ಶನಿವಾರ, ಮೇ 28, 2022
26 °C

ವಸತಿ ಅವ್ಯವಹಾರ ತಡೆಗೆ ಜಿಪಿಎಸ್ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಾಣ ಕಾಮಗಾರಿಯಲ್ಲಿ ನಡೆಯುವ ಅವ್ಯವ ಹಾರ, ಅಕ್ರಮ ತಡೆಯುವ ಉದ್ದೆೀಶ ದಿಂದ ಗ್ಲೋಬಲ್ ಪೊಸಿಶನಿಂಗ್ ಸಿಸ್ಟ್‌ಮ್ (ಜಿಪಿಎಸ್) ಅಳವಡಿಸಲು ನಿರ್ಧರಿ ಸಲಾ ದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ತಿಳಿಸಿದರು.ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾ ಪಂಚಾಯಿತಿ, ಜನ ವಿಕಾಸ ಕರ್ನಾಟಕ, ಜಿಲ್ಲಾ ಗ್ರಾ.ಪಂ. ಸದಸ್ಯರ ಒಕ್ಕೂಟದ ಆಶ್ರಯದಲ್ಲಿ ಸೋಮವಾರ ನಡೆದ ಪಂಚಾಯತ್ ರಾಜ್ ಸಬ ಲೀಕರಣ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಸತಿ ಯೋಜನೆಗಳಲ್ಲಿ ಮನೆ ನಿರ್ಮಾಣ ಹಾಗೂ ಪ್ರಗತಿಯಲ್ಲಿ ಸಾಕಷ್ಟು ಅವ್ಯವಹಾರದ ಕೂಗು ಕೇಳಿ ಬರುತ್ತಲಿವೆ. ಇಂತಹ ಅವ್ಯವಹಾರಕ್ಕೆ ಕಡಿವಾಣ ಹಾಕುವ ಉದ್ದೆೀಶದಿಂದ ಅಳವಡಿಸಲಾಗುವ ಜಿಪಿಎಸ್‌ನಿಂದ ಯಾವ ಕಾಮಗಾರಿ ಯಾವ ಹಂತದಲ್ಲಿದೆ ಎಂಬುದರ ಮಾಹಿತಿ ಸಮರ್ಪಕವಾಗಿ ದೊರೆಯಲಿದೆ ಎಂದ ಅವರು, ಮುಂಬ ರುವ ದಿನಗಳಲ್ಲಿ ಈ ವ್ಯವಸ್ಥೆಯನ್ನು ಶೌಚಾಲಯಗಳ ನಿರ್ಮಾಣಕ್ಕೂ ವಿಸ್ತರಿ ಸುವ ಚಿಂತನೆ ನಡೆದಿದೆ ಎಂದರು.ಗ್ರಾ.ಪಂ. ಸದಸ್ಯರು ಗ್ರಾಮಸಭೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಪ್ರತಿ ಹಂತದಲ್ಲಿಯೂ ಆ ಸಭೆಗಳು ಪಾರ ದರ್ಶಕವಾಗಿ ನಡೆಯುವಂತೆ ನೋಡಿ ಕೊಳ್ಳಬೇಕು. ಯಾವುದೇ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯವಾಗಬಾರದು. ಆಗ ಮಾತ್ರ ಗ್ರಾ.ಪಂ. ಹಂತದಿಂದ ಅಭಿವೃದ್ಧಿ ಸಾಧ್ಯ ವಾಗಲಿದೆ ಎಂದು ಹೇಳಿದರು.ಈಗಿರುವ ವ್ಯವಸ್ಥೆಯಲ್ಲಿ ದೊಡ್ಡ ಹಾಗೂ ಸಣ್ಣ ಗ್ರಾ.ಪಂ.ಗಳಿಗೆ ಏಕ ರೂಪದ ಅನುದಾನ ಬಿಡುಗಡೆ ಮಾಡ ಲಾಗುತ್ತದೆ. ಇದು ಸರಿಯಾದ ಕ್ರಮವಲ್ಲ ಎಂದ ಅವರು, ಪಂಚಾಯಿತಿ ಮಟ್ಟದಲ್ಲಿ ಜನಸಂಖ್ಯೆ ಆಧಾರಿತ ಅನುದಾನ ಬಿಡುಗಡೆ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕಿದೆ ಎಂದ ಅವರು, ಚುನಾವಣೆಗಳಿಗೆ ಮಾತ್ರ ಪಕ್ಷ ರಾಜ ಕೀಯ ಮಾಡಬೇಕು. ಚುನಾವಣೆ ಮುಗಿದ ಆಡಳಿತ ಹಾಗೂ ಅಭಿವೃದ್ಧಿ ಯಲ್ಲಿ ರಾಜಕೀಯ ಪ್ರವೇಶ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಜನ ಪ್ರತಿನಿಧಿ ಕರ್ತವ್ಯ ಎಂದು ಹೇಳಿದರು. ಗ್ರಾಪಂ ಸದಸ್ಯರ ಸಂಭಾವನೆ ಹೆಚ್ಚಿಸುವ ಬೇಡಿಕೆ ಸೇರಿದಂತೆ ಗ್ರಾ.ಪಂ. ಸದಸ್ಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. 

