ವಂಡರ್ ಲಾ ಹಾಲಿಡೇಸ್ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ಗೆ ಹೋಗುವವರಿಗೆ ಸಹಾಯಕವಾಗುವಂತೆ ಹೊಸ ವೋಲ್ವೋ ಬಸ್ ವ್ಯವಸ್ಥೆಯನ್ನು ಪ್ರಕಟಿಸಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಮತ್ತು ಮೈಸೂರು ರಸ್ತೆಯಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ಈ ಹೊಸ ವ್ಯವಸ್ಥೆ ಸಹಾಯಕವಾಗಲಿದೆ.

ವಂಡರ್ ಲಾ ಗೆ ಪ್ರತಿದಿನ ೪೦೦೦ಕ್ಕಿಂತಲೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದು, ಇವರಲ್ಲಿ ಶೇ ೧೦ ಮಂದಿ ಈ ವ್ಯವಸ್ಥೆಯನ್ನು ಉಪಯೋಗಿಸಿದ್ದಲ್ಲಿ ಮೈಸೂರು ರಸ್ತೆಯಲ್ಲಿ ಸುಮಾರು ೧೦೦ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಈ ಬಸ್ ಸಂಪರ್ಕವನ್ನು ಬಳಸುವ ಪ್ರಯಾಣಿಕರಿಗೆ ವಂಡರ್ಲಾ ತನ್ನ ಪ್ರವೇಶ ದರದಲ್ಲಿ ಶೇಕಡಾ ೧೫ರಷ್ಟು ರಿಯಾಯಿತಿಯನ್ನು ನೀಡಲಿದೆ.

ಈ ನೂತನ ಬಸ್ ವ್ಯವಸ್ಥೆಯು ನಗರದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣ ದರವನ್ನು ₨ ೮೦ರಿಂದ ೧೫೦ರವರೆಗೆ ನಿಗದಿಪಡಿಸಲಾಗಿದೆ. ಕೆಳಗೆ ತಿಳಿಸಿರುವ ಮಾರ್ಗಗಳಲ್ಲಿ ಈ ಸಂಪರ್ಕವನ್ನು ಜಾರಿಗೆ ತರಲಿದೆ.

ಮಾರ್ಗ ೧: ಶಿವಾಜಿನಗರ ಬಸ್ ನಿಲ್ದಾಣ, ವಿಧಾನ ಸೌಧ, ಮೆಜೆಸ್ಟಿಕ್ ಬಸ್ ನಿಲ್ದಾಣ, ಶಿರಸಿ ವೃತ್ತ, ಮೈಸೂರು ರಸ್ತೆ, ವಂಡರ್ ಲಾ.

ಮಾರ್ಗ ೨: ಹೆಬ್ಬಾಳ, ಯಶವಂತಪುರ, ಇಸ್ಕಾನ್, ವಿಜಯನಗರ, ಮೈಸೂರು ರಸ್ತೆ, ವಂಡರ್ ಲಾ.

ಮಾರ್ಗ ೩: ಜೀವನ್ಭೀಮಾನಗರ, ದೊಮ್ಮಲೂರು, ಕೋರಮಂಗಲ, ಡೈರಿ ವೃತ್ತ, ಶಾಂತಿನಗರ, ಸಿಟಿ ಮಾರುಕಟ್ಟೆ, ಮೈಸೂರು ರಸ್ತೆ, ವಂಡರ್ ಲಾ .

ಮಾರ್ಗ ೪: ಎಚ್ಎಸ್ಆರ್ ಬಡಾವಣೆ, ಸಿಲ್ಕ್ಬೋರ್ಡ್, ಬಿಟಿಎಂ ಬಡಾವಣೆ, ಬನಶಂಕರಿ, ಕತ್ರಿಗುಪ್ಪೆ ಮೈಸೂರು ರಸ್ತೆ, ವಂಡರ್ ಲಾ .

ಹೆಚ್ಚಿನ ಮಾಹಿತಿಗಾಗಿ ವಂಡರ್ಲಾ ವೆಬ್ಸೈಟ್ www.wonderla.com ಸಂಪರ್ಕಿಸಬಹುದು. ವಂಡರ್ ಲಾ ಮತ್ತು ಬಿಎಂಟಿಸಿ ಜೊತೆಯಾಗಿ ಅತಿ ಶೀಘ್ರದಲ್ಲಿ ಈ ಸಂಬಂಧ ಹೊಸ ಆನ್ಲೈನ್ ಪ್ಯಾಕೇಜ್ ಸೇವೆ ಆರಂಭಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.