ಲಂಡನ್ (ಪಿಟಿಐ/ಐಎಎನ್ಎಸ್): ಕೋಟಿ ಕೋಟಿ ಕ್ರೀಡಾ ಪ್ರೇಮಿಗಳ ಕನಸು ಹೊತ್ತು ಲಂಡನ್ಗೆ ಬಂದಿದ್ದ ಭಾರತದ ಕ್ರೀಡಾಪಟುಗಳು ತಮ್ಮ ಮೇಲಿಟ್ಟದ್ದ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ಆರು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವುದೇ ಅದಕ್ಕೆ ಸ್ಪಷ್ಟ ಸಾಕ್ಷಿ.

ಏಕೆಂದರೆ 112 ವರ್ಷಗಳ ಇತಿಹಾಸದಲ್ಲಿ ಭಾರತ ಹಿಂದೆಂದೂ ಒಲಿಂಪಿಕ್ಸ್ನಲ್ಲಿ ಇಷ್ಟು ಪದಕ ಗೆದ್ದಿರಲಿಲ್ಲ. ನಾಲ್ಕು ವರ್ಷಗಳ ಹಿಂದೆ ಬೀಜಿಂಗ್ನಲ್ಲಿ ಮೂರು ಪದಕ ಗೆದ್ದಿದ್ದೇ ಶ್ರೇಷ್ಠ ಸಾಧನೆ ಆಗಿತ್ತು. ಆ ಸಾಧನೆ ನೀಡಿದ ಸ್ಫೂರ್ತಿ, ಭರವಸೆ ಹಾಗೂ ವಿಶ್ವಾಸ ಈ ಬಾರಿ ಫಲ ನೀಡಿದೆ. ಈ ಬಾರಿ ಚಿನ್ನದ ಪದಕ ಲಭಿಸಲಿಲ್ಲ ಎಂಬ ನಿರಾಶೆ ಇದ್ದರೂ ಪದಕಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಹಾಕಿ ಹೊರತುಪಡಿಸಿ ಇಷ್ಟು ವರ್ಷಗಳ ಕ್ರೀಡಾ ಮೇಳದಲ್ಲಿ ಭಾರತ ಗೆದ್ದಿದ್ದು ಒಟ್ಟು ಏಳು ಪದಕ. ಆದರೆ ಈ ಬಾರಿ ಒಂದೇ ಒಲಿಂಪಿಕ್ಸ್ನಲ್ಲಿ ಆರು ಪದಕ ಲಭಿಸಿದೆ (2 ಬೆಳ್ಳಿ, 4 ಕಂಚು). ಕಳೆದ ಐದಾರು ವರ್ಷಗಳಲ್ಲಿ ಭಾರತದ ಕ್ರೀಡಾ ರಂಗದಲ್ಲಿ ಬದಲಾವಣೆಯ ಗಾಳಿ ಬೀಸಿರುವುದು ಇದರಿಂದ ಸ್ಪಷ್ಟ. ರಾಶಿ ಸಮಸ್ಯೆಗಳ ನಡುವೆಯೂ ಯಶಸ್ಸು ನಲಿದಾಡುತ್ತಿದೆ.

`ಇದೊಂದು ನಮ್ಮ ಶ್ರೇಷ್ಠ ಸಾಧನೆ. ಕ್ರೀಡಾ ಕ್ಷೇತ್ರದಲ್ಲಿ ನಾವು ಪ್ರಗತಿಯ ಹಾದಿಯಲ್ಲಿದ್ದೇವೆ ಎಂಬುದಕ್ಕೆ ಇದೇ ಸಾಕ್ಷಿ. 2020 ಒಲಿಂಪಿಕ್ಸ್ನಲ್ಲಿ 25 ಪದಕದ ಗುರಿ ಇಟ್ಟುಕೊಳ್ಳಬೇಕು~ ಎಂದು ಕ್ರೀಡಾ ಸಚಿವ ಅಜಯ್ ಮಾಕನ್ ಖುಷಿ ವ್ಯಕ್ತಪಡಿಸಿದ್ದಾರೆ.

