‘ಅಲ್ಖೈದಾ’ ಭಯೋತ್ಪಾದಕ ಸಂಘಟನೆಯನ್ನು ಹುಟ್ಟುಹಾಕಿದ್ದ ಒಸಾಮ ಬಿನ್ ಲಾಡೆನ್ ಅಮೆರಿಕ ಪಡೆಗಳ ಕಾರ್ಯಾಚರಣೆಗೆ ಬಲಿಯಾಗಿದ್ದಾನೆ. 2001ರ ಸೆಪ್ಟೆಂಬರ್ 11ರಂದು ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ನ ಅವಳಿ ಗೋಪುರಗಳನ್ನು ಧ್ವಂಸಗೊಳಿಸುವ ಮೂಲಕ ಅಮೆರಿಕಕ್ಕೆ ಸವಾಲು ಎಸೆದಿದ್ದ ಅಲ್ಖೈದಾ, ಸೋವಿಯತ್ ಒಕ್ಕೂಟದ ಜೊತೆ ನಡೆಸಿದ್ದ ಶೀತಲ ಸಮರದ ನಂತರ, ಅಮೆರಿಕವನ್ನು ಯುದ್ದೋನ್ಮಾದ ಸ್ಥಿತಿಯಲ್ಲಿ ಇರಿಸಿದ್ದ ಉಗ್ರ ಭಯೋತ್ಪಾದಕ ಸಂಘಟನೆ. ಲಾಡೆನ್ ವಿರುದ್ಧದ ಕಾರ್ಯಾಚರಣೆಯನ್ನು ‘ಭಯೋತ್ಪಾದನೆ ವಿರುದ್ಧ ಸಮರ’ವಾಗಿ ಪರಿವರ್ತಿಸಿಕೊಂಡ ಅಮೆರಿಕ, ಈ ಹತ್ತು ವರ್ಷಗಳ ಅವಧಿಯಲ್ಲಿ ಆಫ್ಘಾನಿಸ್ತಾನ, ಇರಾಕ್ನಲ್ಲಿ ಪೂರ್ಣ ಪ್ರಮಾಣದ ಯುದ್ಧಗಳಲ್ಲಿ ತೊಡಗಬೇಕಾಯಿತು.

ಆಫ್ಘಾನಿಸ್ತಾನದ ಮೂಲಭೂತವಾದಿ ತಾಲಿಬಾನಿಗಳಲ್ಲಿ ನೆಲೆ ಕಂಡುಕೊಂಡಿದ್ದ ಲಾಡೆನ್ ಬೇಟೆಗಾಗಿ ಪಾಕಿಸ್ತಾನವನ್ನು ಬಹುವಾಗಿ ನೆಚ್ಚಿಕೊಂಡು ಅಪಾರ ಪ್ರಮಾಣದಲ್ಲಿ ಆರ್ಥಿಕ ಮತ್ತು ಶಸ್ತ್ರಾಸ್ತ್ರಗಳ ಮೂಲಕ ಸಹಾಯ ಮಾಡಿದ್ದ ಅಮೆರಿಕ ಕೊನೆಗೂ ಸ್ವಂತ ಬಲದಿಂದಲೇ ಲಾಡೆನ್ನನ್ನು ಪತ್ತೆ ಮಾಡಬೇಕಾಯಿತು. ಪಾಕ್ ರಾಜಧಾನಿ ಇಸ್ಲಾಮಾಬಾದಿಗೆ ಹತ್ತಿರದಲ್ಲಿ ನಿವೃತ್ತ ಸೇನಾಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶದಲ್ಲಿ ಕಳೆದ ಆಗಸ್ಟ್ನಿಂದ ಲಾಡೆನ್ ಇರವನ್ನು ಪತ್ತೆ ಮಾಡಿದ್ದ ಅಮೆರಿಕ, ಪಾಕಿಸ್ತಾನ ಸರ್ಕಾರಕ್ಕೆ ಸುಳಿವನ್ನೇ ನೀಡದೆ ಲಾಡೆನ್ ವಿರುದ್ಧ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಪಾಕಿಸ್ತಾನದ ಒಳನಾಡಿನಲ್ಲಿ ಲಾಡೆನ್ ಆಸರೆ ಪಡೆದಿದ್ದನೆಂಬ ಸಂಗತಿ ಪಾಕಿಸ್ತಾನದ ಉನ್ನತ ಸೈನ್ಯಾಧಿಕಾರಿಗಳಿಗಾಗಲೀ, ಆಡಳಿತಗಾರರಿಗಾಗಲೀ ಗೊತ್ತಿರಲಿಲ್ಲವೆಂದು ಅಮೆರಿಕ ನಂಬುವುದಾದರೆ ಅದರ ಗೂಢಚಾರ ವ್ಯವಸ್ಥೆಯಲ್ಲಿ ದೋಷವಿದೆ ಎಂದೇ ಅರ್ಥ!

ಪಾಕಿಸ್ತಾನದ ವಿಶ್ವಾಸಾರ್ಹತೆಯ ಬಗ್ಗೆ ಅಮೆರಿಕಕ್ಕೆ ಎಷ್ಟೇ ನಂಬಿಕೆ ಇದ್ದರೂ, ಲಾಡೆನ್ ಅಡಗುತಾಣ ಪಾಕಿಸ್ತಾನದಲ್ಲಿ ಪತ್ತೆಯಾಗಿರುವುದು, ಅದು ಭಯೋತ್ಪಾದಕರ ಅಡ್ಡೆಯಾಗಿದೆ ಎಂಬ ಭಾರತದ ನಿಲುವನ್ನು ಸಾಬೀತುಪಡಿಸಿದೆ. ಭಯೋತ್ಪಾದನೆ ವಿರುದ್ಧ ಸಮರಕ್ಕಾಗಿ ಪಡೆದಿದ್ದ ಶಸ್ತ್ರಾಸ್ತ್ರಗಳನ್ನು ಭಾರತದ ವಿರುದ್ಧ ಬಳಸುತ್ತಿದ್ದ ಬಗ್ಗೆ ಸ್ವತಃ ಪಾಕಿಸ್ತಾನದ ಹಿಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿಕೆ ನೀಡಿದ್ದರೂ ಅಮೆರಿಕ ಪಾಕಿಸ್ತಾನಕ್ಕೆ ನೆರವು ನೀಡುವುದನ್ನು ನಿಲ್ಲಿಸಲಿಲ್ಲ. ಮುಂಬೈ ದಾಳಿಯ (26/11) ಸಂಚುಕೋರರು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವುದನ್ನು ಭಾರತ ಸ್ಪಷ್ಟ ದಾಖಲೆಗಳ ಸಹಿತ ಒಪ್ಪಿಸಿದ್ದರೂ ಅದಕ್ಕೆ ಸೂಕ್ತವಾಗಿ ಪಾಕಿಸ್ತಾನ ಸ್ಪಂದಿಸುತ್ತಿಲ್ಲ.

ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಕೈ ಜೋಡಿಸುವುದಿರಲಿ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ಈ ನಡವಳಿಕೆ, ಲಾಡೆನ್ ಅಡಗುತಾಣದ ಪತ್ತೆ ಮಾಡಿದ ನಂತರವಾದರೂ ಅಮೆರಿಕಕ್ಕೆ ಅರ್ಥವಾಗಬೇಕು. ಅಲ್ಖೈದಾ ಸಂಘಟನೆಯ ಭಯೋತ್ಪಾದಕ ಕೃತ್ಯಗಳಿಗೆ ಭಾರತವೂ ಗುರಿಯಾಗುತ್ತಿರುವುದು ಅಮೆರಿಕಕ್ಕೆ ಗೊತ್ತಿರದ ಸಂಗತಿಯಲ್ಲ. ಲಾಡೆನ್ಗೆ ಸಂಬಂಧಿಸಿ ನಂಬಿಕೆಗೆ ಅರ್ಹವಲ್ಲದ ರೀತಿಯಲ್ಲಿ ನಡೆದುಕೊಂಡ ಪಾಕಿಸ್ತಾನಕ್ಕಿಂತ, ಅಲ್ಖೈದಾದಂಥ ಭಯೋತ್ಪಾದಕ ಸಂಘಟನೆಗಳ ದುಷ್ಕೃತ್ಯಗಳಿಗೆ ಗುರಿಯಾಗುತ್ತಿರುವ ಭಾರತಕ್ಕೆ ಹೆಚ್ಚಿನ ನೆರವು ಅವಶ್ಯಕ ಎಂಬುದನ್ನು ಅಮೆರಿಕ ಅರ್ಥ ಮಾಡಿಕೊಳ್ಳಬೇಕು. ಲಾಡೆನ್ ಹತ್ಯೆಯಿಂದ ಅಲ್ಖೈದಾ ದುಷ್ಕೃತ್ಯಗಳಿಗೆ ಕೊನೆಯಾಗಲಿದೆ ಎಂದು ನಿರೀಕ್ಷೆ ಮಾಡುವಂತಿಲ್ಲ. ಇದು ಭಾರತ ಮಾತ್ರವಲ್ಲದೆ, ಅಮೆರಿಕವೂ ಎಚ್ಚರಿಕೆ ವಹಿಸಬೇಕಾದ ಬೆಳವಣಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.