ಮಂಗಳವಾರ, ಜೂನ್ 22, 2021
22 °C

ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೀಸಾವೆ: ಹೋಬಳಿಯ ಹೆಗ್ಗಡೀಹಳ್ಳಿ ಬಳಿ ಕಿತ್ತೂರು ರಾಣಿ ಚನ್ನಮ್ಮವಸತಿ ಶಾಲೆಯ ನಿರ್ಮಾಣಕ್ಕೆ ಶಾಸಕ ಸಿ.ಎಸ್. ಪುಟ್ಟೇಗೌಡ ಅವರು ಬುಧವಾರ ಚಾಲನೆ ನಿಡಿದರು.  ನಂತರ ಆವರು ಮಾತನಾಡಿ, ಗ್ರಾಮದ ತಿಮ್ಮೇಗೌಡ ಮತ್ತು ಗವಿಯಪ್ಪರವರುಗಳು ಬೂಕನ ಬೆಟ್ಟದ ತಪ್ಪಲಿನಲ್ಲಿ 5 ಎಕರೆ ಭೂಮಿಯನ್ನು ಶಾಲೆ ನಿರ್ಮಾಣಕ್ಕೆ ದಾನವಾಗಿ ನೀಡಿದ್ದಾರೆ,  ರೂ. 497 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ, ಹೆಣ್ಣುಮಕ್ಕಳ ವಸತಿ ಗೃಹ, ಶಿಕ್ಷಕರ ಮತ್ತು ಸಿಬ್ಬಂದಿ ವಸತಿ ಗೃಹಗಳು, ಆಡುಗೆ ಮನೆ, ಆಟದ ಮೈದಾನ ಮತ್ತು ಇತರೆ ಸೌಲಭ್ಯಗಳನ್ನು ನಿರ್ಮಿಸಲಾಗುವುದು ಎಂದರು.

 

ಬೂಕನ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯವು ನಡೆಯುತ್ತಿದ್ದು, ಒಂದೆ ದಿನ ಎರಡನ್ನು ಉದ್ಘಾಟಿಸಲಾಗು ವುದು ಮತ್ತು ದಾನಿಗಳನ್ನು ಸನ್ಮಾನಿ ಸಲಾಗುವುದು ಎಂದು ಹೇಳಿದರು. ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಮಾತನಾಡಿದರು.

 ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಡಿ.ಕಿಶೋರ್, ಡಿ.ಜಿ.ಅಂಬಿಕಾ ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅಣತಿ ಚಂದ್ರಶೇಖರ್, ಎಂ.ಕೆ.ಮಂಜೇಗೌಡ, ಹೆಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಶ್ರೀಕಂಠಪ್ಪ ಮಾತನಾಡಿದರು. ತಾ. ಪಂ. ಅಧ್ಯಕ್ಷೆ ರಂಗಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕುಮಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ನಿಂಗರಾಜಪ್ಪ ಹೆ.ಸ.ಸ ಕಾರ್ಖಾನೆಯ ನಿರ್ದೇಶಕ ತೊಟಿ ಜಯರಾಮ್,ಎಂಜಿಯರ್ ಪವಿತ್ರ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.