2004ರ ಅಥೆನ್ಸ್ ಒಲಿಂಪಿಕ್ಸ್ನ ಶೂಟಿಂಗ್ನಲ್ಲಿ ರಾಜ್ಯವರ್ಧನ್ ಸಿಂಗ್ ರಾಠೋಡ್ ಬೆಳ್ಳಿ ಪದಕ, 2000ರ ಸಿಡ್ನಿ ಒಲಿಂಪಿಕ್ಸ್ನಲ್ಲಿ ಕರ್ಣಮ್ ಮಲ್ಲೇಶ್ವರಿ ವೇಟ್ಲಿಫ್ಟಿಂಗ್ನಲ್ಲಿ ಕಂಚು, 1996ರ ಅಟ್ಲಾಂಟಾ ಒಲಿಂಪಿಕ್ಸ್ನ ಟೆನಿಸ್ ಸಿಂಗಲ್ಸ್ನಲ್ಲಿ ಪೇಸ್ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲಿ ಕೆ. ಜಾಧವ್ ಕುಸ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಆದರೆ ಬೀಜಿಂಗ್ ಒಲಿಂಪಿಕ್ಸ್ನ ಶೂಟಿಂಗ್ನಲ್ಲಿ ಅಭಿನವ್ ಬಿಂದ್ರಾ ಗೆದ್ದ ಪದಕ ವೈಯಕ್ತಿಕ ವಿಭಾಗದಲ್ಲಿ ದೇಶಕ್ಕೆ ಬಂದ ಮೊದಲ ಚಿನ್ನದ ಪದಕ. ಆ ಕೂಟದ ಬಾಕ್ಸಿಂಗ್ನಲ್ಲಿ ವಿಜೇಂದರ್ ಹಾಗೂ ಕುಸ್ತಿಯಲ್ಲಿ ಸುಶೀಲ್ ಕಂಚಿನ ಪದಕ ಜಯಿಸಿದ್ದರು. ಅದು ಭಾರತದ ಅಥ್ಲೆಟಿಕ್ಸ್ನಲ್ಲಿ ನವ ಯುಗಕ್ಕೆ ಕಾರಣವಾಯಿತು. ಜೊತೆಗೆ ಆ ಸಾಧನೆ ದೇಶದ ಕ್ರೀಡೆಯಲ್ಲಿ ಹೊಸ ಕ್ರಾಂತಿಗೆ ಪ್ರೇರಣೆಯಾಯಿತು.

ಈ ಬಾರಿ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಅರ್ಹತೆ ಪಡೆದಿದ್ದು ಅದಕ್ಕೊಂದು ನಿದರ್ಶನ. ನಾಲ್ಕು ವರ್ಷಗಳ ಹಿಂದೆ 56 ಮಂದಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಆದರೆ ಈ ಬಾರಿ 81 ಮಂದಿ ಅರ್ಹತೆ ಪಡೆದಿದ್ದರು.
`ನಾನು ಬೀಜಿಂಗ್ನಲ್ಲಿ ಪದಕ ಗೆದ್ದ ಮೇಲೆ ಕುಸ್ತಿಪಟುಗಳ ಸಂಖ್ಯೆ ಹೆಚ್ಚಿದೆ. ಹೊಸ ಅಲೆ ಸೃಷ್ಟಿಯಾಗಿದೆ. ಈ ಸಾಧನೆ ಹೆಚ್ಚಿನವರಿಗೆ ಸ್ಫೂರ್ತಿಯಾಗಿದೆ. 2008ರ ಒಲಿಂಪಿಕ್ಸ್ನಲ್ಲಿ ಮೂವರು ಸ್ಪರ್ಧಿಸಿದ್ದರು. ಈ ಬಾರಿ ಐದು ಮಂದಿ ಇದ್ದರು~ ಎಂದು ಸುಶೀಲ್ ಕುಮಾರ್ ಲಂಡನ್ಗೆ ತೆರಳುವ ಮುನ್ನ ನುಡಿದಿದ್ದರು.

ಈ ಬಾರಿಯ ಕೂಟದಲ್ಲಿ ಶೂಟಿಂಗ್ನಲ್ಲಿ ವಿಜಯ್ ಕುಮಾರ್ ಅವರ ಬೆಳ್ಳಿಯ ಬೇಟೆಯೊಂದಿಗೆ ಆರಂಭವಾದ ಪದಕಗಳ ಯಾತ್ರೆ ಕುಸ್ತಿಯಲ್ಲಿ ಸುಶೀಲ್ ಕುಮಾರ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಅಂತ್ಯಗೊಂಡಿತು.

