜಯರಾಂ, ಕೊಡಿಯಾಲ ಜವರೇಗೌಡ, ಮಹದೇವು, ಮಂಜುನಾಥ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.