ಪ್ರಜಾವಾಣಿ ವಾರ್ತೆ
ದಾಂಡೇಲಿ: ನಗರದ ಜನತೆಯ ಬಹುವರ್ಷಗಳ ಕನಸಾದ ಅಳ್ನಾವರ–-ದಾಂಡೇಲಿ ಪ್ಯಾಸೆಂಜರ್ ರೈಲು ಸಂಚಾರ ಭಾಗ್ಯ ಕೈಗೂಡುವ ಲಕ್ಷಣ ಗೋಚರಿಸುತ್ತಿದೆ.

ದಾಂಡೇಲಿಯಲ್ಲಿ ಬಹು ವರ್ಷಗಳ ಹಿಂದೆ ಪ್ಯಾಸೆಂಜರ್ ರೈಲು ಸಂಚಾರವಿತ್ತು. ಡಿಎಫ್ಎ, ಐಪಿಎಂ ಕಾರ್ಖಾನೆಗಳು ಸ್ಥಗಿತಗೊಂಡ ನಂತರ ಇಲ್ಲಿಯ ಕಾರ್ಮಿಕರಿಗೆ ಕೆಲಸ ಹೋಯ್ತು. ಬಹುತೇಕ ಕಾರ್ಮಿಕರು ಉದ್ಯೋಗ ವಲಸೆ ಹೋದರು. ಉಳಿದವರು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕಾರ್ಖಾನೆಗಳ ಜೊತೆಗೆ ಪ್ಯಾಸೆಂಜರ್ ರೈಲು ಸಂಚಾರವೂ ಸ್ಥಗಿತಗೊಂಡಿತು.

ಬಸವಳಿದಿದ್ದ ದಾಂಡೇಲಿ ನಗರ ವೆಸ್ಟ್ಕೋಸ್ಟ್ ಪೇಪರ್ ಮಿಲ್, ಶ್ರೇಯಸ್ ಪೇಪರ್ ಮಿಲ್, ವಿವಿಧ ಕೈಗಾರಿಕೆಗಳು, ಪ್ರವಾಸೋದ್ಯಮದಿಂದ ಅಭಿವೃದ್ಧಿಯಾಗುತ್ತಿದ್ದು, ರೈಲು ಸಂಚಾರದ ಮರು ಆರಂಭದ ಒತ್ತಡವೂ ಹೆಚ್ಚಾಗಿತ್ತು. ಜನರ ಒತ್ತಡಕ್ಕೆ ಮಣಿದ ಸರ್ಕಾರ ರೈಲು ಸಂಚಾರಕ್ಕೆ ಅನುಮತಿ ನೀಡಿದೆ.

ಮೂರು ತಿಂಗಳಿನಿಂದ ಕಾಮಗಾರಿ ಪ್ರಕ್ರಿಯೆ ಆರಂಭವಾಗಿತ್ತು. 27 ಕಿ.ಮೀ. ಉದ್ದದ ಅಳ್ನಾವರದಿಂದ ದಾಂಡೇಲಿಯ ಅಂಬೇವಾಡಿ ವರೆಗಿನ ಗೂಡ್ಸ್ ರೈಲು ಹಳಿ ನವೀಕರಿಸಲಾಗತ್ತಿದೆ. ಟ್ರ್ಯಾಕ್ ನವೀಕರಣ ಭಾಗಶಃ ಮುಗಿದಿದ್ದು, ಅಂಬೇವಾಡಿಯಲ್ಲಿ ಪ್ಲ್ಯಾಟ್ಫಾರ್ಮ್ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ.

ಇದೇ 9ರಂದು ರೈಲ್ವೆ ಇಲಾಖೆಯ ಸಿಆರ್ಎಸ್ ತಂಡ ಅಳ್ನಾವರದಿಂದ ದಾಂಡೇಲಿಯವರೆಗೆ ಟ್ರ್ಯಾಕ್ ಪರಿಶೀಲನೆ ನಡೆಸಲಿದೆ. ಏಪ್ರಿಲ್ನಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.