ಶನಿವಾರ, ಏಪ್ರಿಲ್ 17, 2021
30 °C

ವಂದನಾಗೆ ಫುಕುವೊಕ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಖ್ಯಾತ ಪರಿಸರವಾದಿ, ಹೋರಾಟಗಾರ್ತಿ ವಂದನಾ ಶಿವಾ ಅವರನ್ನು ಪ್ರತಿಷ್ಠಿತ `ಫುಕುವೊಕ ಪ್ರಶಸ್ತಿ~ಗೆ ಆಯ್ಕೆ ಮಾಡಲಾಗಿದೆ.ಏಷ್ಯಾದಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಜಪಾನ್‌ನ ಫುಕುವೊಕ ನಗರಾಡಳಿತ ಈ ಪ್ರತಿಷ್ಠಿತ ಪ್ರಶಸ್ತಿ ನೀಡುತ್ತಿದೆ.ಈ ಬಗ್ಗೆ ವಂದನಾ ಅವರಿಗೆ ಸೋಮವಾರ ಅಧಿಕೃತ ಪತ್ರ ನೀಡಲಾಗಿದ್ದು, ಜಪಾನ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.ಪ್ರಶಸ್ತಿಗೆ ಆಯ್ಕೆಯಾದ ವಂದನಾ ಅವರನ್ನು ಭಾರತದಲ್ಲಿನ ಜಪಾನ್ ರಾಯಭಾರಿ ಅಕಿಟಾಕ ಸೈಕಿ ಅವರು ಅಭಿನಂದಿಸಿ, ಪರಿಸರ ಸಂರಕ್ಷಣೆಗೆ ವಂದನಾ ಅವರು ಅಮೂಲ್ಯ ಕೊಡುಗೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.ವಂದನಾ ಶಿವಾ ಅವರು ಪಂಡಿತ್ ರವಿಶಂಕರ್, ಪದ್ಮಾ ಸುಬ್ರಹ್ಮಣ್ಯಂ, ರೊಮಿಲಾ ಥಾಪರ್ ಮತ್ತು ಆಶಿಷ್ ನಂದಿ ಅವರ ಬಳಿಕ ಈ ಪ್ರಶಸ್ತಿ ಪಡೆಯುತ್ತಿರುವ ಏಳನೇ ಭಾರತೀಯರಾಗಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.