ಲಿಬಿಯಾ ಸೇನಾ ವಿಮಾನ ಅಪಘಾತ: 11 ಸಾವು

ಟುನೀಷ್ಯಾ(ಎಎಫ್ಪಿ): ಲಿಬಿಯಾದ ಸೇನಾ ವೈದ್ಯಕೀಯ ವಿಮಾನವೊಂದು ಶುಕ್ರವಾರ ಬೆಳಿಗ್ಗೆ ದಕ್ಷಿಣ ಟುನೀಷ್ಯಾ ಪ್ರದೇಶ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿದ್ದು, 11 ಜನ ಸಾವಿಗೀಡಾಗಿದ್ದಾರೆ.
ಬೆಳಗಿನಜಾವ 1.30ಕ್ಕೆ ಅವಘಡ ಸಂಭವಿಸಿದ್ದು, ಮೂವರು ವೈದ್ಯರು, ಆರು ರೋಗಿಗಳು ಸೇರಿದಂತೆ 11 ಜನ ಮೃತಪಟ್ಟಿದ್ದಾರೆ.
ವಿಮಾನದ ಎಂಜಿನ್ನಲ್ಲಿನ ತಾಂತ್ರಿಕ ದೋಷ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಗ್ರಾಮವೊಂದರ ಬಳಿ ಅಪಘಾತ ಸಂಭವಿಸಿದ್ದು, ಮನೆ, ಇತರ ಸಾರ್ವಜನಿಕರಿಗೆ ಯಾವುದೇ ಹಾನಿಯಾಗಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.