ಶನಿವಾರ, ಜನವರಿ 18, 2020
19 °C

ವರ್ಧಮಾನ ಪ್ರಶಸ್ತಿಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ಸಾಹಿತಿಗಳಿಗೆ ಮೀಸಲಾದ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಹೊಸ ಪೀಳಿಗೆಯ ಸಾಹಿತಿಗಳಿಗೆ ನೀಡಲಾಗುವ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಕನ್ನಡದ ಎಲ್ಲ ಪ್ರಕಾರದ ಸಾಹಿತ್ಯ ಕೃತಿ ಆಹ್ವಾನಿಸಲಾಗಿದೆ.2006ನೇ ಇಸವಿಯಲ್ಲಿ ಪ್ರಥಮ ಮುದ್ರಣ ಕಂಡ ಕನ್ನಡದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಯನ್ನು ಈ ಪ್ರಶಸ್ತಿಗಳಿಗೆ ಪರಿಗಣಿಸಲಾಗುವುದು. ವರ್ಧಮಾನ ಸಾಹಿತ್ಯ ಪ್ರಶಸ್ತಿಯು ಹಿರಿಯರಿಗೆ ಮೀಸಲಾಗಿದೆ. ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯು ಪ್ರಥಮ, ದ್ವಿತೀಯ ಅಥವಾ ತೃತೀಯ ಕೃತಿಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ತೋರಿದ ಹೊಸ ಪೀಳಿಗೆಯ ಸಾಹಿತಿಗಳಿಗೆ ಮೀಸಲಾಗಿದೆ ಎಂದು ವರ್ಧಮಾನ ಪ್ರಶಸ್ತಿ ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಸಕ್ತರು ಫೆಬ್ರುವರಿ 15ರೊಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕು: ಮುನಿರಾಜ ರೆಂಜಾಳ, ಸಹ ನಿರ್ದೇಶಕರು, ವರ್ಧಮಾನ ಸಾಹಿತ್ಯ ಪ್ರಶಸ್ತಿ ಪೀಠ, ಜೆ.ಜೆ. ಕಾಲೇಜು, ಮೂಡುಬಿದಿರೆ, ದ.ಕ. - 574 227. ಮೊಬೈಲ್ ದೂರವಾಣಿ ಸಂಖ್ಯೆ: 94499 36232.

 

ಪ್ರತಿಕ್ರಿಯಿಸಿ (+)