ಶನಿವಾರ, ಮೇ 8, 2021
20 °C

ರೈತ ಸಂಘ ಜಿಲ್ಲಾ ಘಟಕದ ಪುನಾರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ತಾಲ್ಲೂಕಿನ ಹೊಂಡರಬಾಳು ಸಮೀಪದ ಅಮೃತಭೂಮಿಯಲ್ಲಿರುವ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಗ್ರಾಮ ಸ್ವರಾಜ್ ಕೇಂದ್ರದಲ್ಲಿ ಈಚೆಗೆ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಕಾರ್ಯಕರ್ತರ ಸಭೆ ನಡೆಯಿತು.ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಅಧ್ಯಕ್ಷತೆವಹಿಸಿದ್ದರು. ಈ ಹಿಂದೆ ವಿವಿಧ ಕಾರಣಗಳಿಗೆ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಉಚ್ಚಾಟನೆಗೊಂಡಿದ್ದ ಕುರುಬರಹುಂಡಿ ಮಾದಪ್ಪ, ಕೊಳ್ಳೇಗಾಲದ ಷಣ್ಮುಖಸ್ವಾಮಿ, ತೇರಂಬಳ್ಳಿ ಮಹದೇವಪ್ಪ, ಕುಣಗಳ್ಳಿ ರಂಗಸ್ವಾಮಿ, ರಾಮಕೃಷ್ಣ ಅವರಿಗೆ ಕ್ಷಮೆ ನೀಡಲು ಸಭೆ ನಿರ್ಧರಿಸಿತು. ಈ ಎಲ್ಲರಿಗೂ ಎರಡು ವರ್ಷದವರೆಗೂ ಯಾವುದೇ ಪದಾಧಿಕಾರ ನೀಡದೆ ಸಾಮಾನ್ಯ ಕಾರ್ಯಕರ್ತರಾಗಿ ಮುಂದುವರಿಯಲು ಸಭೆ ಸಮ್ಮತಿ ನೀಡಿದೆ ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.ಜಿಲ್ಲಾ ಸಮಿತಿ ಪುನಾರಚನೆ: ಇದೇ ವೇಳೆ 2013-14ನೇ ಸಾಲಿಗೆ ಜಿಲ್ಲಾ ಸಮಿತಿ ಪುನಾರಚಿಸ ಲಾಗಿದ್ದು, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎ.ಎಂ. ಮಹೇಶ್‌ಪ್ರಭು ಪುನರಾಯ್ಕೆ ಯಾಗಿದ್ದಾರೆ. ಪಿ.ಎನ್. ಚಿನ್ನಸ್ವಾಮಿ ಗೌಂಡರ್ ಗೌರವಾಧ್ಯಕ್ಷರಾಗಿದ್ದಾರೆ. ಎ.ಎಸ್. ಚನ್ನಬಸಪ್ಪ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಎಚ್.ವಿ. ವೆಂಕಟಾಶೇಷಯ್ಯ, ಶಿವಣ್ಣ ಕೊಳ್ಳೇಗಾಲ, ಹೊನ್ನೂರು ಎಚ್.ಎಂ. ಮಹದೇವಸ್ವಾಮಿ, ಕೆಂಪಣ್ಣ ಬೇಗೂರು, ಬೇಡರಪುರದ ಮಹದೇವಪ್ಪ ವರಿಷ್ಠ ಮಂಡಳಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.ನಾಗೇಂದ್ರಪ್ರಸಾದ್ ರಂಗೂಪುರ(ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ), ವಿ. ನಟರಾಜು ಬಂದಿಗೌಡನಹಳ್ಳಿ(ಚಾಮರಾಜನಗರ ತಾಲ್ಲೂಕು ಅಧ್ಯಕ್ಷ), ಶಿವರಾಮು(ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ), ಎಚ್.ಪಿ. ಬಸವಣ್ಣ ಹೊನ್ನೂರು(ಯಳಂದೂರು ತಾಲ್ಲೂಕು ಅಧ್ಯಕ್ಷ) ನೇಮಕವಾಗಿದ್ದಾರೆ.ಸಿ. ಸಿದ್ದರಾಜು(ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಮಹದೇವಪ್ಪ ಶಿವಪುರ, ಕೆ.ಪಿ. ಶಿವಸ್ವಾಮಿ ಕಮರವಾಡಿ, ಗೌಡೇಗೌಡ ಸುರಾಪುರ, ಶಿವಕುಮಾರ್ ಯಳಂದೂರು(ಸಂಘಟನಾ ಕಾರ್ಯದರ್ಶಿಗಳು), ಎಚ್.ಎಸ್. ರಮೇಶ್(ಖಜಾಂಚಿ) ನೇಮಕವಾಗಿದ್ದಾರೆ.ಮಿರಾಂಡ ಫ್ರಾನ್ಸಿಸ್(ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ), ಜಯಶ್ರೀ(ಮಹಿಳಾ ಘಟಕದ ಕಾರ್ಯದರ್ಶಿ), ಶ್ರೀಕಂಠಸ್ವಾಮಿ(ಜಿಲ್ಲಾ ಹಸಿರು ಸೇನೆ ಘಟಕದ ಅಧ್ಯಕ್ಷ), ಗಿರೀಶ್ ಬೇಡರಪುರ(ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ), ರೇಚಣ್ಣ ಮಾಲಂಗಿ(ನೈಸರ್ಗಿಕ ಕೃಷಿ ಸಮಿತಿ ಅಧ್ಯಕ್ಷ), ಹೊನ್ನೂರು ಪ್ರಕಾಶ್, ಎಚ್.ಸಿ. ಮಹೇಶ್‌ಕುಮಾರ್(ರಾಜ್ಯ ಸಮಿತಿಯ ಕಾಯಂ ಆಹ್ವಾನಿತ ಸದಸ್ಯರು) ನೇಮಕವಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.