ಗಗನ್ ನಾರಂಗ್ (ಶೂಟಿಂಗ್), ಸೈನಾ ನೆಹ್ವಾಲ್ (ಬ್ಯಾಡ್ಮಿಂಟನ್), ಮೇರಿ ಕೋಮ್ (ಬಾಕ್ಸಿಂಗ್) ಹಾಗೂ ಯೋಗೀಶ್ವರ್ ದತ್ (ಕುಸ್ತಿ) ಕಂಚಿನ ಸಾಧನೆ ಮಾಡಿದರು. ಶೂಟಿಂಗ್ನಲ್ಲಿ ಜಾಯ್ದೀಪ್ ಕರ್ಮಾಕರ್, ಬ್ಯಾಡ್ಮಿಂಟನ್ನಲ್ಲಿ ಪಿ.ಕಶ್ಯಪ್, ಅಥ್ಲೆಟಿಕ್ಸ್ನಲ್ಲಿ ಕೃಷ್ಣಾ ಪೂನಿಯಾ, ವಿಕಾಸ್ ಗೌಡ ಹಾಗೂ ಇರ್ಫಾನ್ ಗಮನ ಸೆಳೆದರು.

`ಇದೊಂದು ನಮ್ಮ ಪಾಲಿಗೆ ವಿಶೇಷ ಸಾಧನೆ. ಹಿಂದೆಂದೂ ಭಾರತದ ಕ್ರೀಡಾಪಟುಗಳಿಂದ ಈ ರೀತಿಯ ಸಾಧನೆ ಮೂಡಿಬಂದಿರಲಿಲ್ಲ. ಆರ್ಚರಿ ಹೊರತುಪಡಿಸಿ ನಿರೀಕ್ಷೆ ಇಟ್ಟಿದ ವಿಭಾಗಳಲೆಲ್ಲಾ ಪದಕ ಬಂದಿದೆ. ಒಲಿಂಪಿಕ್ಸ್ನಿಂದ ಒಲಿಂಪಿಕ್ಸ್ಗೆ ಸುಧಾರಣೆ ಆಗುತ್ತಿದೆ. ಈ ಸಾಧನೆ ನಮಗೆ ಖುಷಿ ನೀಡಿದೆ~ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಸಿ) ಪ್ರಧಾನ ಕಾರ್ಯದರ್ಶಿ ರಣಧೀರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಚೀನಾದವರ ಪ್ರಾಬಲ್ಯವೇ ಹೆಚ್ಚಾಗಿದ್ದ ವೇಳೆ ತಮ್ಮ ಛಾಪು ಮೂಡಿಸಿದ್ದು ಹೈದರಾಬಾದ್ನ ನೆಹ್ವಾಲ್. ಈ ಆಟಗಾರ್ತಿ ಬೀಜಿಂಗ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಬಾರಿ ಅವರು ಕಂಚಿನ ಸಾಧನೆ ಮಾಡಿದರು. ಚೀನಾ, ಇಂಡೊನೇಷ್ಯಾ, ಡೆನ್ಮಾರ್ಕ್ನ ಆಟಗಾರ್ತಿಯರ ಭದ್ರ ಕೋಟೆಯೊಳಗೆ ನುಗ್ಗಬಹುದು ಎಂಬುದನ್ನು ಅವರು ಉಳಿದವರಿಗೆ ತೋರಿಸಿಕೊಟ್ಟರು.

ಬಾಕ್ಸಿಂಗ್ನಲ್ಲಿ ಅವಳಿ ಮಕ್ಕಳ ತಾಯಿ ಮೇರಿ ಕೋಮ್ ಪದಕ ಗೆದ್ದಿದ್ದು ವಿಶೇಷ. ಇದೇ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಬಾಕ್ಸಿಂಗ್ಗೆ ಅವಕಾಶ ಮಾಡಿಕೊಡಲಾಗಿತ್ತು.

