ಶುಕ್ರವಾರ, ಏಪ್ರಿಲ್ 23, 2021
22 °C

ರೈಲಿನಲ್ಲಿ ದಾಂಧಲೆ: ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ/ನವ ಜಲ್‌ಪೈಗುರಿ (ಪಿಟಿಐ):  ಈಶಾನ್ಯ ಭಾರತದ ಜನರು ಹೋಗುತ್ತಿದ್ದ ಬೆಂಗಳೂರು-ಗುವಾಹಟಿ ರೈಲಿನಲ್ಲಿ ನಡೆದ ದಾಂಧಲೆಯಲ್ಲಿ ಮತ್ತಿಬ್ಬರ ಇಬ್ಬರ ಶವಗಳು ಪತ್ತೆಯಾಗಿವೆ. ಇದರೊಂದಿಗೆ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದ ಮೂರನೇ ವಿಶೇಷ ರೈಲಿನಲ್ಲಿ ಭಾನುವಾರ ಕೆಲ ದುಷ್ಕರ್ಮಿಗಳು ನುಗ್ಗಿ ದಾಂಧಲೆ ನಡೆಸಿ, ಪ್ರಯಾಣಿಕರನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ್ದರು. ಪ್ರಯಾಣಿಕರ ಬಳಿಯಿದ್ದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.`ಭಾನುವಾರ ಬೆಲಕೊಬಾ ಮತ್ತು ರಾಣಿನಗರ ರೈಲ್ವೆ ನಿಲ್ದಾಣದ ಸಮೀಪ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದವು. ಆನಂತರ ಹೊಸ ಜಲ್‌ಪೈಯ್‌ಗುರಿ ಸಮೀಪದ ಹಲಕಟಾ ಬಳಿ ಮತ್ತಿಬ್ಬರ ಶವ ದೊರೆತಿವೆ ~ಎಂದು ರೈಲ್ವೆ ಇಲಾಖೆ ಮೂಲಗಳು ಸೋಮವಾರ ತಿಳಿಸಿವೆ.ಒಂಬತ್ತು ಜನ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.