ವಾರ್ಡನ್ ನೇಮಕ: ಕೆಪಿಎಸ್‌ಸಿ ಸ್ಪಷ್ಟನೆ

7

ವಾರ್ಡನ್ ನೇಮಕ: ಕೆಪಿಎಸ್‌ಸಿ ಸ್ಪಷ್ಟನೆ

Published:
Updated:

ಕರ್ನಾಟಕ ಲೋಕಸೇವಾ ಆಯೋಗವು ದಿ. 6.9.2010ರ ಅಧಿಸೂಚನೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಹಾಸ್ಟೆಲ್ ವಾರ್ಡನ್ (ನಿಲಯ ಮೇಲ್ವಿಚಾರಕರ) ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.ಈ ಎರಡೂ ಹುದ್ದೆಗಳಿಗೆ ಒಂದೇ ವಿದ್ಯಾರ್ಹತೆ ಹಾಗೂ ಪಠ್ಯಕ್ರಮ ನಿಗದಿಪಡಿಸಿರುವುದರಿಂದ ಒಂದೇ ದಿನ ಪರೀಕ್ಷೆಯನ್ನು ನಿಗದಿಪಡಿಸಿದೆ. ಅಭ್ಯರ್ಥಿಗಳು ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೂ ಒಂದೇ ನೋಂದಣಿ ಸಂಖ್ಯೆಯನ್ನು ನೀಡಲಾಗಿ ಈ ನೋಂದಣಿ ಸಂಖ್ಯೆಯ ಫಲಿತಾಂಶವನ್ನು ಎರಡು ಹುದ್ದೆಗಳಿಗೆ ಪರಿಗಣಿಸಲಾಗುವುದೆಂದೂ ಪ್ರವೇಶ ಪತ್ರದಲ್ಲಿ ಸೂಚನೆಗಳನ್ನು ನೀಡಲಾಗಿದೆ. ಆದರೂ ಕೆಲವು ಅಭ್ಯರ್ಥಿಗಳು ಎರಡು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿ ಒಂದು ಅರ್ಜಿಯಲ್ಲಿ ಹೆಸರು, ತಂದೆ-ತಾಯಿ ಹೆಸರು, ಜನ್ಮದಿನಾಂಕ ಹಾಗೂ ವಿಳಾಸವನ್ನು ತಪ್ಪಾಗಿ  ಭರ್ತಿ ಮಾಡಿರುವುದರಿಂದ ಇಂತಹ ಅಭ್ಯರ್ಥಿಗಳಿಗೆ ಎರಡು ನೋಂದಣಿ ಸಂಖ್ಯೆಗಳನ್ನು ನೀಡಲಾಗಿದ್ದು ಪ್ರತ್ಯೇಕವಾಗಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡಿರುತ್ತಾರೆ. ಇಂತಹ ಅಭ್ಯರ್ಥಿಗಳು ಒಂದೇ ನೋಂದಣಿ ಸಂಖ್ಯೆಯಡಿ ಪರೀಕ್ಷೆಯನ್ನು ಬರೆಯಲು ಸೂಚಿಸಿ ಇದರ ಫಲಿತಾಂಶವನ್ನು ಎರಡೂ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆಯೆಂದು ತಿಳಿಸಲಾಗಿದೆ. ಆದ್ದರಿಂದ ಎರಡು ಪ್ರವೇಶ ಪತ್ರ ಜಾರಿಯಾಗಲು ಅಭ್ಯರ್ಥಿಗಳೇ ಕಾರಣರಾಗಿರುತ್ತಾರೆ.

.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry