ಲೋಕಾಯುಕ್ತ ಬೆಂಬಲಿಸಲು ಸಹಿ ಸಂಗ್ರಹ ಆಂದೋಲನ

7

ಲೋಕಾಯುಕ್ತ ಬೆಂಬಲಿಸಲು ಸಹಿ ಸಂಗ್ರಹ ಆಂದೋಲನ

Published:
Updated:

ಮಂಡ್ಯ: ಭ್ರಷ್ಟಾಚಾರ ನಿರ್ಮೂಲನೆ ದೃಷ್ಟಿಯಿಂದ ಲೋಕಾಯುಕ್ತ ರನ್ನು ಬೆಂಬಲಿಸಲು ಪ್ರಜ್ಞಾವಂತರ ಸಹಕಾರವೂ ಅಗತ್ಯ ಎಂದು ಪ್ರತಿಪಾದಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಈ ಕುರಿತು ಸಹಿ ಸಂಗ್ರಹ ಆಂದೋಲನ ಆರಂಭಿಸಿದೆ.ನಗರದ ಸಂಜಯ ವೃತ್ತದಲ್ಲಿ ಸಹಿ ಸಂಗ್ರಹ ಆಂದೋಲನ ನಡೆಯಿತು. ಲೋಕಾಯುಕ್ತ ವ್ಯವಸ್ಥೆ ಬೆಂಬಲಿಸುವ ಕ್ರಮವಾಗಿ ಇಂಥದೇ ಆಂದೋಲನ ವನ್ನು ಕರವೇ ರಾಜ್ಯವ್ಯಾಪಿ ನಡೆಸಲಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ.ಜಯರಾಂ ತಿಳಿಸಿದರು.ಸರ್ಕಾರ ಲೋಕಾಯುಕ್ತರಿಗೆ ಹೆಚ್ಚಿನ ಶಕ್ತಿ ನೀಡುತ್ತಿಲ್ಲ. ಈ ಕುರಿತು ಜಾಗೃತಿಗೆ ಆಂದೋಲನ ಅನಿವಾರ್ಯ. ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರು ಕೈಗೊಂಡಿರುವ ಕ್ರಮಗಳನ್ನು ಬೆಂಬಲಿಸುವುದು ಇದರ ಉದ್ದೇಶ ಎಂದರು.ಕರವೇಯ ಟಿ.ಕೆ.ಸೋಮಶೇಖರ್, ಪಿ.ಎ.ಜೋಸೆಫ್, ಹನಿಯಂಬಾಡಿ ಸತ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಡಿ.ಚಾಮರಾಜು ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry