ಮುಂಡರಗಿ: ಸ್ಥಳೀಯ ಜಗದ್ಗುರು ತೋಂಟದಾರ್ಯ ಶಾಖಾ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದಲ್ಲಿ ಒಂದು ತಿಂಗಳ ಕಾಲ `ವಚನ ಸಂಸ್ಕೃತಿ ದರ್ಶನ' ಕುರಿತು ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಗದ್ಗುರು ತೋಂಟದಾರ್ಯ ಪ್ರವಚನ ಸೇವಾ ಸಮೀತಿಯ ಅಧ್ಯಕ್ಷ ದ್ರುವಕುಮಾರ ಹೊಸಮನಿ ತಿಳಿಸಿದರು.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ನಾಗನೂರಿನ ರುದ್ರಾಕ್ಷಿ ಮಠದ ಕುಮಾರ ದೇವರು ಪ್ರತಿನಿತ್ಯ ಶ್ರಿಮಠದಲ್ಲಿ ಸಂಜೆ 7ಗಂಟೆಯಿಂದ 8ಗಂಟೆಯವರೆಗೆ `ವಚನ ಸಂಸ್ಕೃತಿ ದರ್ಶನ' ಪ್ರವಚನ ನೀಡಲಿದ್ದಾರೆ ಎಂದು ತಿಳಿಸಿದರು.

ಪ್ರವಚನದ ಮಧ್ಯದಲ್ಲಿ ಪಂಡಿತರಿಂದ ವಿವಿಧ ವಿಷಯಗಳ ಕುರಿತು ಉಪನ್ಯಾಸ, ನಗೆಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮ, ರಕ್ತದಾನದಂತಹ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿನಿತ್ಯ ರಾತ್ರಿ ಪ್ರವಚನ ಮುಗಿದ ತಕ್ಷಣ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ತಿಂಗಳ ಪರ್ಯಂತ ನಡೆಯಲಿರುವ ಪ್ರವಚನವು ಯಶಸ್ವಿಯಾಗಿ ಜರುಗುವ ಉದ್ದೇದಿಂದ ಶಾಸಕ ರಾಮಕೃಷ್ಣ ದೊಡ್ಡಮನಿ ಅವರ ನೇತೃತ್ವದಲ್ಲಿ ಅತಿಥಿ ಸತ್ಕಾರ, ಆಹಾರ, ವೇದಿಕೆ, ಪ್ರಚಾರ, ಮಹಿಳಾ ಸಮಿತಿಗಳಂತಹ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಯ ಕಾರ್ಯಕರ್ತರು ತಮ್ಮ ತಮ್ಮ ಕೆಲಸವನ್ನು ಮುತುವರ್ಜಿಯಿಂದ ನಿರ್ವಹಿಸಿಕೊಂಡು ಹೋಗಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಜು.9ರಂದು ಡಾ.ತೋಂಟದ ಸಿದ್ಧಲಿಂಗೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರವಚನದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಶಾಸಕ ರಾಮಕೃಷ್ಣ ದೊಡ್ಡಮನಿ ಪ್ರವಚನ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ ಉಪನ್ಯಾಸ ನೀಡಲಿದ್ದು, ಮಾಜಿ ಸಚಿವ ಎಸ್.ಎಸ್.ಪಾಟೀಲ, ಶರಣಪ್ಪ ಬೆಟಗೇರಿ ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಜಗದ್ಗುರು ತೋಂಟದಾರ್ಯ ಪ್ರವಚನ ಸೇವಾ ಸಮಿತಿಯ ಉಪಾಧ್ಯಕ್ಷರಾದ ಪಾಲಾಕ್ಷಿ ಗಡದಿನ್ನಿ, ಡಿ.ಡಿ.ಮೋರನಾಳ, ಕಾರ್ಯದರ್ಶಿ ಸೊಲಬಪ್ಪ ಜೋಬಾಳಿ, ಈಶ್ವರಪ್ಪ ಬೆಟಗೇರಿ, ಕೊಟ್ರೇಶ ಅಂಗಡಿ, ಕೊಟ್ರಯ್ಯ ಅಮರಗೋಳಹಿರೇಮಠ, ದೇವಪ್ಪ ರಾಮೇನಹಳ್ಳಿ, ನಾಗೇಶ ಹುಬ್ಬಳ್ಳಿ, ಆನಂದ ರಾಮೇನಹಳ್ಳಿ, ಸದಾಶಿವಯ್ಯ ಕಬ್ಬೂರಮಠ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.