ಕೋಮ್ ಕಂಚಿನ ಪದಕ ಗೆದ್ದಿದ್ದು ಐತಿಹಾಸಿಕ ಸಾಧನೆಯೊಂದಕ್ಕೆ ಕಾರಣವಾಯಿತು, ಏಕೆಂದರೆ ಒಂದೇ ಒಲಿಂಪಿಕ್ಸ್ನಲ್ಲಿ ಮಹಿಳೆಯರ ವಿಭಾಗದಲ್ಲಿ ಭಾರತ ಎರಡು ಪದಕ ಜಯಿಸಿದಂತಾಗಿದೆ. ಈ ಮೊದಲು 2000ರ ಸಿಡ್ನಿಯ ಒಲಿಂಪಿಕ್ಸ್ನಲ್ಲಿ ಕರ್ಣಮ್ ಮಲ್ಲೇಶ್ವರಿ (ವೇಟ್ಲಿಫ್ಟಿಂಗ್) ಕಂಚಿನ ಪದಕ ಗೆದ್ದಿದ್ದರು.

ನಿರಾಶೆ: ಎಂಟು ವರ್ಷಗಳ ಬಳಿಕ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಂಡಿದ್ದ ಭಾರತ ಹಾಕಿ ತಂಡ ಮಾತ್ರ ತೀರಾ ಕಳಪೆ ಪ್ರದರ್ಶನ ನೀಡಿತು. ಎಂಟು ಬಾರಿಯ ಚಿನ್ನದ ಪದಕ ವಿಜೇತ ತಂಡ ಈ ಪರಿ ಸೋತಿದ್ದಕ್ಕೆ ಎಲ್ಲಾ ಕಡೆಯಿಂದ ಟೀಕಾ ಪ್ರಹಾರ ವ್ಯಕ್ತವಾಗುತ್ತಿದೆ.

ಟೆನಿಸ್ ತಂಡದ ಆಯ್ಕೆ ಈ ಬಾರಿ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಮಹೇಶ್ ಭೂಪತಿ ಹಾಗೂ ಲಿಯಾಂಡರ್ ಪೇಸ್ ಡಬಲ್ಸ್ನಲ್ಲಿ ಜೊತೆಗೂಡಿ ಆಡಿದ್ದರೆ ಈ ಬಾರಿ ಒಂದು ಪದಕ ನಿರೀಕ್ಷಿಸಬಹುದಿತ್ತು. ಆದರೆ ಇವರಿಬ್ಬರ ಜಗಳ ದೇಶದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿತು.

ಅಥ್ಲೆಟಿಕ್ಸ್ನಲ್ಲಿ ರೆಂಜಿತ್ ಮಹೇಶ್ವರಿ, ಸಹನಾ ಕುಮಾರಿ ಕೂಡ ತಮ್ಮ ಹಿಂದಿನ ಸಾಧನೆಯನ್ನು ಪುನರಾವರ್ತಿಸಲು ವಿಫಲರಾದರು. ದೀಪಿಕಾ ಕುಮಾರಿ ಸೇರಿದಂತೆ ಆರ್ಚರಿ ಸ್ಪರ್ಧಿಗಳು ತಮ್ಮ ಮೇಲಿಟ್ಟಿದ್ದ ನಿರೀಕ್ಷೆಯನ್ನು ಹುಸಿ ಮಾಡಿದರು.

ಜಾಗತಿಕ ಕ್ರೀಡಾ ಉತ್ಸವ ಎನಿಸಿರುವ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಆಸೆ ಯಾವ ದೇಶದವರಿಗೆ ಇಲ್ಲ ಹೇಳಿ? ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವುದೇ ಒಂದು ದೊಡ್ಡ ಕನಸು. ಅದು ಪ್ರತಿಯೊಬ್ಬ ಅಥ್ಲೀಟ್ನ ಪ್ರಮುಖ ಆಸೆ. ಆದರೆ ಈ ಬಾರಿ ಭಾರತ ಐತಿಹಾಸಿಕ ಸಾಧನೆಯೊಂದಿಗೆ ಹಿಂತಿರುಗುತ್ತಿದೆ. ಅದು ಮುಂದಿನ ಕ್ರೀಡಾಕೂಟಕ್ಕೆ, ಕ್ರೀಡಾಪಟುಗಳಿಗೆ ಸ್ಫೂರ್ತಿ ಆಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.