ಭಾನುವಾರ, ಜೂನ್ 13, 2021
25 °C

ರೈಲು ದರ ಏರಿಕೆಗೆ ಪ್ರಶ್ನೋತ್ತರ ಕಲಾಪ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರೈಲು ಪ್ರಯಾಣ ದರ ಏರಿಕೆ ಬಿಕ್ಕಟ್ಟು ಪ್ರಕರಣವು ಗುರುವಾರ ಸದನದ ಪ್ರಶ್ನೋತ್ತರ ಕಲಾಪವನ್ನು ಬಲಿ ತೆಗೆದುಕೊಂಡಿತು.

ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ನಾಯಕರಾದ ಸುಷ್ಮಾ ಸ್ವರಾಜ್, ಶರದ್ ಯಾದವ್ (ಜೆಡಿಯು), ಸಿಪಿಎಂ ನ ಬಸುದೇವ್ ಆಚಾರ್ಯ, ಸಿಪಿಐ ನ ಗುರುದಾಸ್ ದಾಸ್‌ಗುಪ್ತ ಅವರು ಪಶ್ನೋತ್ತರ ಅವಧಿ ರದ್ದುಗೊಳಿಸಿ ರೈಲ್ವೆ ಪ್ರಯಾಣ ದರ ಏರಿಕೆ ಬಿಕ್ಕಟ್ಟಿನ ಕುರಿತು ಸರ್ಕಾರ ವಿವರಣೆ ನೀಡಬೇಕೆಂದು ಒತ್ತಾಯಿಸಿ ನೋಟಿಸ್‌ಗಳನ್ನು ನೀಡಿದರು.

ಆದರೆ ಈ ನೋಟಿಸ್‌ಗಳನ್ನು ಮಾನ್ಯ ಮಾಡದ ಸ್ಪೀಕರ್ ಮೀರಾ ಕುಮಾರ್, ಈ ಕುರಿತು ಅವರಿಗೆ ಕೇವಲ ಮಾತನಾಡಲು ಅವಕಾಶ ನೀಡಿದರು. ಈ ಸಂದರ್ಭದಲ್ಲಿ ಲೋಕಸಭೆಯಲ್ಲಿ ಹಿರಿಯ ಸಚಿವರು ಕೂರುವ ಮೊದಲ ಸಾಲಿನಲ್ಲಿ ತ್ರಿವೇದಿ ಕುಳಿತಿದ್ದರು.

ಪ್ರಶ್ನೋತ್ತರ ಅವಧಿಯಲ್ಲಿ  ಉತ್ತರ ನೀಡಲೆಂದು ಅವರ ಹೆಸರಿನ ಎದುರು ಪಶ್ನೆಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ, ಸ್ಪೀಕರ್ ಅವರು ಪ್ರಶ್ನೋತ್ತರ ಅವಧಿ ನಡೆಸಲು ಮುಂದಾಗುತ್ತಿದ್ದಂತೆ, ಬಿಜೆಪಿ ಸದಸ್ಯರು ಅವರ ಆಸನದ ಮುಂದಕ್ಕೆ ನುಗ್ಗಿ ಪ್ರಧಾನಿ ಅವರಿಂದ ಹೇಳಿಕೆಗೆ ಆಗ್ರಹಿಸಿ ಗದ್ದಲ ಮಾಡಿದರು. ಆಗ ಸ್ಪೀಕರ್ ಅವರು ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.