ತುಮಕೂರು: ಲಾಂಛನ ಬದಲಾವಣೆ ಮಾಡಿರುವ ತುಮಕೂರು ವಿಶ್ವವಿದ್ಯಾ ನಿಲಯದ ಕ್ರಮ ವಿರೋಧಿಸಿ ಪ್ರತಿಭಟನೆ ಮುಂದುವರೆದಿದ್ದು, ಬುಧವಾರ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ನಂತರ ಹಳೆ ಲಾಂಛನ ಮುಂದುವರೆಸು ವಂತೆ ಒತ್ತಾಯಿಸಿ ನಗರದ ಐದು ಕೊಳೆಗೇರಿಗಳಲ್ಲಿ 500 ಜನರ ಸಹಿ ಸಂಗ್ರಹದ ಮನವಿಯನ್ನು ಜಿಲ್ಲಾಧಿಕಾ ರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಕಾರ್ಯ ದರ್ಶಿ ಅಲ್ತಾಫ್, ಯುವ ಜನರ ಒಕ್ಕೂಟದ ಸಂಚಾಲಕ ಶೆಟ್ಟಳಯ್ಯ, ಗಾಯತ್ರಿ, ಸ್ನೇಹಾ, ಅರುಣ್, ಸುನಿಲ್ ಇತರರು ಇದ್ದರು.

ಇಂದು ಬಹಿರಂಗ ಸಭೆ
ತುಮಕೂರು ವಿಶ್ವವಿದ್ಯಾನಿಲಯ ಲಾಂಛನ ಬದಲಿಸಿರುವ ಕ್ರಮ ಖಂಡಿಸಿ ಜಿಲ್ಲಾ ಸ್ವಾಭಿಮಾನಿ ನಾಗರಿಕರ ವೇದಿಕೆ, ವಿ.ವಿ. ಹಿಂದಿನ ಲಾಂಛನ ಉಳಿಸಿ ಹೋರಾಟ ಸಮಿತಿ ಜಂಟಿಯಾಗಿ ಗುರುವಾರ ನಗರದ ಟೌನ್ಹಾಲ್ ವೃತ್ತದಲ್ಲಿ ಬೆಳಿಗ್ಗೆ 11ಕ್ಕೆ ಬಹಿರಂಗ ಸಭೆ ಆಯೋಜಿಸಿವೆ.

ಸಭೆಯಲ್ಲಿ ಚಿಂತಕ ದೊರೈರಾಜ್, ಸಿಂಡಿಕೇಟ್ ಮಾಜಿ ಸದಸ್ಯ ಎಂ.ಜಿ. ಶ್ರೀನಿವಾಸಯ್ಯ, ಚಿದಂಬರಯ್ಯ ಭಾಗವ ಹಿಸುವರು ಎಂದು ಹೋರಾಟಗಾರ ಚೇಳೂರು ವೆಂಕಟೇಶ್ ತಿಳಿಸಿದ್ದಾರೆ.

ಧರಣಿಗೆ ಬೆಂಬಲ
ಗ್ರಾಮೀಣ ಕೃಪಾಂಕ ನೌಕರರು ಬೆಂಗಳೂರಿನಲ್ಲಿ ಏ. 12ರಿಂದ ಹಮ್ಮಿ ಕೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ ಎಂದು ಒಕ್ಕೂ ಟದ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ರಂಗಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.