ಶುಕ್ರವಾರ, ಮೇ 14, 2021
22 °C

ರೊಮ್ಯಾಂಟಿಕ್ ಚಿತ್ರದಲ್ಲಿ ಕರೀನಾ-ಇಮ್ರಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರೀನಾ ಕಪೂರ್ ಮತ್ತು ಇಮ್ರಾನ್ ಹಶ್ಮಿ ರೊಮ್ಯಾಂಟಿಕ್ ಚಿತ್ರವೊಂದಕ್ಕೆ ಅಣಿಯಾಗುತ್ತಿದ್ದಾರೆ. ಈ ವರ್ಷದ ನಂತರ ತೆರೆಕಾಣಲಿರುವ ಈ ಚಿತ್ರದಲ್ಲಿ ಮೊದಲ ಬಾರಿ ಇಮ್ರಾನ್ ಮತ್ತು ಕರೀನಾ ಜೋಡಿಯಾಗಿ ಕಾಣಿಕೊಳ್ಳಲಿದ್ದಾರೆ.



ಏಕ್ತಾ ಕಪೂರ್‌ನ ಬಾಲಾಜಿ ಮೋಷನ್ ಪಿಕ್ಚರ್ಸ್‌ ನಿರ್ಮಾಣದ, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಚಿತ್ರ ಇದಾಗಿದ್ದು, ಈಗಾಗಲೇ ಕರೀನಾ ಮತ್ತು ಇಮ್ರಾನ್ ನಾಮ ನಿರ್ದೇಶನ ಮಾಡಲಾಗಿದೆ. ಚಿತ್ರದಲ್ಲಿನ ಇನ್ನಿತರ ಪಾತ್ರಗಳಿಗೆ ಹುಡುಕಾಟ ನಡೆಯುತ್ತಿದೆ.



ಇಮ್ರಾನ್ ಮತ್ತು ಕರೀನಾ ನಟಿಸಲಿರುವ ಈ ಚಿತ್ರ ರೊಮ್ಯಾಂಟಿಕ್ ಮತ್ತು ನೈಜ ಚಿತ್ರ. ಇದರ ಚಿತ್ರೀಕರಣ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುಂಬೈ, ದೆಹಲಿಯಲ್ಲಿ ಶುರುವಾಗಲಿದೆ ಎಂದು ತಿಳಿದು ಬಂದಿದೆ. ಅಶೋಕ್ ರಾಯ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ `ಬತ್ತಮೀಜ್ ದಿಲ್' ಎಂದು ಹೆಸರಿಡುವ ಯೋಚನೆ ಇದೆಯಂತೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.