ಹಾನಗಲ್: `ಸದ್ಯದಲ್ಲಿ ನನ್ನದೆಯಾದ ಒಂದು ರಥ ತರಹದ ವಾಹನ ಕಟ್ಟಿ ಕೊಂಡು ಮೂರು ತಿಂಗಳ ಕಾಲ ರಾಜ್ಯದಲ್ಲಿ ನಿರಂತರ ಪ್ರವಾಸ ಮಾಡಿ ಪಕ್ಷದ ಸಂಘಟನೆಗೆ ಮುಂದಾಗುತ್ತೇನೆ. ಲೋಕಾಯುಕ್ತ ವರದಿಯಲ್ಲಿನ ಆಪಾದನೆಗಳಿಗೆ ಉತ್ತರವಾಗಿ ಪುಸ್ತಕ ಹೊರತಂದು ರಾಜ್ಯದ ಜನತೆಯ ಮುಂದಿಡುತ್ತೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಭಾನುವಾರ ಹಾನಗಲ್ಲಿನಲ್ಲಿ ಶ್ರೀ ಕುಮಾರೇಶ್ವರ ಸಭಾಭವನ ಪ್ರಸಾದ ನಿಲಯ, ಅಗ್ನಿಶಾಮಕ ಸಿಬ್ಬಂದಿ ವಸತಿ ನಿಲಯ, ಎ.ಪಿ.ಎಂ.ಸಿ ಕಟ್ಟಡ ಉದ್ಘಾ ಟನೆ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

`ನಾಡಿನ ಅಭಿವೃದ್ಧಿಯ ಹೊಂಗನಸು ಗಳನ್ನು ಹೊತ್ತು ಅಧಿಕಾರಕ್ಕೆ ಬಂದೆ. ಜನ ಗುರುತಿಸುವಂತಹ ಆಡಳಿತ ನೀಡಿದ ತೃಪ್ತಿ ಇದೆ. ಮೂರು ವರ್ಷ ಎರಡು ತಿಂಗಳಿನಲ್ಲಿ ಅಭಿವೃದ್ಧಿಯ ಗುರುತು ಗಳನ್ನು ಮೂಡಿಸಲಾಗಿದೆ. ವಿರೋಧಿ ಗಳಿಗೆ ನಾಡಿನ ಅಭಿವೃದ್ಧಿ ಕಂಡು ಭೀತಿ ಗೊಳ್ಳುವ ಮೂಲಕ ಸುಳ್ಳು ಆರೋಪಗಳಿಗೆ ಮುಂದಾದರು. ವಿರೋಧ ಪಕ್ಷಗಳ ಹೊಟ್ಟೆ ಉರಿ ಆರೋಪಗಳಿಗೆ ಕಾರಣವಾಯಿತು.

ಲೋಕಾಯುಕ್ತ ಆರೋಪಗಳ ಕುರಿತು ಪುಸ್ತಕ ತರುತ್ತೇನೆ. ರಾಜ್ಯದ ಜನತೆಯ ಮುಂದಿಡುತ್ತೇನೆ. ಅಕ್ಟೋಬರ್ 3ನೇ ತಾರೀಕಿಗೆ ಎಲ್ಲ ಆರೋಪಗಳು ಪರಿಹಾರವಾಗಲಿವೆ. ಪಕ್ಷದ ನಾಯಕರೊಂದಿಗೆ ಚರ್ಚಿಸಿ ಮೂರು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಸಂಘಟನೆಗೆ ಮುಂದಾಗುವುದಾಗಿ ತಿಳಿಸಿದರು.

ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಬಸವ ಪಥಕ್ಕೆ ನೈಜ ನೆಲೆಗಟ್ಟು ನೀಡಿದವರು ಹಾನಗಲ್ ಲಿಂ. ಕುಮಾರ ಶಿವಯೋಗಿ ಗಳು ಎಂದ ಅವರು, ನಾಡಿನ ಆಧ್ಯಾತ್ಮಿಕ ಕೇಂದ್ರಗಳಿಗೆ ಕಾಯಕಲ್ಪ ನೀಡುವಲ್ಲಿ ರಾಜ್ಯ ಸರಕಾರ ಸದಾ ಮುಂದಿರುತ್ತದೆ ಎಂದರು.

ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜ ಕಲ್ ಸ್ವಾಮೀಜಿ, ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಸಂಸದ ಶಿವಕುಮಾರ ಉದಾಸಿ ಮತ್ತು ಜಿಲ್ಲೆಯ ಶಾಸಕರು, ನಿಗಮದ ಅಧ್ಯಕ್ಷರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

`ಯಡಿಯೂರಪ್ಪನವರಿಂದ ವಿಧಾನಸೌಧದಲ್ಲಿ ಕಾವಿಗೆ ಗೌರವ~
ಹಾನಗಲ್: `ಸುಮಾರು ರೂ. 70 ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿ ಯಿಂದ ಹಾನಗಲ್ಲ ಮತ್ತು ಅಕ್ಕಿ- ಆಲೂರಿಗೆ ಕುಡಿಯುವ ನೀರಿನ ಯೋಜ ನೆಯನ್ನು ಸದ್ಯದಲ್ಲಿ ಅನುಷ್ಠಾನಕ್ಕೆ ತರ ಲಾಗುವುದು ಮತ್ತು ಹಾವೇರಿ ಜಿಲ್ಲೆ ಯಲ್ಲಿ ಮೆಡಿಕಲ್ ಕಾಲೇಜ್ ನಿರ್ಮಿ ಸುವ ಬಗ್ಗೆ ಚಿಂತನೆ ನಡೆಸಲಾಗಿದೆ~ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ನುಡಿದರು.

ಹಾನಗಲ್ಲಿನಲ್ಲಿ ಭಾನುವಾರ ನಡೆದ ಶ್ರೀ ಕುಮಾರೇಶ್ವರ ಪ್ರಸಾದ ನಿಲಯ ಮತ್ತು ಸಭಾಭವನದ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ಕುಮಾರೇಶ್ವರ ಮಠದ ಆವರಣದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜವು ನಿರಂತರವಾಗಿ ನೆನಪಿಟ್ಟುಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಸಾರ್ಥಕತೆ ಮೂಡುತ್ತದೆ. ಈ ದೃಷ್ಠಿಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅನುಷ್ಠಾನಗೊಳಿಸಿದ ಅಭಿವೃದ್ಧಿ ಕಾರ್ಯಗಳು ಜನರ ಮನದಲ್ಲಿ ನೆಲೆಯೂರಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವ ಚನ ನೀಡಿ, ಜಲ ಅನ್ನ ಶುಭಾಷಿತಗಳೇ ಜಗತ್ತಿನ ಶ್ರೇಷ್ಟ ರತ್ನಗಳು. ಮೂರ್ಖರು ಮಾತ್ರ ವಜ್ರ ವೈಢೂರ್ಯ, ಧನ ಸಂಗ್ರಹಿಸಿ ಸುಖಿಸುತ್ತಾರೆ. ಈ ರಾಜ್ಯ ಅನ್ನದಾತನಿಗೆ ನ್ಯಾಯ ದೊರಕಿಸಿಕೊಟ್ಟ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸೌಧದಲ್ಲಿ ಕಾವಿಗೆ ಗೌರವ ತಂದುಕೊಟ್ಟಿದ್ದಾರೆ. ಸಮಾಜಮುಖಿ ಚಿಂತನೆಯ ಹೋರಾಟಗಾರರಾದ ಯಡಿಯೂರಪ್ಪ ಅವರ ಸೇವೆಯ ಅಗತ್ಯ ಈ ನಾಡಿಗಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. ಶಾಸಕರಾದ ಶಿವ ರಾಜ ಸಜ್ಜನರ, ನೆಹರೂ ಓಲೇಕಾರ, ಜಿ.ಪಂ ಅಧ್ಯಕ್ಷ ಮಂಜುನಾಥ ಓಲೇಕಾರ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ತಾ.ಪಂ ಅಧ್ಯಕ್ಷೆ ಲಲಿತಾ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಪುರಸಭೆ ಅಧ್ಯಕ್ಷ ಲಕ್ಷ್ಮವ್ವ ಹಳೆಕೋಟಿ, ಉಪಾಧ್ಯಕ್ಷೆ ಸರೋಜಾ ಹುಳ್ಳಿಕಾಶಿ, ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಎಸ್.ಬಳ್ಳಾರಿ, ಎ.ಪಿ.ಎಂ.ಸಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ ಮುಂತಾದ ವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.