ಚನ್ನಪಟ್ಟಣ: ತಾಲ್ಲೂಕಿನ ಸಂತೆಮೊಗೇ ನಹಳ್ಳಿ ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸುವಂತೆ ಶಾಸಕ ಸಿ.ಪಿ.ಯೋಗೇಶ್ವರ್ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ನಾಟೇಕರ್ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ತಾಕೀತು ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕಿನ ಸಂತೆಮೊ ಗೇನಹಳ್ಳಿ ಗ್ರಾಮದ ಕುಡಿ ಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಗುರುವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅಧಿಕಾರಿಗಳು ಏನು ಮಾಡುತ್ತಿದ್ದಿರಿ ಎಂದು ಖಾರವಾಗಿ ಪ್ರಶ್ನಿಸಿದರು.

ಸಂದರ್ಭದಲ್ಲಿ ಜಿ.ಪಂ. ಎಂಜಿನಿಯರ್ ನಾಟೇಕರ್ ಮಾತ ನಾಡಿ, ಗ್ರಾಮ ದಲ್ಲಿ ಕಳೆದ ವರ್ಷದಿಂದ ಇಲ್ಲಿಯ ವರೆಗೆ ಸುಮಾರು 26 ಬೋರ್ ವೆಲ್ಗಳನ್ನು ಕೊರೆದಿದ್ದ ರೂ ಯಾವು ದರಲ್ಲೂ ನೀರು ಸಿಕ್ಕಿಲ್ಲ. ಎರಡು ವರ್ಷ ಗಳಿಂದ ಸತತ ಪ್ರಯತ್ನ ಮಾಡುತ್ತಿ ದ್ದರೂ ಗ್ರಾಮಕ್ಕೆ ನೀರು ಪೂರೈಸಲು ಸಾಧ್ಯಾಗುತ್ತಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿ ಕೊಂಡರು.

ಎಲ್ಲೆಂದರಲ್ಲಿ ಬೋರ್ವೆಲ್ ಕೊರೆದರೆ ನೀರು ಬರುತ್ತದೆಯೆ? ಎಂದು ಯೋಗೇಶ್ವರ್ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಪವಿತ್ರ ಕೃಷ್ಣೇಗೌಡ, ಹೊಂಗನೂರು ತಾ.ಪಂ ಸದಸ್ಯೆ ಪವಿತ್ರ, ತಹಸೀಲ್ದಾರ್ ಶಿವರು ದ್ರಪ್ಪ, ತಾ.ಪಂ.ಕಾರ್ಯನಿರ್ವಹಣಾ ಧಿಕಾರಿ ಜಯರಂಗ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.