ಶುಕ್ರವಾರ, ಮೇ 7, 2021
20 °C

ಲೆಕ್ಕ ಕೊಡುವ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೈರ್ಮಲ್ಯ ಯೋಜನೆಯಡಿ ರಾಜ್ಯದಲ್ಲಿ  58 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಬೇಕೆಂಬ ಗುರಿ ಇತ್ತು. 41 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ 6 ಲಕ್ಷ ಶೌಚಾಲಯಗಳನ್ನು ಈ ವರ್ಷ ನಿರ್ಮಿಸುವ ಗುರಿ ಇದೆ. ಶೌಚಾಲಯಗಳ ನಿರ್ಮಾಣಕ್ಕೆ ಖಾಸಗಿಯವರು ಹಣ ಕೊಡುತ್ತಾರೆ ಎಂದು ಗ್ರಾಮೀಣ ಅಭಿವೃದ್ಧಿ ಸಚಿವರು ಇತ್ತೀಚೆಗೆ ವಿಧಾನ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದ್ದರು.ಈ ಶೌಚಾಲಯಗಳು ಎಲ್ಲಿವೆ? ಮಹಿಳೆಯರಿಗಾಗಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಿದ್ದರೂ ಅವುಗಳ  ಉಪಯೋಗ ಆಗುತ್ತಿದೆಯೇ? ನೀರಿನ ಸೌಕರ್ಯವಿದ್ದರೂ ಅನೇಕ ಗ್ರಾಮಗಳಲ್ಲಿ ಶೌಚಾಲಯಗಳಿಲ್ಲ. ಸಚಿವರ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ತನಿಖೆ ಮಾಡಿಯೇ ತಿಳಿದುಕೊಳ್ಳಬೇಕಿದೆ. ಮಂತ್ರಿಗಳು ನೀಡಿದ ಹೇಳಿಕೆಗೂ ವಾಸ್ತವಕ್ಕೂ ಭಾರೀ ಅಂತರವಿದೆ.ಈ ರಾಜ್ಯದ ಯಾವ ಹಳ್ಳಿಯಲ್ಲಿ ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿವೆ ಎಂಬುದನ್ನು ಸಾಕ್ಷಾತ್ ಸಮೀಕ್ಷೆಯಿಂದ ತಿಳಿಯಬೇಕೇ ಹೊರತು ಸರ್ಕಾರದ ಅಂಕಿಅಂಶಗಳಿಂದಲ್ಲ. ಶೌಚಾಲಯಗಳ ನಿರ್ಮಾಣಕ್ಕಾಗಿ ಖಾಸಗಿ ಸಂಸ್ಥೆಯವರು ಏಕೆ ಕೊಡುತ್ತಾರೆ. ಅವರ ಹಣದ ಮೂಲ ಯಾವುದು ಎಂಬುದು ಸಂಶೋಧನೆಗೆ ಅರ್ಹವಾದ ವಿಷಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.