ನವದೆಹಲಿ (ಪಿಟಿಐ): ಭಾರತದ ರೋಹನ್ ಬೋಪಣ್ಣ ಸೋಮವಾರ ಪ್ರಕಟಗೊಂಡಿರುವ ನೂತನ ಟೆನಿಸ್ ರ್ಯಾಂಕಿಂಗ್ನ ಡಬಲ್ಸ್ನಲ್ಲಿ 12ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ದುಬೈನಲ್ಲಿ ಶನಿವಾರ ಕೊನೆಗೊಂಡ ದುಬೈ ಡ್ಯೂಟಿ ಫ್ರೀ ಟೆನಿಸ್ ಟೂರ್ನಿಯಲ್ಲಿ ಪಾಕಿಸ್ತಾನದ ಐಸಾಮ್ ಉಲ್ ಹಕ್ ಖುರೇಷಿ ಜೊತೆಗೂಡಿ ಆಡಿದ್ದ ಅವರು ಪ್ರಶಸ್ತಿ ಜಯಿಸಿದ್ದರು. ಈ ಸಾಧನೆಯೊಂದಿಗೆ ಒಟ್ಟು ನಾಲ್ಕು ಸ್ಥಾನ ಮೇಲೇರಿ 12ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಲಿಯಾಂಡರ್ ಪೇಸ್ 10ನೇ ಸ್ಥಾನದಲ್ಲಿ ಮುಂದುವರಿದಿದ್ದು, ಮಹೇಶ್ ಭೂಪತಿ ಒಟ್ಟು ಆರು ಸ್ಥಾನ ಕುಸಿತ ಕಂಡು 47ನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ ತಲಾ ಒಂದು ಸ್ಥಾನ ಏರಿಕೆ ಕಂಡಿರುವ ದಿವಿಜ್ ಶರಣ್ (64) ಹಾಗೂ ಪುರವ ರಾಜ (71) ಅಗ್ರ ನೂರರ ಒಳಗೆ ಸ್ಥಾನ ಪಡೆದಿದ್ದಾರೆ.

ಸಿಂಗಲ್ಸ್ನಲ್ಲಿ ಸೋಮದೇವ್ ದೇವವರ್ಮನ್ (78) ಹಾಗೂ ಯೂಕಿ ಭಾಂಬ್ರಿ (146) ಹಿಂದಿನ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.