ಸಮಾವೇಶದ ಅಧ್ಯಕ್ಷತೆಯನ್ನು ಶಾಸಕ ನೆಹರೂ ಓಲೇಕಾರ್ ವಹಿಸಿ ದ್ದರು.ವಿಧಾನ ಪರಿಷತ್ ಸದಸ್ಯರಾದ ಶಿವರಾಜ ಸಜ್ಜನರ, ಶ್ರೀನಿವಾಸ ಮಾನೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ತಳವಾರ, ಉಪಾಧ್ಯಕ್ಷೆ ಪಾರ್ವತಿ ಬೋಗಾವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಮೇಶ ಕುಸುಗಲ್, ಅಪರ ಜಿಲ್ಲಾಧಿಕಾರಿ ಜೆ.ಜಗದೀಶ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಾ.ವಿ. ಎಸ್.ಮರಗಬ್ಬಿನ, ಉಪಾಧ್ಯಕ್ಷೆ ಗಂಗವ್ವ ಹಿತ್ತಲಮನಿ, ಗ್ರಾ.ಪಂ. ಸದಸ್ಯರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಗಣೇಶ ಕುಲಕರ್ಣಿ, ಜಿ.ಪಂ. ಸದಸ್ಯರಾದ ಪದ್ಮನಾಭ ಕುಂದಾಪುರ, ಬಸವರಾಜ ಬೇವಿನಹಳ್ಳಿ, ಶಶಿಧರ ಹೊನ್ನಣ್ಣನವರ, ಬಿ.ಟಿ.ಇನಾಮತಿ, ವಿರೂಪಾಕ್ಷಪ್ಪ ಬಳ್ಳಾರಿ, ಅಸುಂಡಿ ಗ್ರಾ.ಪಂ. ಅಧ್ಯಕ್ಷ ಪರಮೇಶಪ್ಪ ಗೊಡ್ಡೆಮ್ಮಿ  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಜಿ.ಪಂ. ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ಸ್ವಾಗತಿಸಿದರು. ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿ ಐ.ಎ.ಲೋಕಾಪುರ ನಿರೂಪಿಸಿದರು.

`ಬ್ಯಾಂಕ್ ಖಾತೆಗೆ ಯಾವುದೇ ಭದ್ರತೆ ಬೇಕಿಲ್ಲ~

ಹಾವೇರಿ: `ಗ್ರಾಮೀಣ ಪ್ರದೇಶದಲ್ಲಿ ಗುಡಿ ಕೈಗಾರಿಕೆಗಾಗಿ 10 ಸಾವಿರ ರೂ. ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕಾಗಿ ಬ್ಯಾಂಕುಗಳಲ್ಲಿ ಖಾತೆ ತೆರೆಯಲು ಯಾವುದೇ ರೀತಿಯ ಭದ್ರತೆ ಕೊಡುವ ಅಗತ್ಯವಿಲ್ಲ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ತಿಳಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರವು ಗ್ರಾಮಾಂತರ ಪ್ರದೇಶದ ಪ್ರತಿ ಕುಟುಂಬವು ಶೂನ್ಯ ಠೇವಣಿಯೊಂದಿಗೆ ಬ್ಯಾಂಕ್ ಖಾತೆಯನ್ನು ಹೊಂದಿರ ಬೇಕೆಂಬ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಅದೇ ರೀತಿ ರೂ. 10 ಸಾವಿರ ವರೆಗಿನ ಸಾಲ ಸೌಲಭ್ಯ ಪಡೆಯಲು ಭದ್ರತೆ ಇಲ್ಲದೇ ಖಾತೆ ತೆರೆಯುವ ಯೋಜನೆಯೊಂದು ಶೀಘ್ರದಲ್ಲಿ ಜಾರಿಗೊಳ್ಳಲಿದೆ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.